ಮಂಡ್ಯ ಚುನಾವಣೆಯಲ್ಲಿ ಎಲ್ಲರೂ ಸೇರಿ ನಮ್ಮನ್ನು ಸೋಲಿಸಿದರು: ಎಚ್‍ಡಿಕೆ

Spread the love

ಮದ್ದೂರು, ನ.22- ಎಲ್ಲರೂ ಸೇರಿ ಚುನಾವಣೆಯಲ್ಲಿ ಸೋಲಿಸುವ ಮೂಲಕ ನಮ್ಮನ್ನು ಮುಗಿಸಿಬಿಟ್ಟರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೊಂದು ನುಡಿದರು. ಬ್ಯಾಡರಹಳ್ಳಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಸ್ರ್ಪಸುವುದು ಬೇಡ ಎಂದು ಹೇಳಿದ್ದೆ.

ಆದರೆ, ಎಲ್ಲರೂ ಒತ್ತಡ ತಂದು ಚುನಾವಣೆಗೆ ಸ್ರ್ಪಸುವಂತೆ ಮಾಡಿದರು. ಎಲ್ಲರ ಒತ್ತಡಕ್ಕೆ ಮಣಿದು ಚುನಾವಣೆಯಲ್ಲಿ ನಿಖಿಲ್ ಸ್ರ್ಪಸಬೇಕಾಯಿತು. ನಂತರ ನಮ್ಮನ್ನು ಸೋಲಿಸಿದರು. ಇದರಿಂದ ಮಂಡ್ಯ ಜಿಲ್ಲೆ ಬಗ್ಗೆ ಯಾವುದೇ ಬೇಸರವಿಲ್ಲ. ಜಿಲ್ಲೆಯ ಜನರು ಮುಗ್ದರಾಗಿದ್ದು, ಎಲ್ಲವನ್ನೂ ನಂಬುತ್ತಾರೆ ಎಂದು ಹೇಳಿದರು.

ರಾಜಕೀಯದಿಂದಲೇ ನಿವೃತ್ತಿಯಾಗಬೇಕು ಎಂದುಕೊಂಡಿದ್ದೆ. ಹಾಗೊಂದು ವೇಳೆ ಮಾಡಿದರೆ ಜನರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಕಾರಣಕ್ಕೆ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿಯಬೇಕಾಯಿತು ಎಂದು ಹೇಳಿದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಪರಾಜಯ ಹೊಂದಿದ್ದನ್ನು ಪ್ರಸ್ತಾಪಿಸಿ ಕುಮಾರಸ್ವಾಮಿ ಮೇಲಿನಂತೆ ಪ್ರತಿಕ್ರಿಯಿಸಿದರು.

Facebook Comments