Saturday, September 23, 2023
Homeಆರೋಗ್ಯ / ಜೀವನಶೈಲಿಜೀವಕ್ಕೆ ಕುತ್ತಾಗುತ್ತಿದೆ ರಕ್ತನಾಳಗಳ ಸಮಸ್ಯೆ, ಇರಲಿ ಎಚ್ಚರ

ಜೀವಕ್ಕೆ ಕುತ್ತಾಗುತ್ತಿದೆ ರಕ್ತನಾಳಗಳ ಸಮಸ್ಯೆ, ಇರಲಿ ಎಚ್ಚರ

- Advertisement -

ಮನುಷ್ಯನ ಆರೋಗ್ಯಕರ ಜೀವನಕ್ಕೆ ಸುಗಮ ರಕ್ತ ಸಂಚಲನ ಅತ್ಯಗತ್ಯವಾಗಿದುಇದನ್ನು ಕಾಪಾಡಿಕೊಳ್ಳಬೇಕಾದರೆ ರಕ್ತನಾಳಗಳ ಅಡಚಣೆ, ಹಾನಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸುವ ಅಗತ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿ ವ್ಯಾಸ್ಕ್ಯೂಲರ್ ಸೊಸೈಟಿ ಆಫ್ ಇಂಡಿಯಾ ಫೌಂಡೇಷನ್ ಟು ವ್ಯಾಸ್ಕ್ಯೂಲರ್ ಸಂಸ್ಥೆಗಳು ವ್ಯಾಪಕವಾಗಿ ಜನಜಾಗೃತಿ ಮೂಡಿಸಿವೆ.

ರಕ್ತನಾಳಗಳ ಬಗ್ಗೆ ಪ್ರತಿಯೊಬ್ಬರಿಗೂ ತಿಳುವಳಿಕೆ ಬಹಳ ಅಗತ್ಯವಿದೆ. ಇವು ದೇಹದ ಜೀವನಾಡಿಗಳಾಗಿದ್ದು, ಹೃದಯದಿಂದ ಚುಮ್ಮುವ ರಕ್ತದೊಂದಿಗೆ ಶ್ವಾಸಕೋಶದೊಂದಿಗಿನ ಆಮ್ಲಜನಕವನ್ನು ಗ್ರಹಿಸಿ ದೇಹದ ಮೂಲೆ ಮೂಲೆಗೆ ತಲುಪಿಸುತ್ತವೆ. ಮಿದುಳಿನಿಂದ ಹಿಡಿದು ಹೆಬ್ಬೆರಳವರೆಗೂ ಸುಮಾರು ಒಂದು ಸಾವಿರ ಕಿ.ಮೀಗೂ ಉದ್ದವಾದ ರಕ್ತ ನಾಳಗಳ ವ್ಯೂಹವೇ ಇದೆ. ಯಾವುದೇ ಭಾಗದಲ್ಲಿ ನಾಳಗಳಲ್ಲಿ ಅಡಚಣೆ ಉಂಟಾಗಿದ್ದರೆ ಅದು ಆರೋಗ್ಯದ ಏರುಪೇರಿಗೆ ಕಾರಣವಾಗುವುದಲ್ಲದೆ ಒಂದರ ಮೇಲ್ಲೊಂದರಂತೆ ಸರಣಿ ಅನಾರೋಗ್ಯ ಸಮಸ್ಯೆಗಳಿಗೆ ಅವಕಾಶ ಕಲ್ಪಿಸುತ್ತದೆ.

- Advertisement -

ಭಾರತದ ಜನಸಂಖ್ಯೆಯಲ್ಲಿ ಶೇ.5ರಷ್ಟು ಮಂದಿ ರಕ್ತನಾಳಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರ ಜೊತೆಯಲ್ಲಿ ಮಧುಮೇಹವೂ ಹೆಚ್ಚಾಗುತ್ತಿದೆ. ಹೀಗಾಗಿ ರಕ್ತನಾಳದ ರೋಗಿಗಳ ಸಂಖ್ಯೆ ವಾರ್ಷಿಕ ಶೇ.10ರಷ್ಟು ಏರಿಕೆ ಕಾಣುತ್ತಿದೆ. ವ್ಯಾಸ್ಕ್ಯೂಲರ್ ಸೊಸೈಟಿ ಆಫ್ ಇಂಡಿಯಾದ ಮುಖ್ಯ ಚಿಕಿತ್ಸಕರಾದ ಡಾ.ಪಿ.ಎಲ್.ರವಿಕುಮಾರ್ ಅವರ ಪ್ರಕಾರ, ಮಧುಮೇಹ, ರಕ್ತನಾಳದ ಸಮಸ್ಯೆಗೆ ನೇರ ಕಾರಣವಾಗಿದೆ.
ಭಾರತ ವಿಶ್ವದ ಮಧುಮೇಹಿಗಳ ರಾಜಧಾನಿ ಎಂದೇ ಗುರುತಿಸಿಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಆತಂಕಕಾರಿ ಸಮಸ್ಯೆಗಳು ಎದುರಾಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.

ಮಧುಮೇಹ, ಅನುವಂಶಿಕ ಪ್ರವೃತ್ತಿ, ಅಕ ರಕ್ತದೊತ್ತಡ ಮತ್ತು ಧೂಮಪಾನದಿಂದಾಗಿ ರಕ್ತನಾಳಗಳ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಧೂಮಪಾನ ಮಾಡದವರಿಗಿಂತಲೂ ಧೂಮಪಾನಿಗಳಲ್ಲಿ ಶೇ.25ರಷ್ಟು ಅಪಾಯದ ಸನ್ನಿವೇಶಗಳು ಹೆಚ್ಚಾಗಿವೆ. ಪ್ಲೇಕ್ ಎಂಬ ಕೊಬ್ಬಿನ ಪದಾರ್ಥ ಶೇಖರಣೆಯಿಂದ ಅಪಧಮನಿಗಳು ಗಟ್ಟಿಯಾಗುವುದು ಅಥವಾ ಕಿರಿದಾಗುವುದರಿಂದ ಮಧುಮೇಹ ಉದ್ಭವಿಸುತ್ತದೆ.

ಮಧ್ಯರಾತ್ರಿ ಪ್ರೇಯಸಿ ನೋಡಲು ಹೋದಾಗ ಟೆರೆಸ್‍ನಿಂದ ಹಾರಿ ಪ್ರಾಣಬಿಟ್ಟ ಪ್ರಿಯಕರ

ಸಾಮಾನ್ಯವಾಗಿ ಮಧುಮೇಹಿಗಳು ಹೆಚ್ಚು ಕೊಲೆಸ್ಟ್ರಾಲ್‍ನ್ನು ಹೊಂದಿರುತ್ತಾರೆ. ಮಧುಮೇಹ ಮತ್ತು ಕೊಲೆಸ್ಟ್ರಾಲ್ ಸಮಸ್ಯೆಗಳಿದ್ದಾಗ ಪ್ಲೇಕ್ ಹೆಚ್ಚು ಶೇಖರಣೆಯಾಗುತ್ತದೆ. ಕಾಲಾನಂತರ ರಕ್ತದಲ್ಲಿಸಕ್ಕರೆ ಅಂಶ ಹೆಚ್ಚಾಗಿ, ಕಣ್ಣು, ಕಿಡ್ನಿ, ಹೃದಯ ಮತ್ತು ಕಾಲಿನ ಕೆಳಭಾಗಗಳಿಗೆ ಹಾನಿಯಾಗುತ್ತದೆ.ರಕ್ತನಾಳಗಳ ಸಮಸ್ಯೆಗಳಿಂದ ಕಾಲು ಮತ್ತು ಪಾದಗಳಿಗೆ ಘಾಸಿಯಾಗುತ್ತಿವೆ. ಸಮಸ್ಯೆ ಅಳತೆ ಮೀರಿದಾಗ ನಡೆದಾಡಲು ಕಷ್ಟವಾಗುತ್ತದೆ. ನಿಶಕ್ತಿ ಹೆಚ್ಚಾಗುತ್ತದೆ. ಇದನ್ನು ಪೆರಿಪೆರಲ್ ಆರ್ಟರಿ(ಪಿಎಡಿ) ಡಿಸೀಸ್ ಎಂದು ಕರೆಯಲಾಗುತ್ತದೆ.

ಭಾರತದಲ್ಲಿ ರಕ್ತನಾಳಗಳ ಸಮಸ್ಯೆಗಳಿಂದ ಬಳಲುತ್ತಿರುವ ಶೇ.2ರಷ್ಟು ಜನರಿಗೆ ಕಾಲುಗಳನ್ನು ಕತ್ತರಿಸಲಾಗಿದೆ. ಜಾಗತಿಕ ಅಂಕಿಅಂಶಗಳ ಪ್ರಕಾರ ರಕ್ತನಾಳ ಸಮಸ್ಯೆಯಿಂದ ಪ್ರತಿ 6 ಸೆಕೆಂಡ್‍ಗೆ ಒಬ್ಬರ ಅಂಗಚ್ಛೇಧನಕ್ಕೊಳಗಾಗುತ್ತಿದ್ದಾರೆ.60 ವರ್ಷ ಮೇಲ್ಪಟ್ಟವರು ಇಂತಹ ಸಮಸ್ಯೆಗಳಿಗೆ ಹೆಚ್ಚು ತುತ್ತಾಗುತ್ತಿದ್ದಾರೆ. ಕಾಲು ನೋವು, ಸೆಳೆತ, ಕಾಲು ಬೆರಳುಗಳ ಬಣ್ಣ ಬದಲಾವಣೆ ಮತ್ತು ಹುಣ್ಣುಗಳಂತಹ ಲಕ್ಷಣಗಳಿದ್ದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.

ಇತ್ತೀಚಿನ ದಿನಗಳಲ್ಲಿ ಆಧುನಿಕ ತಂತ್ರಜ್ಞಾನ ಉತ್ತಮ ಚಿಕಿತ್ಸಾ ವ್ಯವಸ್ಥೆಯನ್ನು ಕಲ್ಪಿಸಿದೆ. ವ್ಯಾಪಕವಾದ ಪ್ರಕ್ರಿಯೆಗಳು ಲಭ್ಯವಿದೆ. ನಿಯಮಿತವಾದ ವ್ಯಾಯಾಮ, ಆರೋಗ್ಯಕರ ಜೀವನಶೈಲಿ, ಆಹಾರ ಪದ್ದತಿಯಿಂದಾಗಿ ರಕ್ತನಾಳಗಳ ಸಮಸ್ಯೆಯನ್ನು ತಡೆಯಬಹುದಾಗಿದೆ.

ರಕ್ತನಾಳಗಳಲ್ಲಿ ಕಂಡುಬರುವ ಸಣ್ಣಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ. ಅಪಧಮನಿಗಳು ಜೀವದ ಕೇಂದ್ರಬಿಂದುವಾಗಿದ್ದು, ಅವುಗಳ ಸುರಕ್ಷತೆಗೆ ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಬೇಕು.

ಕಿಡ್ನಿ ದಾನ ಮಾಡಿ ಸೊಸೆ ಜೀವ ಉಳಿಸಿದ ಅತ್ತೆ..!

ಸಾಮಾನ್ಯವಾಗಿ ಯಾವುದೇ ಅಸಹಜ ನೋವು, ಅಸೌಖ್ಯ ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು. ಒಂದು ವೇಳೆ ಕಡೆಗಣಿಸಿದರೆ ಹೃದಯಘಾತ, ಪಾಶ್ವರ್ವಾಯು ಮುಂತಾದ ಗಂಭೀರ ಸಮಸ್ಯೆಗಳಿಗೆ ತುತ್ತಾಗಹುದು. ಈ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಅಗತ್ಯವಿದೆ.

heart, #blood, #circulation,

- Advertisement -
RELATED ARTICLES
- Advertisment -

Most Popular