ಜನರ ನಿರೀಕ್ಷೆಗೆ ತಕ್ಕಂತೆ ಸರ್ಕಾರ ನಡೆಸದಿದ್ರೆ ಜೆಡಿಎಸ್ ಪಕ್ಷ ವಿಸರ್ಜಿಸುತ್ತೇನೆ : ಹೆಚ್ಡಿಕೆ

Social Share

ಬೆಂಗಳೂರು,ಜ.14- ನಮ್ಮ ಪಕ್ಷಕ್ಕೆ ಒಂದು ಬಾರಿ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಿ ಒಂದು ವೇಳೆ ನಿಮ್ಮ ನಿರೀಕ್ಷೆಗೆ ತಕ್ಕ ಹಾಗೆ ಆಡಳಿತ ನಡೆಸದಿದ್ದರೆ ನಾನು ಜೆಡಿಎಸ್ ಪಕ್ಷವನ್ನೇ ವಿಸರ್ಜಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಘೋಷಿಸಿದರು.

ಪ್ರೆಸ್ಕ್ಲಬ್ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅತಂತ್ರ ಸ್ಥಿತಿಯಲ್ಲಿ ಸರ್ಕಾರ ಮಾಡಿದ್ರೆ, ಯಾವ ಕಾರ್ಯ ಕ್ರಮವನ್ನು ಜಾರಿ ಮಾಡಕ್ಕಾಗಲ್ಲ ನನ್ನ ನಂಬಿ ನಮ್ಮ ಪಕ್ಷಕ್ಕೆ ಬಹುಮತ ಕೊಡಲಿ ಜನ ನಮ್ಮ ಸರ್ಕಾರ ಸರಿಯಾಗಿ ಅಧಿಕಾರಮಾಡದಿದ್ರೆ ನಾನು ನಮ್ಮ ಪಕ್ಷವನ್ನೇ ವಿಸರ್ಜಿಸುತ್ತೇನೆ ಎಂದರು.

ಲವ್ ಜಿಹಾದ್ ನಿಲ್ಸೋದು ಮುಖ್ಯ ಅನ್ನುವ ನಳಿನ್ಕುಮಾರ ಕಟೀಲ್ ಅವರು ನಮ್ಮ ಯುವ ಸಮುದಾಯವನ್ನು ಎಲ್ಲಿಗೆ ತಗೊಂಡ್ ಹೋಗ್ಬೇಕು ಅನ್ಕೊಂಡಿದ್ದಾರೆ ಎಂದು ಅವರು ಟಾಂಗ್ ನೀಡಿದರು.ನಮ್ಮ ರಾಜ್ಯ ವಿದೇಶಿ ನೇರ ಬಂಡವಾಳದಲ್ಲಿ ಮೊದಲ ಸ್ಥಾನದಲ್ಲಿದೆ, ಬೆಂಗಳೂರು ಐಟಿಬಿಟಿ ನಗರವಾಗಲು ಎಸ್ ಎಂ ಕೃಷ್ಣ ಅವರು ಸಹ ಪೊ್ರೀತ್ಸಾಹ ಕೊಟ್ಟರು ಇಂತಹ ರಾಜ್ಯಕ್ಕೆ ಗುಜರಾತ್ ಮಾಡಲ್ ಅವಶ್ಯಕತೆ ಇದೆಯೇ ಎಂದು ಅವರು ಪ್ರಶ್ನಿಸಿದರು.

ಕುಮಾರಸ್ವಾಮಿ ಬಂದ್ರೆ ಜನ ಸೇರ್ತಾರೆ,ಓಟ್ ಬರಲ್ಲ ಅಂತಾರೆ, ಮೂರ್ನಾಲ್ಕು ಜಿಲ್ಲೆಗಳಿಗೆ ಜೆಡಿಎಸ್ ಸೀಮಿತ ಅಂತಾರೆ, ಈ ಬಾರಿ ಇದನ್ನೆಲ್ಲ ಮೀರಿ ನಾವು ಸ್ಪಷ್ಟವಾಗಿ ಬಹುಮತ ಪಡೀತ್ತೀವಿ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ರಾಜಕಾರಣದಲ್ಲಿ ಸಂಚಲ ಮೂಡಿಸಿದ ಸಿ.ಪಿ.ಯೋಗೇಶ್ವರ್ ವೈರಲ್ ಆಡಿಯೋ

ಮೀಸಲಾತಿ ವಿಚಾರದಲ್ಲಿ ಕೆಲವು ರಾಜಕಾರಣಿಗಳು ಮಠಾೀಶರನ್ನು ಮುಂದೆ ಬಿಟ್ಟು ಹೋರಾಟ ಮಾಡಿಸುತ್ತಿದ್ದಾರೆ.ಅವರಿಗೆ ಮೀಸಲಾತಿ ಆರ್ಥ ಏನು ಎಂದೇ ತಿಳಿದಿಲ್ಲ ಎಂದು ಹೆಚ್ಡಿಕೆ ತಿವಿದರು.ಹೊದಕಡೆಯಲ್ಲೆಲ್ಲಾ ಸದಾಶಿವ ಆಯೋಗ ವರದಿ ಮಾಡಿ ಅಂತಿದ್ದಾರೆ ಅದು ಜಾರಿಯಾದರೆ, ಕೆಲವು ಸಮುದಾಯಗಳಿಗೆ ಅನ್ಯಾಯವಾಗುತ್ತೆ ಒಂದು ವೇಳೆ ನಮ್ಮ ಸರ್ಕಾರ ಬಂದರೆ ಎಲ್ಲರನ್ನು ಕರೆದು ಚರ್ಚಿಸಿ ಒಂದು ತೀರ್ಮಾನ ಕೈಗೊಳ್ಳುತ್ತೇನೆ ಎಂದು ಅವರು ಹೇಳಿದರು.

ಪಕ್ಷ ಬಿಟ್ಟು ಹೋಗುವವರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಪಕ್ಷ ತೊರೆದವರ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಶಕ್ತಿ ನಮಗಿದೆ ಎಂದು ಅವರು ವಿವರಿಸಿದರು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 51% ಶಿಕ್ಷಕರ ಕೊರತೆ ಇದೆ, ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ ದುಬಾರಿ ಆಗಿದೆ, ರೈತರ ಬದುಕು ಶೋಚನೀಯವಾಗಿದೆ, ರೈತರ ಆದಾಯ 2024 ಕ್ಕೆ ದ್ವಿಗುಣ ಮಾಡೋದಾಗಿ ಕೇಂದ್ರ ಹೇಳಿತ್ತು ಆದರೆಮ ರೈತರ ಆದಾಯ ದ್ವಿಗುಣ ಆಗಿಲ್ಲ, ರೈತರ ವೆಚ್ಚ ದ್ವಿಗುಣವಾಗಿದೆ ಎಂದು ಅವರು ಲೇವಡಿ ಮಾಡಿದರು.

2023 ಕರ್ನಾಟಕಕ್ಕೆ ವಿಶೇಷವಾದ ವರ್ಷವಾಗಿದೆ, ರಾಜಕೀಯದಲ್ಲೂ ಕೂಡ ಸಾಕಷ್ಟು ಸವಾಲುಗಳಿವೆ, ಕಳೆದ ನಾಲ್ಕುವರೆ ವರ್ಷದಲ್ಲಿ ಪ್ರಕ್ರತಿ ವಿಕೋಪ ಸೇರಿ ಹಲವಾರು ಘಟನೆಗಳು ಘಟಿಸಿದೆ, ಬಿಜೆಪಿ ಅಕಾರಕ್ಕೆ ಬಂದ ಮೇಲೆ ಅಕಾಲಿಕ ಮಳೆ, ಕೊರೋನಾ ಆರಂಭ ಆಯ್ತು ಜನರಿಗೆ ಸಾಕಷ್ಟು ಸಂಕಷ್ಟ ಆಯ್ತು ಎಂದು ಅವರು ಹೇಳಿದರು.

ಹೀಗಾಗಿ ಪ್ರಾದೇಶಿಕ ಪಕ್ಷದ ಸರ್ಕಾರ ರಚನೆ ಮಾಡಬೇಕು ಎಂಬ ಉದ್ದೇಶದಿಂದ ನಾವು ಪಂಚರತ್ನ ಯಾತ್ರೆ ಆರಂಭಿಸಿದ್ದೇವೆ. ಇದರಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂಬ ವಿಶ್ವಾಸವಿದೆ ಎಂದರು.

Articles You Might Like

Share This Article