ಬೆಂಗಳೂರು, ಸೆ.25-ಜಾತ್ಯತೀತ ಜನತಾದಳದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ- ರೇವತಿ ದಂಪತಿಯ ಪುತ್ರ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕರಾದ ಅನಿತಾ ಕುಮಾರಸ್ವಾಮಿಯವರ ಮೊಮ್ಮಗ ಚಿ.ಅವ್ಯಾನ್ ದೇವ್‍ನ ಮೊದಲ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು.
ನಿಖಿಲ್ ಕುಮಾಸ್ವಾಮಿ ಅವರು ಕುಟುಂಬ ಸಮೇತವಾಗಿ ರಾಮನಗರದ ಚಾಮುಂಡೇಶ್ವರಿ ಅಮ್ಮನವರ ಸನ್ನಿಧಾನಕ್ಕೆ ಹಾಗೂ ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಮಗುವಿನ ಹೆಸರಿನಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ಬಳಿಕ ಅಲ್ಲಿಯೇ ಅಭಿಮಾನಿಗಳು ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಜನ್ಮದಿನದ ಕೇಕ್ ಕತ್ತರಿಸಿ ಮಗುವಿಗೆ ಶುಭ ಹಾರೈಸಿದರು. ನಂತರ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ನಿವಾಸದಲ್ಲಿ ಕೇಕ್ ಕತ್ತರಿಸಿ ಚಿ.ಅವ್ಯಾನ್ ದೇವ್ ಜನ್ಮದಿನವನ್ನು ಕುಟುಂಬ ಸದಸ್ಯರೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್.ಡಿ.ದೇವೇಗೌಡರು ಮತ್ತು ಚೆನ್ನಮ್ಮ ದೇವೇಗೌಡರು ಮರಿ ಮೊಮ್ಮಗನನ್ನು ಆಶೀರ್ವದಿಸಿದರು.