ಚರ್ಚೆಗೆ ಗ್ರಾಸವಾದ ಎಚ್‍ಡಿಕೆ ಬ್ರಾಹ್ಮಣ ಟೀಕೆ

Social Share

ಬೆಂಗಳೂರು,ಫೆ.7- 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಬಿಜೆಪಿ, ಆರ್‍ಎಸ್‍ಎಸ್ ಅನ್ನು ಟೀಕಿಸುವ ಭರದಲ್ಲಿ ಬ್ರಾಹ್ಮಣರ ಬಗ್ಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಡಿದ ಮಾತುಗಳು ಈಗ ಚರ್ಚೆಗೆ ಗ್ರಾಸವಾಗಿವೆ.

ಈ ಬೆನ್ನಲ್ಲೇ ಹೆಚ್.ಡಿ ಕುಮಾರಸ್ವಾಮಿ ಅವರ ಬ್ರಾಹ್ಮಣ ಸಿಎಂ ಹೇಳಿಕೆ ಹಾಗೂ ವಿಪಕ್ಷ ನಾಯಕರ ವಾಗ್ದಾಳಿ, ಆರೋಪಗಳಿಂದ ಪಕ್ಷಕ್ಕೆ ಆಗುವ ಹಾನಿ ತಪ್ಪಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ವಿಪಕ್ಷ ನಾಯಕರ ಹೇಳಿಕೆಗಳಿಂದ ಪಕ್ಷಕ್ಕೆ ಆಗುವ ಹಾನಿ ತಡೆಯುವ ಸಲುವಾಗಿ ಬಿಜೆಪಿ ಜಾಲತಾಣಗಳ ಮೊರೆ ಹೋಗಿದೆ.

ಬ್ರಾಹ್ಮಣ ಸಿಎಂ ಬಾಂಬ್‍ನಿಂದ ಒಂದು ಕಡೆ ಕುಮಾರಸ್ವಾಮಿ ವಿರುದ್ಧ ಪ್ರತ್ಯಾಸ್ತ್ರ, ಮತ್ತೊಂದು ಕಡೆ ನಷ್ಟ ತಪ್ಪಿಸಲು ತಯಾರಿ ನಡೆಸಿರುವ ಕೇಸರಿ ಪಡೆ ಬೂತ್ ಮಟ್ಟದಲ್ಲಿ ರಚಿಸಿರುವ 50 ಸಾವಿರ ವಾಟ್ಸಪ್ ಗ್ರೂಪ್‍ಗಳಲ್ಲಿ ವಿಪಕ್ಷ ನಾಯಕರ ಹೇಳಿಕೆ ಸುಳ್ಳೆಂದು ಬಿಂಬಿಸಲು ಅಭಿಯಾನ ಶುರು ಮಾಡಿದೆ.

ಬೆಂಗಳೂರಿನಲ್ಲಿ ಮತ್ತೆ ಜಾರಿಗೆ ಬರಲಿದೆ ಹೊಸ ಜಾಹೀರಾತು ನೀತಿ

ಮನೆಮನೆಗೂ ಮನವರಿಕೆ ಮಾಡಿಕೊಡಲು ಪೋಸ್ಟರ್ ಹಂಚಲು ಸೂಚನೆ ನೀಡಿದೆ. ಹೆಚ್‍ಡಿಕೆ, ಸಿದ್ದರಾಮಯ್ಯ, ಡಿಕೆಶಿ ಸೇರಿ ಇತರ ನಾಯಕರ ಆರೋಪಗಳು ಎಲ್ಲವೂ ಸುಳ್ಳು ಎಂದು ಈ ಮೂಲಕ ಬಿಂಬಿಸಲು ಹೊರಟಿದೆ. ಜೊತೆಗೆ ಹೇಳಿಕೆ ಕೊಟ್ಟ ವಿಪಕ್ಷ ನಾಯಕರ ವಿರುದ್ಧ ಜನಾಭಿಪ್ರಾಯ ಸಂಗ್ರಹಕ್ಕೂ ಮುಂದಾಗಿದೆ. ಈ ಮೂಲಕ ಪಕ್ಷಕ್ಕೆ ಹಾಗುವ ಹಾನಿ ತಡೆಯಲು ಮುಂದಾಗಿದೆ.

ಈ ನಡುವೆ ಬಿಜೆಪಿ, ಗುಂಪುಗಾರಿಕೆ, ಲಂಚ, ಅಕ್ರಮ, ಜಾತೀಯತೆಗೆ ನೀರೆರೆಯುವುದು ಕಾಂಗ್ರೆಸ್ ಸಂಸ್ಕೃತಿ. ಇದು ಗಾಂಧಿ ಕುಟುಂಬ ನೆಟ್ಟ ಬೀಜ. ಇದನ್ನು ಬುಡ ಸಮೇತ ಕಿತ್ತೆಸೆದರೆ ಮಾತ್ರ ರಾಜ್ಯದಲ್ಲಿ ನೆಮ್ಮದಿ ಎಂದು ಟ್ವೀಟ್ ಮೂಲಕ ಬಿಜೆಪಿ ಟೀಕಿಸಿದೆ.

ಜೆಡಿಎಸ್‍ಗೆ ತಿರುಗೇಟು:
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕುರಿತು ಎಚ್‍ಡಿಕೆ ಹೇಳಿಕೆಗೆ ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಳೆ ಕರ್ನಾಟಕ ಭಾಗದ ಬ್ರಾಹ್ಮಣರಂತೆ ಒಳ್ಳೆಯ ಸಂಸ್ಕೃತಿಯವರಲ್ಲ. ಶೃಂಗೇರಿ ಮಠವನ್ನು ಧ್ವಂಸ ಮಾಡಿದ ಹಾಗೂ ಮಹಾತ್ಮ ಗಾಂಧಿಯನ್ನು ಕೊಂದ ವಂಶಕ್ಕೆ ಸೇರಿದ ಬ್ರಾಹ್ಮಣರು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದರು.

ಮುಂದಿನ ಚುನಾವಣೆಯ ಬಳಿಕ ಪ್ರಹ್ಲಾದ್ ಜೋಶಿಯನ್ನು ಕರ್ನಾಟಕದ ಸಿಎಂ ಮಾಡುವ ಹುನ್ನಾರ ಆರ್‍ಎಸ್‍ಎಸ್‍ನಲ್ಲಿ ನಡೆಯುತ್ತಿದೆ. ಆ ಕಾರಣಕ್ಕಾಗಿ ಅವರು ನಮ್ಮ ಕುಟುಂಬದ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ ಆರೋಪಿಸಿದ್ದರು.

ಒಬ್ಬರಾದ ಮೇಲೊಬ್ಬರಂತೆ ಜೆಡಿಎಸ್ ಶಾಸಕರು, ಪಕ್ಷ ತೊರೆಯುತ್ತಿರುವುದರಿಂದ, ಹತಾಶ ರಾಗಿರುವ ಕುಮಾರಸ್ವಾಮಿಯವರು, ಬ್ರಾಹ್ಮಣರ ನಿಂದನೆ ಯನ್ನು ಜಾತ್ಯತೀತ ಮನೋಭಾವ ಎಂದು ಭಾವಿಸಿರುವಂತಿದೆ. ಪ್ರಹ್ಲಾದ್ ಜೋಶಿ ಅವರು ಬಿಜೆಪಿಯ ಹಿರಿಯ ಗೌರವಾನ್ವಿತ, ನಾಯಕರು. ಒಂದು ಜಾತಿಯನ್ನು ಪ್ರತಿನಿಧಿಸುವ ನಾಯಕರು ಅವರಲ್ಲ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ಸಂಕುಚಿತ ಮನಸ್ಥಿತಿಯ ರಾಜಕೀಯ ಮಾಡುವ ವ್ಯಕ್ತಿತ್ವವು ಅವರದಲ್ಲ. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುವ ಬಿಜೆಪಿಯ ಮನೋಭಾವದೊಂದಿಗೆ ಹಾಸುಹೊಕ್ಕಾಗಿರುವ ಎಂದು ಹಿರಿಯ ನಾಯಕರನ್ನು ಜಾತಿಯ ಹೆಸರು ಹೇಳಿ ನಿಂದನೆ ಮಾಡಿರುವುದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಘನತೆಗೆ ಶೋಭೆ ತರುವಂತದ್ದಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಪುನೀತ್‍ ರಾಜ್‍ಕುಮಾರ್ ರಸ್ತೆ ನಾಮಕರಣಕ್ಕೆ ಶ್ರಮಿಸಿದವರನ್ನು ಮರೆತಿರುವುದಕ್ಕೆ ಆಕ್ರೋಶ

ಎಚ್.ಡಿ.ಕುಮಾರಸ್ವಾಮಿ ಅವರು ಬ್ರಾಹ್ಮಣರ ಬಗ್ಗೆ ಕೀಳಾಗಿ ಮಾತನಾಡಿದ್ದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಸ್ವಾತಂತ್ರ್ಯ ಹೋರಾಟದಲ್ಲಿಯೂ ಬ್ರಾಹ್ಮಣರ ತ್ಯಾಗ, ಬಲಿದಾನ ಸಾಕಷ್ಟಿದೆ. ಯಾವುದೇ ಜಾತಿಯ ಬಗ್ಗೆ ಈ ರೀತಿ ಕೀಳಾಗಿ ಮಾತನಾಡುವುದು ಮಾಜಿ ಮುಖ್ಯಮಂತ್ರಿಯಾಗಿದ್ದವರಿಗೆ ಶೋಭೆ ತರುವಂತದ್ದಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಜೆಡಿಎಸ್‍ಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದನ್ನು ತಿಳಿದು ಅಸಹಾಯಕತೆ ಹಾಗೂ ಹತಾಶೆಯಿಂದ ಮಾತನಾಡು ತ್ತಿದ್ದಾರೆ ಅನಿಸುತ್ತದೆ. ಅವರು ತಕ್ಷಣ ಬ್ರಾಹ್ಮಣ ಸಮಾಜದ ಕ್ಷಮೆ ಕೇಳಬೇಕೆಂದು ನಾನು ಆಗ್ರಹಿಸಿದ್ದಾರೆ.

ಪಾಕಿಸ್ತಾನದಲ್ಲಿ ವಿಕಿಪಿಡಿಯಾ ನಿರ್ಬಂಧ ತೆರವು

ಎಚ್‍ಡಿಕೆ ಮಾತುಗಳು ಖಂಡನೀಯ. ಸಾಮಥ್ರ್ಯವಿದ್ದರೆ ರಾಜಕೀಯ ಟೀಕೆಗೆ ರಾಜಕೀಯವಾಗಿ ಉತ್ತರ ಕೊಡಿ. ತಮ್ಮ ಸಂಬಂಗಳನ್ನೇ ಜನ ಪ್ರತಿನಿಧಿಗಳಾಗಿಸಿರುವ ಪಕ್ಷದ ಕುಮಾರಸ್ವಾಮಿಯವರು ಪ್ರಹ್ಲಾದ್ ಜೋಶಿಯವರ ಜಾತಿ ವಿಷಯದ ಬಗ್ಗೆ ಮಾತನಾಡುವುದು ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.

HD Kumaraswamy, remark, on, Brahmins,

Articles You Might Like

Share This Article