ಹೊನಲುಲು(ಅಮೆರಿಕ),ಮಾ.9- ಅಮೆರಿಕದ ಹವಾಯಿ ರಾಜ್ಯಾದ್ಯಂತ ಮಾ.26ರಿಂದ ಮನೆಯೊಳಗೆ ಮಾಸ್ಕ್ ಹಾಕುವುದಕ್ಕೆ ಗುಡ್ ಬೈ ಹೇಳಲು ನಿರ್ಧರಿಸಲಾಗಿದೆ. ಮಾ.26ರೊಳಗೆ ಮಾಸ್ಕ್ ಆದೇಶವನ್ನು ತೆಗೆದು ಹಾಕಲಾಗುವುದು ಎಂದು ಹವಾಯಿ ಗೌರ್ನರ್ ಡೇವಿಡ್ ಇಗೆ ಘೋಷಿಸಿದ್ದಾರೆ.
ಮಾ.25ರ ರಾತ್ರಿ 11.59ರ ನಂತರ ರಾಜ್ಯದ ಯಾವುದೇ ಮನೆಯೊಳಗೆ ಮಾಸ್ಕ್‍ಗಳ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಬಹುತೇಕ ಕೋವಿಡ್ ಪ್ರಕರಣಗಳ ಸಂಖ್ಯೆ ಕ್ಷೀಣಿಸಿದೆ. ನಿನ್ನೆ 48 ಕೋವಿಡ್ ರೋಗಿಗಳು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೇಸಿಗೆಯ ನಂತರ ಈ ಸಂಖ್ಯೆ 50ಕ್ಕಿಂತ ಕಡಿಮೆ ಇರುವುದು ಇದೇ ಮೊದಲು. ಪ್ರಕರಣಗಳು ಇಳಿಮುಖವಾಗುತ್ತಿರುವುದು ಮುಂದುವರೆದಿದೆ. ಏಪ್ರಿಲ್ 2020ರಿಂದ ಹವಾಯಿ ರಾಜ್ಯಕ್ಕೆ ಫೇಸ್ ಮಾಸ್ಕ್ ಅಗತ್ಯವಿತ್ತು. ಆಗ ಮನೆ ಮತ್ತು ಹೊರಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು ಎಂದು ಇಗೆ ಹೇಳಿದ್ದಾರೆ.
ಮಾ.25ರಂದು ದ್ವೀಪಗಳಿಗೆ ಆಗಮಿಸುವ ಪ್ರಯಾಣಿಕರು ಇನ್ನು ಮುಂದೆ ಲಸಿಕೆಯ ಪ್ರಮಾಣ ಪತ್ರ ಅಥವಾ ಕ್ವಾರಂಟೈನ್ ತಪ್ಪಿಸಲು ಕೋವಿಡ್ ವರದಿ ತೋರಿಸಬೇಕಾಗಿ ಈ ನಿಯಮಗಳನ್ನು ಹವಾಯಿ ರಾಜ್ಯದಲ್ಲಿ ಸಡಿಲಗೊಳಿಸಲಾಗಿದೆ ಎಂದಿದ್ದಾರೆ.
ಕಿರಾಣಿ ಅಂಗಡಿಯಲ್ಲಿರುವಾಗ ಮಾಸ್ಕ್ ಕಡ್ಡಾಯವಲ್ಲದಿದ್ದರೂ ಸಹ ನಾವು ಮಾಸ್ಕ್ ಧರಿಸುವುದನ್ನು ಮುಂದುವರೆಸುವುದಾಗಿ ಹವಾಯಿ ನಿವಾಸಿಯೊಬ್ಬರು ಹೇಳಿದ್ದಾರೆ. ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳಲು ನಾವು ಮಾಸ್ಕ್ ಧಾರಣೆಯನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.
