ಪಂಜಾಬ್‍ನಲ್ಲಿ ಹೃದಯಾಘಾತದಿಂದ ಹಾವೇರಿ ಯೋಧ ನಿಧನ

Social Share

ಹಾವೇರಿ,ಜು.23- ಪಂಜಾಬ್‍ನ ಪಠಾಣ್‍ಕೋಟ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾವೇರಿ ಮೂಲದ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ತಾಲ್ಲೂಕಿನ ಕೆ.ಬಿ.ತಿಮ್ಮಾಪುರ ಗ್ರಾಮದ ಸುತ್ತೂರು ಮಠ(40) ಮೃತಪಟ್ಟ ಯೋಧ. ಇವರ ಪಾರ್ಥೀವ ಶರೀರವನ್ನು ಇಂದು ಹುಟ್ಟೂರಿಗೆ ತರಲಾಗುತ್ತಿದ್ದು, ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು.

ಬಿಎಸ್‍ಎಫ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನಯ್ಯ ಜುಲೈ 21ರ ಮುಂಜಾನೆ ಮೃತಪಟ್ಟಿದ್ದರು. ಇಂದು ಅವರ ಮೃತದೇಹ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಅಂತ್ಯಸಂಸ್ಕಾರ ನೆರವೇರಲಿದೆ. ಯೋಧನ ಕಳೆದುಕೊಂಡ ಹುಟ್ಟೂರಲ್ಲಿ ನೀರವ ಮೌನ ಆವರಿಸಿದೆ.

Articles You Might Like

Share This Article