ವೋಟಿಗಾಗಿ ರಾಷ್ಟ್ರೀಯ ಪಕ್ಷಗಳು ಸಮಾಜ ಹಾಳು ಮಾಡುತ್ತಿವೆ : ಎಚ್‍ಡಿಕೆ

Social Share
ಚನ್ನಪಟ್ಟಣ,ಫೆ.27- ಮತಕ್ಕಾಗಿ ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ ಎರಡು ರಾಷ್ಟ್ರೀಯ ಪಕ್ಷಗಳೇ ರಾಜ್ಯದಲ್ಲಿ ಕೋಮು ಸೌಹಾರ್ದತೆ ಹಾಳಾಗಲು ನೇರ ಕಾರಣವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ  ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಕಾಂಗ್ರೆಸ್ ಎರಡು ಒಂದೇ ನಾಣ್ಯದ ಎರಡು ಮುಖಗಳು, ನಾನು ಇವರಲ್ಲಿ ಯಾರ ಪರವೂ ಇಲ್ಲ, ನಾನು ಯಾವತ್ತಿದ್ದರೂ ಜನತೆ ಪರವಾಗಿದ್ದೇನೆ  ಎಂದು ಸ್ಪಷ್ಟಪಡಿಸಿದರು.
ಸಮವಸ್ತ್ರದ ವಿಚಾರವಾಗಿ ಆರಂಭವಾದ ಘಟನೆ. ಇಡೀ ರಾಜ್ಯದಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸಲಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದ ಎರಡು ಅವಯಲ್ಲೂ ಹಿಂದೂ – ಮುಸ್ಲಿಂ ಗಲಾಟೆಯಾಗಲು ಬಿಟ್ಟಿಲ್ಲ. ಆದರೆ, ಇವತ್ತು ಯಾಕೆ ಇಂತಹ ಇಶ್ಯೂಗಳು ರೈಸ್ ಆಗುತ್ತಿವೆ. ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಕಾರಕ್ಕೆ ಬಂದಾಗಲೇ ಇಂತಹ ಘಟನೆಗಳು ಏಕೆ ಉದ್ಭವವಾಗುತ್ತದೆ ಎಂದು ಪ್ರಶ್ನಿಸಿದರು.
ಶಿವಮೊಗ್ಗದ ಘಟನೆ ಇರಬಹುದು. ಮತ್ಯಾವುದೇ ಘಟನೆ ಇರಬಹುದು ಇದಕ್ಕೆಲ್ಲ ಯಾರು? ಏಕೆ ಈ ರೀತಿಯ ವಾತಾವರಣ ನಿರ್ಮಾಣ ಆಗುತ್ತಿದೆ. ಇವತ್ತು ಹಲವಾರು ರೀತಿಯ ವಿಧೇಯಕ ರಚನೆ ಮಾಡಿ.  ಆ ಒಂದು ಕಾನೂನು ಸಮಾಜದಲ್ಲಿ ಕಲುಷಿತ ವಾತಾವರಣಕ್ಕೆ ತೆಗೆದುಕೊಂಡು ಹೋಗಲು ದಾರಿ ಮಾಡಿಕೊಟ್ಟಿದೆ. ಇದಕ್ಕೆ ಹಲವಾರು ಉದಾಹರಣೆ ಕೊಡಬಲ್ಲೆ. ಆದರೆ, ಕಾಂಗ್ರೆಸ್‍ನ ನಾಯಕರು ಈ ವಿಚಾರ ಚರ್ಚೆ ಮಾಡಲ್ಲ ಎಂದು ಅಸಮಾಧನಾ ವ್ಯಕ್ತಪಡಿಸಿದರು.
ಕಾಂಗ್ರೆಸ್‍ಗೆ ಏನಿದ್ದರೂ ಜೆಡಿಎಸ್ ಬಗ್ಗೆ ಚರ್ಚೆ ಮಾಡುವುದೇ ಕೆಲಸವಾಗಿದೆ. ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎನ್ನುತ್ತಾರೆ. ಇವತ್ತು ಸಮಾಜದ ಈ ಕೆಟ್ಟ ಪರಿಸ್ಥಿತಿಗೆ ನಿಮ್ಮ ಕೊಡುಗೆ ಏನು. ಕಾಂಗ್ರೆಸ್‍ನವರು ಏನು ಮಾಡಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
# ಡಿಜೆ ಹಳ್ಳಿಗೆ ಯಾರು ಕಾರಣ:  
ಕಾಂಗ್ರೆಸ್‍ನವರು ನಾವು ಅಲ್ಪಸಂಖ್ಯಾತ ರಕ್ಷಕರು ಅಂತ ಹೇಳಿಕೊಂಡು ಪೋಸು ಕೊಡುತ್ತಾರೆ. ಆದರೆ, ಇವತ್ತು ಡಿಜೆ ಹಳ್ಳಿ ಘಟನೆಗೆ ಕಾರಣಕರ್ತರು ಯಾರು. ಡಿಜೆ ಹಳ್ಳಿಯಲ್ಲಿ ಬೆಂಕಿ ಹಚ್ಚಿದವರು ಯಾರು. ಹಲವಾರು ಅಮಾಯಕರನ್ನ ಪ್ರೇರೇಪಣೆ ಮಾಡಿ ದೊಂಬಿ ಮಾಡಿಸಲಾುತು. ದೊಂಬಿ ಮಾಡಿಸದಂತವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ, ಅವರಿಗೆ ಕಾಂಗ್ರೆಸ್‍ನವರು ರಕ್ಷಣೆ ಕೊಟ್ಟಿದ್ದಾರೆ.
ಇವರ ಮಾತು ಕೇಳಿದ ಅಮಾಯಕರು ಬಲಿಯಾಗಿದ್ದಾರೆ. ಇವರನ್ನು ನಂಬಿಕೊಂಡು ಅಮಾಯಕ ಮಂದಿ ಇವತ್ತು ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಎ ಹೋರಾಟದ ಕುರಿತು ಚರ್ಚಿಸಲಿಲ್ಲ: ದೆಹಲಿಯಲ್ಲಿ ನಡೆದ ಸಿಎಎ ಹೋರಾಟದಲ್ಲಿ ದೆಹಲಿ ಕೇಂದ್ರದಲ್ಲಿ 53 ಜನ ಸತ್ತರು. ಅದರಲ್ಲಿ 33 ಜನ ಮುಸ್ಲಿಮರು, 13 ಜನ ಂದೂಗಳು ಇದ್ದರು. ಇವತ್ತಿನವರೆಗೆ ಕಾಂಗ್ರೆಸ್ ನಾಯಕರು  ಇದರ ಬಗ್ಗೆ ಚರ್ಚೆ ಮಾಡಿದ್ದಾರಾ.
ಈ ಚಾರದ ಬಗ್ಗೆ ಸಣ್ಣ ಚರ್ಚೆ ಆಗಿದೆಯಾ, ಶಿಕ್ಷೆ ಆಯ್ತ ಎಂದು ಪ್ರಶ್ನಿಸಿದ ಅವರು, ಹೊರಗೆ ಮಾತ್ರ ಕಾಂಗ್ರೆಸ್‍ನವರು ಮುಸ್ಲಿಮರ ರಕ್ಷಣೆ ಮಾಡುವವರು ನಾವು ಅನ್ನುತ್ತಾರೆ. ಆದರೆ ಮುಸ್ಲಿಮರ ರಕ್ಷಣೆ ವಿಚಾರ ಬಂದಾಗ ಮಾತೇ ಆಡುವುದಿಲ್ಲ ಎಂದು ಕುಟುಕಿದರು.
ರಾಷ್ಟ್ರೀಯ ಪಕ್ಷ ಎಂದು ಕರೆಸಿಕೊಳ್ಳುವ ಕಾಂಗ್ರೆಸ್‍ಗೆ ಇವತ್ತು ಉತ್ತರಪ್ರದೇಶದಲ್ಲಿ ನೆಲೆಯೇ ಇಲ್ಲದಂತಾಗಿದೆ. ಅಲ್ಲಿ 5 ಸೀಟ್ ಗೆಲ್ಲಲೂ ತಿಣುಕಾಡುತ್ತಿದ್ದಾರೆ. ಮಾಜಿ ಪ್ರಧಾನಿಗಳಾದ ಜವಹರ್‍ಲಾಲ್ ನೆಹರು, ಇಂದಿರಾ ಗಾಂ, ರಾಜೀವ್ ಗಾಂ ಸೇರಿದಂತೆ ಅವರ ಮನೆತನದವರೇ ಸುಮಾರು 40 ವರ್ಷ ದೇಶದಲ್ಲಿ ಆಳ್ವಿಕೆ ಮಾಡಿದ್ದಾರೆ. ಆದರೂ ಇಂದು ಆ ಪಕ್ಷ ಒಂದೊಂದು ಸೀಟು ಗೆಲ್ಲಲು ಪರದಾಡುವಂತಾಗಿದೆ ಎಂದು ವ್ಯಂಗ್ಯವಾಡಿದರು.
# ಶೀಘ್ರದಲ್ಲೇ ಹೋರಾಟ:
ಈ ದೇಶದಲ್ಲಿ ಯಾವ್ಯಾವ ರೀತಿಯ ಗಲಭೆಗಳು ಆಗಿವೆ. ಇದಕ್ಕೆಲ್ಲಾ ಯಾರು ಯಾವ ಪಕ್ಷದವರು ಕಾರಣ. ಎಷ್ಟರಮಟ್ಟಿಗೆ ಗಲಭೆಗಳು ವಿರುದ್ಧ ಹೋರಾಟ ಯಾರು ಮಾಡಿದ್ದಾರೆ.   ಯಾರು ಜನರ ರಕ್ಷಣೆ ಮಾಡ್ತಾರೆ ಸಮಾಜದ ರಕ್ಷಣೆ ಯಾರ ಕೈಯಲ್ಲಿ ಸಾಧ್ಯ. ಈ ಷಯಗಳನ್ನು ಇಟ್ಟುಕೊಂಡು ಹೋರಾಟ ಮಾಡಲು ನಿರ್ಧರಿಸಿದ್ದೇನೆ. ಮುಂದಿನ 1 ವರ್ಷ ಎಲ್ಲಾ ವಿಚಾರಗಳ ಬಗ್ಗೆ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

 

Articles You Might Like

Share This Article