ಬೆಂಗಳೂರು,ಫೆ.21- ರಾಜ್ಯದ ಪ್ರಮುಖ ವಿಚಾರಗಳ ಚರ್ಚೆಗೆ ಸದನದಲ್ಲಿ ಅವಕಾಶ ಸಿಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನ ಸುಗಮವಾಗಿ ನಡೆಯಬೇಕು ಎಂದು ಒತ್ತಾಯಿಸಿ ನಮ್ಮ ಶಾಸಕರು ಮಹಾತ್ಮಗಾಂ ಪ್ರತಿಮೆ ಬಳಿ ಧರಣಿ ನಡೆಸಿದ್ದಾರೆ.
ಕಾಂಗ್ರೆಸ್ ಶಾಸಕರು ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಇವತ್ತು ಅಥವಾ ನಾಳೆ ಮುಂದಿನ ಬಜೆಟ್ ಅಧಿವೇಶನದವರೆಗೂ ಸದನ ಮುಂದೂಡುವ ಸಾಧ್ಯತೆಯಿದೆ.ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ತಂದರು. ಆ ಸಂದರ್ಭದಲ್ಲೂ ಯಾವುದೇ ಸಮಸ್ಯೆ ಚರ್ಚೆಯಾಗದೆ ಅವೇಶನ ಮುಕ್ತಾಯವಾಯಿತು. ಈ ಅಧಿವೇಶನವು ಯಾವ ರೀತಿ ನಡೆಯುತ್ತಿದೆ ಎಂಬುದನ್ನು ನಾಡಿನ ಜನ ಗಮನಿಸುತ್ತಿದ್ದಾರೆ ಎಂದರು. ಶಿಕ್ಷಣ ಕ್ಷೇತ್ರದ ಸಮಸ್ಯೆಯ ಬಗ್ಗೆ ಈ ಹಿಂದೆಯೇ ಹೇಳಿದ್ದೆ.
ಈಗ ಶಿವಮೊಗ್ಗದಲ್ಲಿ ಯುವಕನ ಹತ್ಯೆಯಾಗಿದೆ. ಆ ಅಮಾಯಕ ಯುವಕನ ಕುಟುಂಬದವರವನ್ನು ಕೇಳುವವರು ಇಲ್ಲ. ವಾಸ್ತವ ಸ್ಥಿತಿಯನ್ನು ಯುವಕರು ಅರ್ಥ ಮಾಡಿಕೊಂಡರೆ ಸಾಕು ಎಂದು ಹೇಳಿದರು.
ಎರಡು ವರ್ಷದ ಹಿಂದೆಯೇ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬುದು ಸಂಬಂಧಿಕರ ಆರೋಪ. ಒಂದು ವೇಳೆ ಈ ರೀತಿ ಸಂಚು ರೂಪಿಸಿದ್ದರೆ ಬಿಜೆಪಿ ನಾಯಕರಿಗೆ ಗೊತ್ತಿರಲಿಲ್ಲವೇ? ನಿಮ್ಮ ಸದಸ್ಯನ ರಕ್ಷಣೆ ಮಾಡಿಕೊಳ್ಳಲು ನಿಮಗೆ ಸಾಧ್ಯವಾಗಲಿಲ್ಲವೇ ಎಂದು ಟೀಕಿಸಿದರು.
ಇದು ಸ್ಯಾಂಪಲ್ ಏನೋ ಗೊತ್ತಿಲ್ಲ. ಟ್ರೇಲರ್ ಬಿಡುತ್ತಾರೆ, ಮುಂದೆ ಪಿಚ್ಚರ್ ಬಿಡುತ್ತಾರೆ. ಇದನ್ನು ಗಮನಿಸಿದರೆ ಪ್ರಾರಂಭ ಎನಿಸುತ್ತದೆ. ಸರ್ಕಾರ ಇದನ್ನು ಮೊದಲೇ ಅರ್ಥ ಮಾಡಿಕೊಳ್ಳಬೇಕಿತ್ತು ಎಂದರು.
ಡಿ.ಕೆ.ಶಿವಕುಮಾರ್ ಪ್ರಚೋದನೆ ಮಾಡುತ್ತಾರೆ ಎಂದು ಹೇಳುತ್ತೀರಾ ಅದನ್ನು ಹೇಗೆ ನಿಯಂತ್ರಿಸಬೇಕು ಎಂಬುದು ನಿಮಗೆ ಗೊತ್ತಿಲ್ಲವೇ? ಯಾಕೆ ಸುಮ್ಮನಾಗಿದ್ದೀರಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
