ಮತಪತ್ರ ಬೇರೆ ಯಾರಿಗೂ ತೋರಿಸಿಲ್ಲ : ಎಚ್.ಡಿ.ರೇವಣ್ಣ

Spread the love

ಬೆಂಗಳೂರು,ಜೂ.10- ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಏಜೆಂಟರಿಗೆ ಮತಪತ್ರ ತೋರಿಸಿ ಮತದಾನ ಮಾಡಿದ್ದು, ಬೇರೆ ಯಾರಿಗೂ ತೋರಿಸಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.

ಮತದಾನ ಮಾಡುವ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮತಪತ್ರವನ್ನು ತೋರಿಸಿದ್ದಾರೆ ಎಂಬ ಬಿಜೆಪಿ ಮತ್ತು ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ. ಇದಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರು ನೀಡಿರುವ ಹೇಳಿಕೆಯೇ ಸಾಕ್ಷಿ ಎಂದರು.

ಬೇರೆ ಪಕ್ಷದವರಿಗೆ ತಮ್ಮ ಮತ ಹಾಕುವ ಅನಿವಾರ್ಯತೆ ಏನೂ ಇಲ್ಲ. ನಮ್ಮ ಪಕ್ಷದ ಚುನಾವಣಾ ಏಜೆಂಟರಾಗಿದ್ದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ತೋರಿಸಿ ಮತದಾನ ಮಾಡಿರುವುದಾಗಿ ಹೇಳಿದರು.

Facebook Comments