ಸಿಬ್ಬಂದಿಗಳ ಕಷ್ಟ ಅರಿಯಲು ಫೀಲ್ಡಿಗಿಳಿದ ಎಸ್ಪಿ

Spread the love

ಹಾಸನ, ಆ.16- ಇತ್ತೀಚಿನ ದಿನಗಳಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಚಾಕು ಇರಿತದಂತ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಲು ಆಗುತ್ತಿರುವ ಸಮಸ್ಯೆಯನ್ನು ಸ್ವತಃ ಪರೀಕ್ಷಿಸಲು ಎಸ್ಪಿ ಶ್ರೀನಿವಾಸಗೌಡ ಏಕಾಏಕಿ ರಸ್ತೆಗಿಳಿದು ಪರಿಶೀಲನೆ ನಡೆಸಿದರು.

ಕೆಲವು ದಿನಗಳ ಹಿಂದೆ ಚನ್ನರಾಯಪಟ್ಟಣ ಟೌನ್ ಠಾಣೆಯ ಪಿಎಸ್‍ಐ ಕಿರಣ್‍ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದರು. ಅವರು ಆತ್ಮಹತ್ಯೆಗೆ ಶರಣಾಗಲು ಚನ್ನರಾಯ ಪಟ್ಟಣ ವ್ಯಾಪ್ತಿಯಲ್ಲಿ ನಡೆದ ಎರಡು ಕೊಲೆಗಳು, ಕೆಲಸದ ಒತ್ತಡ ಎಂಬ ಆರೋಪ ಕೇಳಿ ಬಂದಿತ್ತು.

ಈ ಹಿನ್ನೆಲೆಯಲ್ಲಿ ಚನ್ನರಾಯಪಟ್ಟಣದಲ್ಲಿ ತಮ್ಮ ಸಿಬ್ಬಂದಿ ಕೆಲಸ ನಿರ್ವಹಿಸಲು ಆಗುತ್ತಿರುವ ಸಮಸ್ಯೆಯನ್ನು ಸ್ವತಃ ಪರಿಶೀಲಿಸಲು ಎಸ್ಪಿ ಶ್ರೀನಿವಾಸಗೌಡ ಏಕಾಏಕಿ ರಸ್ತೆಗಿಳಿದು ಪಟ್ಟಣ ಸಂಚಾರ ಮಾಡಿದ್ದಾರೆ. ಈ

ವೇಳೆ ನಿಯಮ ಮೀರಿ ಮಧ್ಯ, ಸಿಗರೇಟ್ ಮಾರುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಸಿಬ್ಬಂದಿಗೆ ಸೂಚಿಸಿದ್ದಾರೆ. ಯಾರ ಒತ್ತಡಕ್ಕೂ ಮಣಿಯದೆ ಕೆಲಸ ಮಾಡಲು ನಮ್ಮ ಪೊಲೀಸರಿಗೆ ಸೂಚಿಸಿದ್ದು ಅವರ ಜೊತೆ ನಾವು ಇರಲಿದ್ದೇವೆ ಎಂದು ಎಸ್ಪಿ ತಿಳಿಸಿದ್ದಾರೆ.

Facebook Comments

Sri Raghav

Admin