8 ಮಂದಿ ಡಿಸಿಎಂ ಮಾಡುವ ಬಗ್ಗೆ ದೆಹಲಿಯಲ್ಲಿ ಬಿಜೆಪಿ ಸಭೆ : ಹೆಚ್‌ಡಿಕೆ

Social Share

ಬೆಂಗಳೂರು,ಫೆ.5- ಎಂಟು ಮಂದಿ ಉಪಮುಖ್ಯಮಂತ್ರಿ ಮಾಡುವ ಬಗ್ಗೆ ದೆಹಲಿಯಲ್ಲಿ ಸಭೆ ಮಾಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪಂಚರತ್ನ ರಥಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಂಟು ಜನ ಉಪಮುಖ್ಯಮಂತ್ರಿ ಆಗುವವರು ಯಾರು ಎಂಬ ಹೆಸರನ್ನು ಬಹಿರಂಗಪಡಿಸಬಲ್ಲೆ ಎಂದರು.

ದೇಶವನ್ನು ಹಾಳು ಮಾಡುವ ಬಿಜೆಪಿಯ ಹುನ್ನಾರ, ಆರ್‍ಎಸ್‍ಎಸ್ ಕುತಂತ್ರಕ್ಕೆ ಬಲಿಯಾಗಬೇಡಿ. ಶೃಂಗೇರಿ ಮಠವನ್ನು ಒಡೆದವರು, ಮಹಾತ್ಮ ಗಾಂಯವರನ್ನು ಕೊಂದವರು, ಪೇಶ್ವೆ ಸಮುದಾಯಕ್ಕೆ ಸೇರಿದವರು ಹೀಗೆ ಎರಡುಮೂರು ವಿಧದ ಬ್ರಾಹ್ಮಣರಿದ್ದಾರೆ ಎಂದು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಲು ಸಂಘ ಪರಿವಾರ ನಿರ್ಧರಿಸಿದೆ. ಪಂಚರತ್ನ ರಥ ಯಾತ್ರೆ ಯಶಸ್ಸಿನಿಂದ ಹೆದರಿ ಜೋಷಿ ಅವರು ನವಗ್ರಹ ಯಾತ್ರೆ ಎಂಬ ಹೇಳಿಕೆ ನೀಡಿದ್ದಾರೆ ಎಂದರು.

ಶಾಸಕರಾದ ಎ.ಟಿ.ರಾಮಸ್ವಾಮಿ, ಶಿವಲಿಂಗೇಗೌಡಗೆ ಜೆಡಿಎಸ್ ಟಿಕೆಟ್ ಡೌಟ್

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಮಂಜುನಾಥ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮಾಜಿ ಕೇಂದ್ರ ಸಚಿವ ಸದಾನಂದಗೌಡ ಹಾಗೂ ಮಾಜಿ ಶಾಸಕರು ಸೇರಿ ಈ ಕ್ಷೇತ್ರದ ಅನುದಾನಕ್ಕೆ ಕೊಕ್ಕೆ ಹಾಕಿದರು ಎಂದು ಆರೋಪಿಸಿದರು.

ದಾಸರಹಳ್ಳಿ ಕ್ಷೇತ್ರದಲ್ಲಿ ಕಾರ್ಯಕ್ರಮ ಮಾಡಲು ತೊಂದರೆ ಕೊಟ್ಟಿದ್ದಾರೆ. ಟೆಂಡರ್ ಪ್ರಕ್ರಿಯೆ ಮಾಡಲು ಬಿಡದೆ ಕಿರುಕುಳ ನೀಡಿದ್ದಾರೆ. ಇಂತಹ ಕ್ಷುಲ್ಲಕ ಕಾರಣದಿಂದ ಬೆಂಗಳೂರು ನಗರ ಸೇರಿದಂತೆ ಎಲ್ಲೆಡೆ ಬಿಜೆಪಿ ತನ್ನ ಸ್ಥಾನ ಕಳೆದುಕೊಳ್ಳಲಿದೆ ಎಂದು ವಾಗ್ದಾಳಿ ನಡೆಸಿದರು.

ಎಂಟು-ಹತ್ತು ಕ್ಷೇತ್ರದಲ್ಲಿ ಗೆಲ್ಲಬೇಕು:
ಬೆಂಗಳೂರು ನಗರದ ಎಂಟತ್ತು ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಬೇಕಿದೆ. ಮಾರ್ಚ್‍ನಲ್ಲಿ ಹಾಸನ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಪಂಚರತ್ನ ರಥಯಾತ್ರೆ ಕೈಗೊಳ್ಳಲಾಗುವುದು. ಮಾರ್ಚ್ 20 ಅಥವಾ 25ಕ್ಕೆ ಯಾತ್ರೆಯ ಸಮಾರೋಪವನ್ನು ಬೃಹತ್ ಪ್ರಮಾಣದಲ್ಲಿ ಮಾಡಲಾಗುವುದು. ಶಿವರಾತ್ರಿ ಹಬ್ಬದಂದು ಯಾತ್ರೆಗೆ ಬಿಡುವು ಕೊಡಲಿದ್ದು, ಈ ತಿಂಗಳ 27ರವರೆಗೂ ನಿರಂತರವಾಗಿ ಯಾತ್ರೆ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಪ್ರತಿ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡುವ ಗುರಿ ನಮ್ಮ ಪಕ್ಷದ್ದು. ಉತ್ತಮ ಶಿಕ್ಷಕರನ್ನು ನೇಮಕ ಮಾಡುತ್ತೇವೆ. ಕೆ.ಆರ್.ಪೇಟೆ ತಾಲ್ಲೂಕಿನ ಬಡಕುಟುಂಬವೊಂದು ತಮ್ಮನ್ನು ಭೇಟಿ ಮಾಡಿ 60 ಲಕ್ಷ ರೂ. ಸಾಲ ಮಾಡಿದ್ದು, ನೀವು ಕೈ ಹಿಡಿಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದೇ ನಮಗೆ ಉಳಿದಿರುವ ದಾರಿ ಎಂದು ಹೇಳಿದರು.

ರಾಜ್ಯದಲ್ಲಿ ಇಂತಹ ಅನೇಕ ಬಡ ಕುಟುಂಬಗಳಿವೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ 15ರಿಂದ 20 ಸಾವಿರ ರೂ. ಆದಾಯ ಬರುವ ಕಾರ್ಯಕ್ರಮ ನೀಡಲಾಗುವುದು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಎಲ್ಲರಿಗೂ ಸೂರು ಕಲ್ಪಿಸಲಿದ್ದು, ಐದು ಲಕ್ಷ ಮನೆ ಕಟ್ಟಿಕೊಡುವ ಭರವಸೆ ನೀಡಿದರು.

58 ವರ್ಷದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಅಪ್ರಾಪ್ತ ಬಾಲಕ

ವಿವಿಧ ಅಪರಾಧ ಪ್ರಕರಣದ ಆರೋಪಿ ಸ್ಯಾಂಟ್ರೊ ರವಿ ಬಂಧನವಾದರೂ ಯಾರ ಹೆಸರು ಹೊರಗೆ ಬಂದಿಲ್ಲ. ಅಂತಹ ಸರ್ಕಾರವಿದೆ. ನಮ್ಮ ಪಕ್ಷ ಅಕಾರಕ್ಕೆ ಬಂದರೆ ಕಳ್ಳ-ಸುಳ್ಳರನ್ನು ಒಳಗೆ ಹಾಕುತ್ತೇವೆ ಎಂದರು.
ಶಾಸಕ ಆರ್.ಮಂಜುನಾಥ್, ವೀರಭದ್ರಯ್ಯ, ತಿಮ್ಮೇಗೌಡ, ಕೃಷ್ಣಪ್ಪ ಸೇರಿದಂತೆ ಹಲವು ಮುಖಂಡರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

HD Kumaraswamy, BJP, eight, DCM, Delhi Meeting,

Articles You Might Like

Share This Article