ಬಡವರ ಮಕ್ಕಳ ದಾರಿ ತಪ್ಪಿಸಬೇಡಿ : ಎಚ್‍ಡಿಕೆ

Social Share

ಚನ್ನಪಟ್ಟಣ,ಫೆ.10- ಹಿಜಾಬ್ ಮತ್ತು ಕೇಸರಿ ಶಾಲಿನ ಸಂಘರ್ಷದ ವಿಚಾರದಲ್ಲಿ ರಾಜಕೀಯ ಪಕ್ಷಗಳು ಬಡವರ ಮಕ್ಕಳ ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿಯ ಒಂದು ಸರ್ಕಾರಿ ಕಾಲೇಜಿನಲ್ಲಿ ಆರಂಭವಾದ ಈ ವಿಚಾರ ಈಗ ಹಲವು ದೇಶಗಳಲ್ಲಿ ಚರ್ಚೆಯ ಮಟ್ಟಕ್ಕೆ ಹೋಗಿದೆ.
ಎಲ್ಲ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಅಮಾಯಕರ ಬದುಕಿನಲ್ಲಿ ಚೆಲ್ಲಾಟವಾಡದೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನ ಮಾಡಬೇಕು ಎಂದರು. ಈ ರೀತಿಯ ಸಂಘರ್ಷ ದೊಡ್ಡ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿಲ್ಲ. ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಕೇಸರಿ ಶಾಲು ಹೊದಿಸಿ ಕಳುಹಿಸಿಲ್ಲ. ಸರ್ಕಾರಿ ಶಾಲೆಯಲ್ಲಿ ಓದುವ ಬಡವರ ಮಕ್ಕಳು ಕೇಸರಿ ಶಾಲು, ಹಿಜಾಬ್ ಸಂಘರ್ಷಕ್ಕೆ ಒಳಗಾಗಿದ್ದಾರೆ. ಪೋಷಕರು ವಾತ್ಸವತೆ ಅರ್ಥ ಮಾಡಿಕೊಂಡು ಯಾರೂ ಕೂಡ ದುರುಪಯೋಗಪಡಿಸಿಕೊಳ್ಳದಂತೆ ಎಚ್ಚರ ವಹಿಸಬೇಕು.
ವಿಡಿಯೋ ಆಧರಿಸಿ ಈಗಾಗಲೇ ಹಲವರ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಲಾಗುತ್ತಿದೆ. ನ್ಯಾಯಾಂಗದಲ್ಲೂ ಈ ಬಿಕ್ಕಟ್ಟಿಗೆ ಸೂಕ್ತ ಪರಿಹಾರ ದೊರೆಯಬೇಕು ಎಂದು ಹೇಳಿದರು. ಪೋಷಕರು ಪ್ರಚೋದನೆಗೆ ಮಕ್ಕಳು ಒಳಗಾಗದಂತೆ ಹಾಗೂ ಶಾಂತಿ ಕಾಪಾಡಲು ಸಹಕರಿಸಬೇಕು. ಆರಂಭದಲ್ಲೇ ಕ್ರಮ ಕೈಗೊಳ್ಳದೆ ಬಿಕ್ಕಟ್ಟು ಉಲ್ಬಣವಾಗದೆ ಬಿಟ್ಟಿದ್ದು ಸರ್ಕಾರದ ವೈಫಲ್ಯ ಎಂದು ಆರೋಪಿಸಿದರು.

Articles You Might Like

Share This Article