Friday, October 4, 2024
Homeಆರೋಗ್ಯ / ಜೀವನಶೈಲಿಕ್ಯಾನ್ಸರ್‌ಕಾರಕ ಗಡ್ಡೆ ಪತ್ತೆಗೂ ಬಂದಿದೆ ಎಐ ಚಾಲಿತ ಸೈಬರ್‌ನೈಫ್‌-ಎಸ್7 ಸಿಸ್ಟಮ್‌

ಕ್ಯಾನ್ಸರ್‌ಕಾರಕ ಗಡ್ಡೆ ಪತ್ತೆಗೂ ಬಂದಿದೆ ಎಐ ಚಾಲಿತ ಸೈಬರ್‌ನೈಫ್‌-ಎಸ್7 ಸಿಸ್ಟಮ್‌

ಬೆಂಗಳೂರು: ವೈದ್ಯಕೀಯ ಲೋಕದಲ್ಲೂ ಎಐ ಪಾದಾರ್ಪಣೆ ಮಾಡಿದ್ದು, ಅದರ ಭಾಗವಾಗಿ ಇದೀಗ ಕ್ಯಾನ್ಸರ್‌ಕಾರ ಗಡ್ಡೆಯನ್ನು ನಿಖರವಾಗಿ ಪತ್ತೆ ಹಚ್ಚಲು ಸೈಬರ್‌ನೈಫ್‌-ಎಸ್7 ಎಂಬ ಎಐ ಚಾಲಿತ ಸಿಸ್ಟಮ್‌ನನ್ನು ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ದೇಶದಲ್ಲೇ ಮೊದಲ ಬಾರಿಗೆ ಅನಾವರಣಗೊಳಿಸಿದೆ.

ಈ ಕುರಿತು ಮಾತನಾಡಿದ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಬಿ.ಎಸ್‌. ಅಜಯ್‌ ಕುಮಾರ್, ವೈದ್ಯಕೀಯ ಲೋಕದಲ್ಲಿ ಎಐನ ಅವಶ್ಯಕತೆ ಇದೆ. ಹೀಗಾಗಿ ನಮ್ಮ ಸಂಸ್ಥೆ ಕ್ಯಾನ್ಸರ್‌ ಗಡ್ಡೆಯನ್ನು ಯಾವುದೇ ಅಂಗದಲ್ಲಿದ್ದರೂ ಅದನ್ನು ನಿಖರವಾಗಿ ಕಂಡು ಹಿಡಿಯಲು ಎಐನನ್ನು ಅಳವಡಿಸಿಕೊಂಡಿದೆ. ಕ್ಯಾನ್ಸರ್‌ ಗಡ್ಡೆಯನ್ನು ಪತ್ತೆಹಚ್ಚಲು ಸೈಬರ್‌ನೈಫ್‌ ಎಂಬ ತಂತ್ರಜ್ಞಾನ ಪ್ರಸ್ತುತ ಚಾಲ್ತಿಯಲ್ಲಿದೆ, ಇದರ ನವೀಕೃತ ಆವೃತ್ತಿಯನ್ನು ಇದೀಗ ಬಿಡುಗಡೆ ಮಾಡಲಾಗಿದೆ.

ಈ ನೂತನ ಎಐ ಚಾಲಿನ ಸೈಬರ್‌ನೈಫ್‌ -ಎಸ್ 7 ಕ್ಯಾನ್ಸರ್‌ಕಾರ ಗಡ್ಡೆ ಹಾಗೂ ಕ್ಯಾನ್ಸರ್‌ ಅಲ್ಲದ ಗಡ್ಡೆಗಳನ್ನು ಸಹ ನಿಖರವಾಗಿ ಗುರುತಿಸಿ ಅದನ್ನು ತೆಗೆದುಹಾಕುವಲ್ಲಿ ಹೆಚ್ಚು ಅತ್ಯಾಧುನಿಕವಾಗಿ ಸಹಕರಿಸಲಿದೆ. ಪ್ರಮುಖವಾಗಿ ಮೆದುಳು, ಶ್ವಾಸಕೋಶ, ಬೆನ್ನುಮೂಳೆ, ಪ್ರಾಸ್ಟೇಟ್ ಮತ್ತು ಹೊಟ್ಟೆ ಸೇರಿದಂತೆ ದೇಹದ ಯಾವುದೇ ಅಂಗದಲ್ಲಿ ಗೆಡ್ಡೆ ಬೆಳೆದಿದ್ದರೂ ಸುಲಭವಾಗಿ ಪತ್ತೆಹಚ್ಚಿ, ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಬಹುದು. ಅಷ್ಟೇಅಲ್ಲದೆ, ಇದು ಮೊದಲ ಪ್ರಯತ್ನದಲ್ಲಿಯೇ ಫಲಿತಾಂಶ ಸಿಗಲಿದ್ದು, ಹೆಚ್ಚು ಸಮಯ ತೆಗೆದುಕೊಳ್ಳದೇ ಶಸ್ತ್ರಚಿಕಿತ್ಸೆ ನಡೆಸಬಹುದು. ಈ ಹಿಂದೆ ಚಾಲ್ತಿಯಲ್ಲಿದ್ದ ಸೈಬರ್‌ ನೈಫ್‌ನ ಮೂಲಕ 7,500ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

RELATED ARTICLES

Latest News