ಸ್ಯಾಂಟ್ರೋ ರವಿ ಬೆಳೆಸಿದ್ದೇ ಎಚ್ಡಿಕೆ, ಕಾಂಗ್ರೆಸ್ : ಅರಗ ಜ್ಞಾನೇಂದ್ರ

Social Share

ಬೆಂಗಳೂರು,ಜ.24- ನ್ಯಾಯಾಂಗ ಬಂಧನದಲ್ಲಿ ರುವ ರೌಡಿಶೀಟರ್ ಸ್ಯಾಂಟ್ರೊ ರವಿಯನ್ನು ಬೆಳೆಸಿದ್ದೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿರುಗೇಟು ನೀಡಿದ್ದಾರೆ.

ಸ್ಯಾಂಟ್ರೊ ರವಿ ಜೊತೆ ಇನ್ನು ಸಾಕಷ್ಟು ಮಂದಿ ಸರ್ಕಾರದಲ್ಲಿರುವ ಸಚಿವರು ಸಂಪರ್ಕದಲ್ಲಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಜ್ಞಾನೇಂದ್ರ, ಆತನನ್ನು ಬೆಳೆಸಿದ್ದೇ ಕುಮಾರಸ್ವಾಮಿ, ಈಗ ಯಾವ ನೈತಿಕತೆ ಇಟ್ಟುಕೊಂಡು ಆರೋಪ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಆತನನ್ನು ಕಾಂಗ್ರೆಸ್ನವರು ಬೆಳೆಸಿರಬಹುದು ಇಲ್ಲವೇ ಕುಮಾರಸ್ವಾಮಿ ಬೆಳೆಸಿರಬಹುದು. ಆದರೆ ನಮ್ಮ ಸರ್ಕಾರ ಸ್ಯಾಂಟ್ರೊ ರವಿಯನ್ನು ಮಟ್ಟ ಹಾಕಿ ಬಂಧನಕ್ಕೊಳಪಡಿಸಿದೆ.ಯಾರೇ ಇರಲಿ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ. ಯಾರನ್ನು ಕೂಡ ರಕ್ಷಣೆ ಮಾಡುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ನಮ್ಮ ಪಕ್ಷದವನ್ನಲ್ಲ ಎಂದು ಮೊದಲು ಕಾಂಗ್ರೆಸಿಗರು ಹೇಳುತ್ತಿದ್ದರು. ಆತ ಇದೇ ಪಕ್ಷದಿಂದ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ರ್ಪಸಿದ್ದ. ಇದಕ್ಕಿಂತ ಉದಾಹರಣೆ ಇನ್ನೇನು ಬೇಕು ಎಂದು ಪ್ರಶ್ನೆ ಮಾಡಿದರು.

ಕೊತ್ವಾಲ್ ಕಾಂಗ್ರೆಸ್ ಎಂದು ಮರುನಾಮಕರಣ ಮಾಡುವುದೇ ಸೂಕ್ತ : ಬಿಜೆಪಿ

ಪಿಎಸ್ಐ ಪ್ರಕರಣದಲ್ಲಿ ಆರ್.ಡಿ. ಪಾಟೀಲ್ ಬಂಧನವಾಗಿದ್ದು, ಕಾಂಗ್ರೆಸ್ ಮುಖಂಡನಾಗಿದ್ದಾನೆ. ಈತ ನಮ್ಮವನಲ್ಲ ಎಂದು ಕಾಂಗ್ರೆಸ್ನವರು ಹೇಳುತ್ತಾರೆ. ಇದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

ಲೋಕಾಯುಕ್ತಕ್ಕೆ ಬಾಗಿಲು ಹಾಕಿದವರು ಅವರು. ಅವರದ್ದೇ ಪಕ್ಷದ ರಮೇಶ್ ಕುಮಾರ್ ಅವರೇ ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಇದಕ್ಕಿಂತಲೂ ಉದಾಹರಣೆ ಬೇಕಾ ಅವರು ಭ್ರಷ್ಟಾಚಾರಿಗಳು ಎನ್ನುವುದಕ್ಕೆ ಎಂದು ಪ್ರಶ್ನೆ ಮಾಡಿದರು.

ಗಿಮಿಕ್ ಮಾಡಿ ವೋಟು ಪಡೆಯಲು ಪ್ರತಿಭಟನೆ ಮಾಡಿದ್ದಾರೆ ಕಾಂಗ್ರೆಸ್ನವರು ಎಷ್ಟೇ ಪ್ರತಿಭಟನೆ ಮಾಡಿದರೂ ಜನ ಅವರನ್ನು ನಂಬುವುದಿಲ್ಲ. ಅವರ ತಂತ್ರ ಯಶಸ್ವಿಯಾಗುವುದಿಲ್ಲ ಎಂದು ವ್ಯಂಗ್ಯವಾಡಿದರು.

Articles You Might Like

Share This Article