ನವದೆಹಲಿ,ಫೆ.22- ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009ರ ಕೆಲವು ಅಂಶಗಳು ಏಕಪಕ್ಷೀಯ ಮತ್ತು ಅತಾರ್ಕಿಕವಾಗಿದ್ದು ದೇಶಾದ್ಯಂತ ಮಕ್ಕಳಿಗೆ ಏಕರೂಪದ ಪಠ್ಯಕ್ರಮ ಪರಿಚಯಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯ ಕುರಿತು ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಇಂದು ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರದ ಶಿಕ್ಷಣ, ಕಾನೂನು ಮತ್ತು ನ್ಯಾಯ ಹಾಗೂ ಗೃಹ ವ್ಯವಹಾರಗಳ ಸಚಿವಾಲಯಗಳಿಗೆ ನೋಟಿಸ್‍ಗಳನ್ನು ನೀಡಿ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾ.30ಕ್ಕೆ ನಿಗದಿಪಡಿಸಿತು.
ಆರ್‌ಟಿಇ ಅಧಿನಿಯಮದ ಸೆಕ್ಷನ್1(4) ಮತ್ತು 1(5) ಹಾಗೂ ಮಾತೃಭಾಷೆಯಲ್ಲಿ ಏಕರೂಪದ ಪಠ್ಯಕ್ರಮದ ಅನುಪಸ್ಥಿತಿ ಅಜ್ಞಾನದ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಮೂಲಭೂತ ಕರ್ತವ್ಯಗ¼ ಅನುಷ್ಠಾನವನ್ನು ವಿಳಂಬಗೊಳಿಸುತ್ತದ ಎಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು.
ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವುದು ಕೇಂದ್ರದ ಮೂಲಭೂತ ಕರ್ತವ್ಯ. ಆದರೆ ಇದರಲ್ಲಿ ಸಂಪುರ್ಣ ವಿಫಲವಾಗಿರುವ ಕೇಂದ್ರ ಸರ್ಕಾರ ಅತ್ಯಂತ ಹಳೆಯದಾದ 2005ರ ಈ ಮುಂಚಿನ ರಾಷ್ಟ್ರೀಯ ಪಠ್ಯಕ್ರಮ ಕಾರ್ಯರ್ಕ ಚೌಕಟ್ಟನ್ನೇ ಅಳವಡಿಸಿಕೊಂಡಿದೆ ಎಂದು ಅರ್ಜಿದಾರರಾದ ಅಶ್ವಿನಿ ಉಪಾಧ್ಯಾಯ ಹೇಳಿದರು.
