ಹೆಚ್‌ಡಿಕೆ ಅಡ್ಡಗಟ್ಟಿ ಶಾಲೆಗೆ ಕರೆದೊಯ್ದ ಮಕ್ಕಳು

Social Share

ಕೋಲಾರ,ನ.23- ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ರೊಜರನಹಳ್ಳಿ ಕ್ರಾಸ್ ಮತ್ತು ಬಂಗವಾದಿ ಗ್ರಾಮದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ರಸ್ತೆಯಲ್ಲೇ ಅಡ್ಡಗಟ್ಟಿದ ಶಾಲಾ ಮಕ್ಕಳು ಸೋರುತ್ತಿರುವ ತಮ್ಮ ಶಾಲೆಯ ದರ್ಶನ ಮಾಡಿಸಿದ್ದಾರೆ.

ಕುಮಾರಸ್ವಾಮಿ ಅವರನ್ನು ಶಾಲೆಗೆ ಕರೆದುಕೊಂಡು ಹೋದ ಮಕ್ಕಳು ಶ್ರೀನಿವಾಸಪುರ ಕ್ಷೇತ್ರದ ಮಾಸ್ತೇನಹಳ್ಳಿಯ ಶಾಲೆ ಸೋರುತ್ತಿರುವುದನ್ನು ತೋರಿಸಿದ್ದಾರೆ. ಸೋರುತ್ತಿರುವ ಶಾಲೆ, ಶಿಥಿಲವಾದ ಶಾಲಾ ಕಟ್ಟಡ ತೋರಿಸಿ ಮಕ್ಕಳು ಕಣ್ಣೀರಿಟ್ಟು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

ರಸ್ತೆಯಲ್ಲೇ ಕುಮಾರಸ್ವಾಮಿ ಅವರನ್ನು ತಬ್ಬಿಕೊಂಡ ಶಾಲಾ ಮಕ್ಕಳು ತಾವು ಓದುತ್ತಿರುವ ಶಾಲೆಯ ದುಸ್ಥಿತಿಯ ಬಗ್ಗೆ ಕಣ್ಣೀರು ಸುರಿಸಿದ್ದಾರೆ. ಮಕ್ಕಳ ಜತೆ ಶಾಲೆಗೆ ಆಗಮಿಸಿ ಕಟ್ಟಡದ ಶಿಥಿಲಾವಸ್ಥೆ ವೀಕ್ಷಿಸಿದ ಹೆಚ್.ಡಿ.ಕುಮಾರಸ್ವಾಮಿ ಅವರ ಮುಂದೆ ಬೇರೆ ತರಗತಿ ಕೊಠಡಿಗಳಿಲ್ಲ ಎಂದು ಅಳಲು ತೋಡಿಕೊಂಡರು. ಎಷ್ಟೇ ಮನವಿ ಕೊಟ್ಟರೂ ಯಾರು ಸ್ಪಂದಿಸುತ್ತಿಲ್ಲ ಎಂದು ಶಾಲಾ ಬಾಲಕ ಕಣ್ಣೀರು ಸುರಿಸುವುದನ್ನು ಕಂಡ ಕುಮಾರಸ್ವಾಮಿ ಅವರು, ಶಾಲೆಗೆ ಎಷ್ಟು ಕೊಠಡಿ ಬೇಕಾಗಿದೆ ಎಂದು ವಿಚಾರಿಸಿ ಮನವಿ ಪತ್ರ ಸ್ವೀಕರಿಸಿದ್ದಾರೆ.

ರಮೇಶ್ ಕುಮಾರ್ ವಿರುದ್ಧ ಬಳಸಿದ್ದ ಅಸಂಬದ್ಧ ಪದ ವಾಪಸ್ ಪಡೆದ ಹೆಚ್‌ಡಿಕೆ

ಮನವಿ ಪತ್ರ ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಕುಮಾರಸ್ವಾಮಿ ಅವರು, ಆ ಬಾಲಕನಿಗೆ ಏನ್ ಪೊಲೀಸ್ ಆಗುತ್ತೀಯಾ ಎಂದಾಗ ಸಮ್ಮತಿ ಸೂಚಿಸಿದ್ದಾನೆ.

ಬಳಿಕ ಶ್ರೀನಿವಾಸಪುರ ತಾಲ್ಲೂಕಿನ ಬಂಗವಾದಿ ಗ್ರಾಮದಲ್ಲಿ ಕುಮಾರಸ್ವಾಮಿ ಅವರ ಕಾರಿಗೆ ಅಡ್ಡಲಾಗಿ ಧರಣಿ ಕುಳಿತ ಮಕ್ಕಳು, ಶಾಲಾ ಕಟ್ಟಡ ಬೇಕು ಎಂದು ಪ್ರತಿಭಟನೆ ಮಾಡಿ, ಶಾಲಾ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರೂ ಯಾರೂ ತಲೆಕೆಡಿಸಿಕೊಂಡಿಲ್ಲ ಎಂದು ಅಳಲು ತೋಡಿಕೊಂಡರು.

ಮಕ್ಕಳ ಪ್ರತಿಭಟನೆ ಕಂಡು ಶಾಲಾ ಕಟ್ಟಡ ನೋಡಲು ತೆರಳಿದ ಕುಮಾರಸ್ವಾಮಿ ಅವರು, ಸ್ಥಳದಲ್ಲಿಯೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ನಾಗೇಶ್ ಅವರಿಗೆ ಕರೆ ಮಾಡಿದ ಕುಮಾರಸ್ವಾಮಿ ಅವರು, ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ತಕ್ಷಣವೇ ಸಮಸ್ಯೆ ಬಗೆಹರಿಸಿಕೊಡುವ ಭರವಸೆಯನ್ನು ಸಚಿವರು ನೀಡಿದ್ದಾರೆ. ಇದೇ ವೇಳೆ ಕೋಲಾರದ ಡಿಡಿಪಿಐಗೆ ಕರೆ ಮಾಡಿದ ಕುಮಾರಸ್ವಾಮಿ ಅವರು ಶಾಲಾ ಕಟ್ಟಡ ದುರಸ್ಥಿತಿಗೆ ಗಮನ ಹರಿಸುವಂತೆ ಸಲಹೆ ಮಾಡಿದರು.

ಭಯೋತ್ಪಾದನೆ ನಿಗ್ರಹಕ್ಕೆ ಸರ್ಕಾರ ಬದ್ಧ : ಆರಗ ಜ್ಞಾನೇಂದ್ರ

ಭಾವುಕರಾದ ಮಕ್ಕಳನ್ನು ಶಾಲೆಯ ಕಟ್ಟಡದ ದುಸ್ಥಿತಿ ಕಂಡು ಮಮ್ಮಲ ಮರುಗಿದ ಕುಮಾರಸ್ವಾಮಿ, ಅಶ್ವತ್ಥ ಕಟ್ಟೆ ಮೇಲೆ ಕಳೆದ 3 ವರ್ಷದಿಂದ ಪಾಠ ನಡೆಯುತ್ತಿದೆ ಎಂದಾಗ ಗದ್ಗದಿತರಾದರು.

ಪಂಚರತ್ನ ರಥಯಾತ್ರೆ ಅಂಗವಾಗಿ ನಿನ್ನೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ಹಾಗೂ ಬೃಹತ್ ಸಮಾವೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದಲ್ಲದೆ, ಯಾತ್ರೆಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಜೆಡಿಎಸ್ ರಾಜ್ಯ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕ್ಷೇತ್ರದ ಜೆಡಿಎಸ್ಅಭ್ಯರ್ಥಿ ವೆಂಕಟಶಿವಾರೆಡ್ಡಿ ಮುಂತಾದವರು ಭಾಗವಹಿಸಿದ್ದರು.

hd kumaraswamy, srinivasapura, jds, pancharatna, yatra, school, Children,

Articles You Might Like

Share This Article