ಬೆಂಗಳೂರು,ಡಿ.6-ಭೌಗೋಳಿಕ ಸಂಘರ್ಷಮಯ ವಾತಾವರಣದ ನಡುವೆಯೂ ಆಹಾರ, ರಸಗೊಬ್ಬರ, ವೈದ್ಯಕೀಯ ಉತ್ಪನ್ನಗಳ ಸರಬರಾಜನ್ನು ರಾಜಕೀಯ ಮುಕ್ತಗೊಳಿಸಲು ಪ್ರಯತ್ನಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ಮಾಡಿದ್ದಾರೆ.
ಭಾರತವು ಜಿ-20 ಶೃಂಗ ರಾಷ್ಟ್ರಗಳ ಕೂಟದ ಅಧ್ಯಕ್ಷತೆ ವಹಿಸಿಕೊಂಡ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಲು ನಿನ್ನೆ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿರುವ ದೇವೇಗೌಡರು ಪಾಲ್ಗೊಂಡಿದ್ದು, ಕೆಲವು ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳ ಅಂಶಗಳನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ.
I was at the meeting called by PM @narendramodi to discuss India’s G20 presidency, y’day. “To see the world as one family is a beginning of a lot of good things” is what I feel. Here is my statement. I am also thankful to the PM for enquiring after my health. @g20org @PMOIndia pic.twitter.com/1M3lvdHLRM
— H D Devegowda (@H_D_Devegowda) December 6, 2022
ಜಿ-20 ಶೃಂಗದ ಅಧ್ಯಕ್ಷತೆ ವಹಿಸಿ ಬಂದಿದ್ದಕ್ಕಾಗಿ ಪ್ರಧಾನಿ ಅವರನ್ನು ಅಭಿನಂಧಿಸಿರುವ ಗೌಡರು, ನಮ್ಮ ದೇಶದ ಜೀವಮಾನದ ಈ ಅವಕಾಶ ಗಮನಾರ್ಹವಾದುದು. ವಿಶ್ವದ ಆರ್ಥಿಕತೆ, ತಾಂತ್ರಿಕತೆ, ತಂತ್ರಜ್ಞಾನ, ವಿಜ್ಞಾನ, ಸಮಾಜಿಕ ಮತ್ತು ಪರಿಸರ ವೇದಿಕೆಗಳಲ್ಲಿ ನಮ್ಮ ಕೊಡುಗೆಗಳು ಅಪಾರವಾಗಿವೆ ಎಂದಿದ್ದಾರೆ.
ನಮ್ಮದು ಯುವ ಭಾರತ. ಈ ಅಧ್ಯಕ್ಷೀಯ ಅವಧಿಯು ಕ್ರಿಯಾತ್ಮಕ ಮತ್ತು ಶಕ್ತಿಯ ಏಕೀಕೃತ ಅರಿವಿಗೆ ಅವಕಾಶ ಮಾಡಿಕೊಡಲಿದೆ ಎಂಬ ವಿಶ್ವಾಸವಿದೆ. ಜಗತ್ತಿಗೆ ಪ್ರಧಾನಿ ಅವರು, ಸೌಹಾರ್ದತೆಯ ಕಾರ್ಯಸೂಚಿಯನ್ನು ಪ್ರಸ್ತುತ ಪಡಿಸಬೇಕು. ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಜಗತ್ತಿನ ಸಮೀಪಕ್ಕೆ ಕೊಂಡೊಯ್ಯುವ ಮಾತುಗಳನ್ನಾಡಬೇಕು ಎಂದು ಹೇಳಿದ್ದಾರೆ.
ಪರಸ್ಪರ ದೇಶದಗಳನ್ನು ಮತ್ತಷ್ಟು ಸಹಕಾರ ಮತ್ತು ಹತ್ತಿರವಾಗಿಸುವ ಕ್ರಮಗಳು ಸ್ವಾಗತಾರ್ಹ. ಆರ್ಥಿಕಾಭಿವೃದ್ಧಿ ಜತೆ ವಿಶ್ವಕ್ಕೆ ಪ್ರಸ್ತುತ ಸಾಮಾಜಿಕ, ಆಧ್ಯಾತ್ಮಿಕ ಮತ್ತು ಪರಿಸರ ಶ್ರೇಯೋಭಿವೃದ್ಧಿಯ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಚೀನಿ ಹ್ಯಾಕರ್ ದಾಳಿ : ಅಮ್ನೆಸ್ಟಿ ಇಂಟರ್ ನ್ಯಾಶನಲ್ ಆಕ್ರೋಶ
ಇತ್ತೀಚಿನ ದಿನಗಳಲ್ಲಿ ಸೇನೆ ಮತ್ತು ಆರ್ಥಿಕ ಶಿಸ್ತಿನ ವೈಭವೀಕರಣಗಳು ಸೃಷ್ಟಿಸಿರುವ ಸಮಸ್ಯೆಗಳಿಗೆ ಸಾಂಸ್ಕøತಿಕ ಪರಿಸರವು ಪರಿಹಾರ ಒದಗಿಸಬಲ್ಲುದು ಎಂದಿರುವ ಅವರು, ಆಹಾರ, ರಸಗೊಬ್ಬರ, ವೈದ್ಯಕೀಯ ಉತ್ಪನ್ನಗಳ ಸರಬರಾಜನ್ನು ಮಾನವ ನಿರ್ಮಿತ ಸಂಕಷ್ಟಗಳಿಂದ ಧಕ್ಕೆಗೆ ಒಳಗಾಗದಂತೆ ಕಾಪಾಡಲು ದಿಟ್ಟ ಮತ್ತು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ಮಾಡಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಯುದ್ಧ ಸಂದರ್ಭದಲ್ಲಿ ಶಾಂತಿಪಾಲನೆಗಾಗಿ ಪ್ರಧಾನಿಯವರ ಪ್ರಯತ್ನಗಳಿಗೆ ನಾನು ಸಹಮತ ವ್ಯಕ್ತಪಡಿಸುತ್ತೇನೆ. ಇದು ಯುದ್ಧದ ಕಾಲವಲ್ಲ ಎಂಬ ಅಭಿಪ್ರಾಯ ಸತ್ಯವಾದದು ಮತ್ತು ನಮ್ಮ ದೇಶದ ಪಿತಾಮಹಾರ ಪ್ರತಿಬಿಂಬದ ಸ್ಪೂರ್ತಿ. ನಾವು ಸ್ವಾತಂತ್ರ್ಯವನ್ನು ಅಹಿಂಸೆ ಮತ್ತು ಮಹಾತ್ಮ ಗಾಂಧಿಜಿ ಅವರ ಮಾರ್ಗದ ಮೂಲಕ ಪಡೆದಿದ್ದೇವೆ ಎಂದಿದ್ದಾರೆ.
ಸಿರ್ಸಿ ವೃತ್ತದಿಂದ ವಿಜಯನಗರ ಪೈಪ್ಲೈನ್ವರೆಗೆ ರಸ್ತೆ ಅಗಲೀಕರಣ
ವಿಶ್ವವೇ ಒಂದು ಕುಟುಂಬ ಎಂಬ ಸಿದ್ಧಾಂತದಂತೆ ಹಲವಾರು ಒಳಿತುಗಳನ್ನು ಅರಂಭಿಸಲಿವೆ. ಜಿ.20 ಅಧ್ಯಕ್ಷೀಯ ಅವಧಿಯಲ್ಲಿ ಉತ್ತಮ ನಿರ್ಧಾರಗಳು ಹೊರಬೀಳಲಿ ಎಂದು ದೇವೇಗೌಡರು ಹಾರೈಸಿದ್ದಾರೆ.
HDDeveGowda, PMModi, G-20Summit,