ರಾಜ್ಯದಲ್ಲಿ ದಿನೇದಿನೇ ಹೆಚ್ಚುತ್ತಿರುವ ಬಿಸಿಗಾಳಿಯಿಂದ ತಪ್ಪಿಸಿಕೊಳ್ಳೋದು ಹೇಗೆ..?

Social Share

ಬೆಂಗಳೂರು,ಮಾ.7- ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಬಿಸಿಗಾಳಿ ಹಾವಳಿಯಿಂದ ತಪ್ಪಿಸಿಕೊಳ್ಳಲು ಕೆಲವು ಕಟ್ಟುನಿಟ್ಟಿನ ಸೂಚನೆ ಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದೆ. ಉಷ್ಣಾಂಶ ಏರಿಕೆಯಿಂದ ನಾನಾ ರೀತಿಯ ಅನಾರೋಗ್ಯ ಪರಿಸ್ಥಿತಿಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಕೆಲವು ಸಲಹೆಗಳನ್ನು ಪಾಲಿಸುವಂತೆ ಇಲಾಖೆ ಸುತ್ತೋಲೆ ಹೊರಡಿಸಿದೆ.

ಬಾಯಾರಿಕೆ ಇಲ್ಲದಿದ್ದರೂ ಪದೇ ಪದೇ ನೀರು ಕುಡಿಯುತ್ತಿರಬೇಕು. ಪ್ರಯಾಣ ಸಮಯದಲ್ಲೂ ನೀರು ತೆಗೆದುಕೊಂಡು ಹೋಗಬೇಕು. ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು. ಹತ್ತಿ ಬಟ್ಟೆ ಧರಿಸುವುದು ಉತ್ತಮ ಇದರ ಜತೆಗೆ ಮನೆಯಲ್ಲೇ ಸಿದ್ದಪಡಿಸಿದ ನಿಂಬೆ ಶರಬತ್ತು, ಮಜ್ಜಿಗೆ, ಲಸ್ಸಿ, ಎಳನೀರು ಮತ್ತಿತರ ಹಣ್ಣಿನ ಜ್ಯೂಸ್ ಸೇವನೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ. ಮನೆಯಲ್ಲಿ ತಯಾರಿಸುವ ಜ್ಯೂಸ್‍ಗೆ ಒಂದು ಚಿಟಿಕೆ ಉಪ್ಪು ಬೇರೆಸಿ ಸೇವನೆ ಮಾಡುವುದು ಉತ್ತಮವಾಗಿದೆ.

ಬೆಳಿಗ್ಗೆ 11 ರಿಂದ 3 ಗಂಟೆ ವರೆಗೆ ಮನೆಯಿಂದ ಹೊರ ಹೋಗಬಾರದು ಒಂದು ವೇಳೆ ಹೊರ ಹೋಗಬೇಕಾದರೆ ಛತ್ರಿ, ಟೋಪಿ, ಟವಲ್ ಬಳಸುವುದು ಉತ್ತಮ ಎಂದು ತಿಳಿಸಲಾಗಿದೆ. ಬಿಸಿಲಿನಲ್ಲಿ ನಡೆದಾಡುವಾಗ ಕಾಲಿಗೆ ಕಡ್ಡಾಯವಾಗಿ ಪಾದರಕ್ಷೆ ಇಲ್ಲವೇ ಶೂ ಧರಿಸುವುದು ಸೂಕ್ತವಾಗಿರುತ್ತದೆ. ರೇಡಿಯೋ, ದೂರದರ್ಶನ ಹಾಗೂ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಾಮಾನದ ಮಾಹಿತಿ ಪಡೆದುಕೊಳ್ಳಬೇಕು.

ಮಾಡಾಳ್ ಮಿಸ್ಸಿಂಗ್ : ಹುಡುಕಿಕೊಡುವಂತೆ ಕಾಂಗ್ರೆಸ್ ಪೋಸ್ಟರ್ ಪಾಲಿಟಿಕ್ಸ್

ಮನೆಯಲ್ಲಿ ತಂಪು ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಬಿಸಿಗಾಳಿ ಮನೆ ಪ್ರವೇಶಿಸದಂತೆ ಎಚ್ಚರವಹಿಸಬೇಕು. ಹಗಲು ಹೊತ್ತಿನಲ್ಲಿ ಕಿಟಕಿಗಳನ್ನು ಪರದೆಗಳಿಂದ ಮುಚ್ಚು ವುದು ಸೂಕ್ತ. ರಾತ್ರಿಯ ಹೊತ್ತು ಕಿಟಕಿ ತೆರೆದು ನಿದ್ರಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಹೊರಂಗಣ ಚಟುವಟಿಕೆಗಳನ್ನು ಬೆಳಿಗ್ಗೆ ಇಲ್ಲವೆ ಸಂಜೆ ನಂತರವೇ ಕೈಗೊಳ್ಳುವುದು ಉತ್ತಮ ನಿರ್ಧಾರ ವಾಗಿದೆ. ಅದರಲ್ಲೂ ನವಜಾತ ಶಿಶುಗಳು, ಗರ್ಭಿಣಿಯರು, ಹೊರಂಗಣದಲ್ಲಿ ಕೆಲಸ ಮಾಡು ವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು, ಬಿಪಿ, ಸುಗರ್ ಮತ್ತಿತರ ಕಾಯಿಲೆ ಗಳಿಂದ ನರಳು ತ್ತಿರುವವರು ಈ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ.

ನೌಕರರ ಬೇಡಿಕೆಗಳಿಗೆ ಸ್ಪಂದಿಸಲು ಸೂಚನೆ; ಕೆಲಸದ ಸ್ಥಳಗಳಲ್ಲಿ ಮಾಲೀಕರು ಕುಡಿಯಲು ತಣ್ಣನೆಯ ನೀರಿನ ವ್ಯವಸ್ಥೆ ಮಾಡಬೇಕು. ಪ್ರತಿ 20 ನಿಮಿಷಗಳಿಗೊಮ್ಮೆ ಒಂದು ಗ್ಲಾಸ್ ಅಥವಾ ಅದಕ್ಕಿಂತ ಹೆಚ್ಚು ನೀರು ಕುಡಿಯುವಂತೆ ಪ್ರೋತ್ಸಾಹಿಸಬೇಕು. ಸೂರ್ಯನ ಬೆಳಕಿನಲ್ಲಿ ಕೆಲಸ ಮಾಡಲು ಒತ್ತಡ ಹೇರಬಾರದು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಹೋರಾಂಗಣದಲ್ಲಿ ಕೆಲಸ ಮಾಡುವವರಿಗೆ ತಾತ್ಕಲಿಕ ಶೆಡ್ ಹಾಕಬೇಕು. ಅಂತವರಿಗೆ ಪ್ರತಿ ಒಂದು ಗಂಟೆಗೆ 5 ನಿಮಿಷಗಳ ಬಿಡುವು ನೀಡಬೇಕು ಇದರ ಜತೆಗೆ ಕಾರ್ಮಿಕರ ಆರೋಗ್ಯ ಸುಧಾರಿಸಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ.

ಪ್ರೀತಿ ನಿರಾಕರಿಸಿದ ಯುವತಿಯನ್ನು ಕೊಂದ ಹುಚ್ಚು ಪ್ರೇಮಿ

ಅತಿ ಉಷ್ಣತೆಯಿಂದ ಉಂಟಾಗುವ ತೊಂದರೆಗಳು: ಅತಿಯಾದ ಉಷ್ಣತೆಯಿಂದ ಹೃದ್ರೋಗ ಸಮಸ್ಯೆಗಳು, ಉಸಿರಾಟದ ತೊಂದರೆ ಮತ್ತು ಕಿಡ್ನಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಇದರ ಜೊತೆಗೆ ತಲೆ ಸುತ್ತುವುದು, ವಾಕರಿಕೆ, ವಾಂತಿ, ತಲೆನೋವು, ಅತಿಯಾದ ಬಾಯಾರಿಕೆ, ಮೂತ್ರ ವಿಸರ್ಜನೆ ಪ್ರಮಾಣ ಕಡಿಮೆಯಾಗು ವುದು, ಹಳದಿ ಬಣ್ಣದ ಮೂತ್ರ ಹಾಗೂ ಏರುಗತಿಯ ಉಸಿರಾಟ ಹಾಗೂ ಹೃದಯದ ಬಡಿತ ಹೆಚ್ಚಾಗುತ್ತದೆ ಎಂದು ತಜ್ಞ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಮೇಲಿನ ಯಾವುದೆ ಸಮಸ್ಯೆ ಕಂಡು ಬಂದರೂ ತಕ್ಷಣ ತಜ್ಞ ವೈದ್ಯರನ್ನು ಭೇಟಿಯಾಗಿ ಸಮಸ್ಯೆಯಿಂದ ಪಾರಾಗಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

heatwave, health, advisory, temperatures, touch,

Articles You Might Like

Share This Article