ತೆಂಗಿನ ಮರ ಹತ್ತಿದ್ದ ವ್ಯಕ್ತಿಗೆ ಹೃದಯಾಘಾತವಾಗಿ ಅಲ್ಲೇ ಸಾವು

Social Share

ಬೆಂಗಳೂರು, ಫೆ.6- ಕಾಯಿ ಕೀಳಲು ತೆಂಗಿನ ಮರ ಹತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮರದ ಮೇಲೆಯೇ ಮೃತಪಟ್ಟಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ನಾರಾಯಣಪ್ಪ(60) ಮೃತಪಟ್ಟ ವರು. ಇಂದು ಬೆಳಗ್ಗೆ 7.30ರ ಸುಮಾರಿನಲ್ಲಿ ಈ ಘಟನೆ ನಡೆದಿದೆ.

ಮೈಲಸಂದ್ರದ ವಿಜಯಶ್ರೀ ಲೇಔಟ್‍ನ ವೆಂಕಟರಮಣ ದೇವಸ್ಥಾನದ ಸಮೀಪ ಸುಮಾರು 40 ಅಡಿ ಎತ್ತರದ ಮರದಲ್ಲಿ ತೆಂಗಿನ ಕಾಯಿ ಕೀಳಲು ನಾರಾಯಣಪ್ಪ ಹತ್ತಿ ತೆಂಗಿನ ಗರಿ ಮೇಲೆ ಕುಳಿತಿದ್ದಾರೆ.

ಆ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ. ಇದು ಯಾರ ಗಮನಕ್ಕೂ ಬಂದಿಲ್ಲ. ನಾರಾಯಣ ಕೆಳಗೆ ಇಳಿಯದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಅಗ್ನಿಶಾಮಕದಳಕ್ಕೆ ವಿಷಯ ತಿಳಿಸಿದ್ದಾರೆ.

ಕಲ್ಪತರು ನಾಡನ್ನು ವಿಶ್ವ ಮಟ್ಟಕ್ಕೆ ಕೊಂಡೋಯ್ದ ಹೆಲಿಕಾಪ್ಟರ್ ತಯಾರಿಕಾ ಘಟಕ

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಕೆಂಗೇರಿ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ವಾಹನದ ನೆರವಿನಿಂದ ತೆಂಗಿನ ಮರದ ಮೇಲೆ ಕುಳಿತಿದ್ದ ನಾರಾಯಣಪ್ಪ ಅವರನ್ನು ಕೆಳಗಿಳಿಸಿ ನೋಡಿದಾಗ ಅವರು ಮೃತಪಟ್ಟಿರುವುದು ಗೊತ್ತಾಗಿದೆ.

ಮೃತದೇಹವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

heart attack , coconut tree, Bengaluru,

Articles You Might Like

Share This Article