ನುಡಿಜಾತ್ರೆಗೆ ನವ ವಧುವಿನಂತೆ ಸಿಂಗಾರಗೊಂಡ ಏಲಕ್ಕಿ ನಗರಿ ಹಾವೇರಿ

Social Share

ಹಾವೇರಿ, ಜ.5- ಏಲಕ್ಕಿ ನಗರ ಹಾವೇರಿ ನವ ವಧುವಿನಂತೆ ಸಿಂಗಾರಗೊಂಡಿದೆ. ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ 86ನೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಅಕ್ಷರಜಾತ್ರೆಗೆ ನಗರಾದ್ಯಂತ ಕನ್ನಡದ ಬಾವುಟಗಳು ರಾರಾಜಿಸುತ್ತಿವೆ.

ಮೈಸೂರು ದಸರಾ ಮಾದರಿಯಲ್ಲಿ ವಿದ್ಯುತ್ ಅಲಂಕಾರ ಮಾಡಲಾಗಿದ್ದು, ಹಾವೇರಿ ನಗರ ನಿನ್ನೆಯಿಂದಲೇ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ. ನಗರದ ಎಲ್ಲ ವೃತ್ತಗಳು, ಪ್ರಮುಖ ದ್ವಾರ, ಬಸ್ ನಿಲ್ದಾಣ, ಉದ್ಯಾನವನ ಸೇರಿದಂತೆ ಎಲ್ಲ ಕಡೆ ಹೂವಿನ ಅಲಂಕಾರ ಮಾಡಲಾಗಿದೆ. ಕನ್ನಡದ ಕೀರ್ತಿ ಪತಾಕೆ ಸಾರುವಂತಹ ಬರಹಗಳು ರಾರಾಜಿಸುತ್ತಿವೆ.

ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಗಣ್ಯರಿಗೆ ಸ್ವಾಗತ ಕೋರುವ ದೊಡ್ಡದೊಡ್ಡ ಕಮಾನುಗಳ ಜತೆ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿಗಳ ಕಟೌಟ್‍ಗಳು, ಭಾವಚಿತ್ರಗಳನ್ನು ಹಾಕಲಾಗಿದೆ.

ಒತ್ತಡ ನಿಭಾಯಿಸಲಾಗದೆ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ

ಪ್ರಮುಖ ಬೀದಿಗಳ ಅಂಗಡಿ-ಮುಂಗಟ್ಟುಗಳ ಮೇಲೆ ಹಳದಿ, ಕೆಂಪು ಬಣ್ಣದ ಬಾವುಟಗಳು ರಾರಾಜಿಸುತ್ತಿವೆ. ಕೆಲವೆಡೆ ಜಿಲ್ಲಾಡಳಿತ ಕನ್ನಡದ ಧ್ವಜಗಳನ್ನು ಹಾಕಿದರೆ, ಮತ್ತೆ ಕೆಲವರು ಸ್ವಯಂಪ್ರೇರಿತರಾಗಿ ತಮ್ಮ ಮನೆ, ಅಂಗಡಿಗಳ ಮೇಲೆ ಧ್ವಜಗಳನ್ನು ಹಾರಿಸಿದ್ದಾರೆ.

ಈ ಭಾಗದಲ್ಲಿ ಸಾಗಿಬರುವ ಬಸ್, ಲಾರಿ, ಕಾರು, ಬೈಕ್‍ಗಳು, ಆಟೋ ಎಲ್ಲ ವಾಹನಗಳ ಮೇಲೂ ಕನ್ನಡದ ಧ್ವಜ ಹಾಕಿಕೊಂಡು ನುಡಿಹಬ್ಬದ ವೈಭವವನ್ನು ಮೆರೆಸುತ್ತಿದ್ದಾರೆ. ವೈಭವದ ಮೆರವಣಿಗೆ: ಈ ಬಾರಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅತ್ಯಂತ ವೈಭವಯುತವಾಗಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಅರಮನೆ ದರ್ಬಾರ್ ಮಾದರಿಯಲ್ಲಿ ಭವ್ಯ ರಥ ನಿರ್ಮಾಣವಾಗಿದೆ. ಮೆರವಣಿಗೆಗಾಗಿ 15 ಸಾವಿರ ಕನ್ನಡದ ಧ್ವಜ, 10 ಸಾವಿರ ಶಲ್ಯಗಳನ್ನು ಸಿದ್ಧಪಡಿಸಲಾಗಿದೆ. ಈ ಮೆರವಣಿಗೆಯಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಎಲ್ಲರಿಗೂ ಬ್ಯಾಡ್ಜ್, ಐಡಿ ಕಾರ್ಡ್‍ಗಳನ್ನು ನೀಡಲಾಗಿದೆ.

ಒಟ್ಟಾರೆ ಹಾವೇರಿಯಲ್ಲಿ ಕನ್ನಡದ ಹಬ್ಬ ಮನೆ ಮಾಡಿದೆ. ನಾಳೆ ಉತ್ಸವದಲ್ಲಿ ಪಾಲ್ಗೊಳ್ಳುವ ಜಾನಪದ ಕಲಾತಂಡಗಳು ಈಗಾಗಲೇ ಹಾವೇರಿಯನ್ನು ತಲುಪಿವೆ. ನಾಡಿನ ಕಲೆ, ಸಂಸ್ಕøತಿಯನ್ನು ಬಿಂಬಿಸುವಂತಹ ನಂದಿ ಧ್ವಜ ಕುಣಿತ, ಪೂಜಾ ಕುಣಿತ, ಕಂಸಾಳೆ, ಡೊಳ್ಳು, ವೀರಗಾಸೆ, ಜಗ್ಗಲಗಿ, ಕೋಲಾಟ, ಮಹಿಳೆಯರ ವೀರಗಾಸೆ ಸೇರಿದಂತೆ ನೂರಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಕಲಾ ಪ್ರದರ್ಶನ ನಡೆಸಲಿವೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆಯೊಂದಿಗೆ 31 ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆತರಲು 12 ಸಾರೋಟುಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಸಾರೋಟಿನಲ್ಲಿ ಮೂವರು ಅಧ್ಯಕ್ಷರನ್ನು ಕೂರಿಸಿ ಮೆರವಣಿಗೆಯಲ್ಲಿ ಕರೆತರುವ ವ್ಯವಸ್ಥೆ ಮಾಡಲಾಗಿದೆ.ಉತ್ತರ ಕರ್ನಾಟಕ ಭಾಗದ ಕಲಾ ಪ್ರಾಧಿಕಾರಗಳಿಗೆ ಹೆಚ್ಚಿನ ಆದ್ಯತೆ ಜತೆಗೆ ರಾಜ್ಯದ ಜಾನಪದ ಕಲಾತಂಡಗಳಿಗೂ ಆದ್ಯತೆ ನೀಡಲಾಗಿದೆ. ಬೇರೆ ಬೇರೆ ಜಿಲ್ಲೆಗಳ ಕಲಾವಿದರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

haveri, kannada, sahitya sammelana,

Articles You Might Like

Share This Article