ನಾನು ಸಿಎಂ ಆಗೋದನ್ನ ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ : ಎಚ್‍ಡಿಕೆ

Social Share

ಚನ್ನಪಟ್ಟಣ,ಫೆ.28- ನಾಡಿನ ಜನರ ಆಶೀರ್ವಾದವಿದ್ದು ನಾನು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ,ವಿಶ್ವಾಸ ವ್ಯಕ್ತಪಡಿಸಿದರು.

ಬಮೂಲ್ ನಿರ್ದೇಶಕ ಹೆಚ್.ಸಿ.ಜಯಮುತ್ತು ಅವರ ನೇತೃತ್ವದಲ್ಲಿ ನಗರದ ಹೊರಬಲಯದ ದೊಡ್ಡಮಳೂರು ಬಳಿ ಬೃಹತ್ ವೇದಿಕೆಯಲ್ಲಿ ಆಯೋಜಿಸಿದ್ದ ಬೊಂಬೆನಾಡಿನ ಬಮೂಲ್ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಬಡವರು, ರೈತ ಪರವಾದ ಜೆಡಿಎಸ್ ಸ್ವತಂತ್ರ ಸರ್ಕಾರವನ್ನು ತರಲು ಹೊರಟಿರುವ ನಮಗೆ ದೇವರ ಅನುಗ್ರಹ ಹಾಗೂ ನಾಡಿನ ಜನತೆಯ ಆಶೀರ್ವಾದವಿದ್ದು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ 120 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬರಲಿದೆ. ನಾನು ಮುಖ್ಯಮಂತ್ರಿ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮಾಜಿ ಪ್ರಧಾನಿಗಳು ನನ್ನ ತಂದೆ ಪೂಜ್ಯರು ಆದ ದೇವೇಗೌಡರು ಜೀವಂತವಾಗಿರುವಾಗಲೇ ನಾನು ಮುಖ್ಯಮಂತ್ರಿ ಆಗುವುದನ್ನು ಕಣ್ಣಾರೆ ಕಾಣಬೇಕು ಎಂದು ಬಯಸಿದ್ದಾರೆ. ಅವರ ಕನಸು ನನಸಾಗಲಿದೆ ಎಂದರು.

ರಾಹುಲ್ ಗಾಂಧಿಗೆ ಜವಾಬ್ದಾರಿ ಬೇಕಿಲ್ಲ, ಅಧಿಕಾರ ಬೇಕು: ಬಿಜೆಪಿ

ದಿವ್ಯ ಸಾನಿಧ್ಯವನ್ನು ವಹಿಸಿದ್ದ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಚಂದ್ರಶೇಖರನಾಥ ಮಹಾಸ್ವಾಮೀಜಿ, ಗುರುಗುಂಡ ಬ್ರಹ್ಮೇಶ್ವರ ಮಠದ ಶ್ರೀ ನಂಜಾವಧೂತ ಮಹಾಸ್ವಾಮೀಜಿ, ಆದಿಚುಂಚನಗಿರಿ ಮಠದ ಶ್ರೀ ಸೋಮಚಂದ್ರನಾಥ ಸ್ವಾಮೀಜಿ, ಶ್ರೀ ಅನ್ನದಾನೇಶ್ವರ ಸ್ವಾಮೀಜಿ, ಬೇವೂರು ಮಠದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ರೂಪಾರಿ ಬಮೂಲ್ ನಿರ್ದೇಶಕ ಹೆಚ್.ಸಿ.ಜಯಮುತ್ತು ಮಾತನಾಡಿ, ಮುಂದೆಯೂ ನಿಮ್ಮ ಸಹಕಾರ ಹೀಗೆ ಇರಲಿ. ತಾಲ್ಲೂಕಿನ ಸಂಘಗಳ ಸಕ್ರಿಯ ಸದಸ್ಯರಾಗಿರುವ 19,500ಕ್ಕೂ ಹೆಚ್ಚು ಮಂದಿಗೆ 10 ಲೀ. ಹಾಲಿನ ಕ್ಯಾನ್ ಗಳನ್ನು ನೆನಪಿನ ಕಾಣಿಕೆಗಳನ್ನಾಗಿ ನೀಡಲಾಗುತ್ತಿದೆ. ಮುಂದೆಯೂ ನಿಮ್ಮೆಲ್ಲರ ಋಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು.

ಮುಖ್ಯಅತಿಥಿಗಳಾಗಿ ಮಾಜಿ ಶಾಸಕ ಎಂ.ಸಿ.ಅಶ್ವಥ್, ಬಮೂಲ್ ಉಪಾಧ್ಯಕ್ಷ ಮಂಜುನಾಥ್, ನಿರ್ಧೇಶಕರಾದ ರಾಜಕುಮಾರ್,ಕೃಷ್ಣಯ್ಯ, ಸಮಾಜ ಸೇವಕರು, ಮುಖಂಡರಾದ ಎಂ.ಸಿ.ಕರಿಯಪ್ಪ,ಗೋವಿಂದಹಳ್ಳಿ ನಾಗರಾಜು, ಕುಕ್ಕೂರುದೊಡ್ಡಿ ಜಯರಾಂ,ವಡ್ಡರಹಳ್ಳಿ ರಾಜಣ್ಣ, ಮೈಸೂರು ರವಿ, ಪ್ರಕಾಶ್,ಒಕ್ಕಲಿಗರ ಸಂಘದ ನಿರ್ದೇಶಕ ಪುಟ್ಟಸ್ವಾಮಿ, ಎಂಪಿಸಿಎಸ್ ನೌಕರರ ಸಂಘದ ಅಧ್ಯಕ್ಷ ಪುಟ್ಟೇಗೌಡ, ದೇವರಾಜು, ಪುಟ್ಟರಾಜು, ಬಿಳಿಗೌಡ ಉಪಸ್ಥಿತರಿದ್ದರು.

19 ಲಕ್ಷ ರೈತ ಕುಟುಂಬಗಳಿಗೆ 13ನೇ ಕಂತನ ಪಿಎಂ ಕಿಸಾನ್ ಸಮ್ಮಾನ್ ನಿಧಿ ಬಿಡುಗಡೆ

ಬೊಂಬೆನಾಡಿನ ಬಮೂಲ್ ಉತ್ಸವದ ಅಂಗವಾಗಿ, ಬೃಹತ್ ವೇದಿಕೆ ನಿರ್ಮಿಸಿ, ಉಚಿತ ಆರೋಗ್ಯ ತಪಾಸಣಾ ಶಿಬಿರ, ಕೃಷಿ ಮೇಳ, ಉದ್ಯೋಗ ಮೇಳ, ವಸ್ತು ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿಗೆ ಅವಕಾಶ ಮಾಡಿಕೊಡಲಾಗಿತ್ತು.

ತಾಲ್ಲೂಕಿನ ರೈತರು, ನಿರುದ್ಯೋಗಿ ಯುವಕ ಯುವತಿಯರು, ಸಾರ್ವಜನಿಕರು ಭಾಗವಹಿಸಿದ್ದರು.ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋ ಬಸ್ತ ವ್ಯವಸ್ಥೆ ಮಾಡಲಾಗಿತ್ತು.

hd kumaraswamy, Next, Chief Minister, Channapatna,

Articles You Might Like

Share This Article