ಅಬ್ಬರದ ಮಳೆಗೆ ಬೆಚ್ಚಿಬಿದ್ದ ಬೆಂಗಳೂರು

Social Share

ಬೆಂಗಳೂರು,ಅ.15- ನಿನ್ನೆ ನಗರದಲ್ಲಿ ಸುರಿದ ಮಳೆ 92 ವಾರ್ಡ್‍ಗಳಲ್ಲಿ ದಾಖಲೆ ನಿರ್ಮಿಸಿದೆ. ಕಳೆದ ಕೆಲವು ದಿನಗಳ ಹಿಂದೆ ಸುರಿದಿದ್ದ ರಣಮಳೆಗೆ ಮಹದೇವಪುರ, ಕೆ.ಆರ್.ಪುರಂನ ಕೆಲ ಪ್ರದೇಶಗಳಲ್ಲಿ ಭಾರಿ ಅನಾಹುತಗಳು ಸಂಭವಿಸಿದ್ದವು. ಹೀಗಾಗಿ ಬೆಂಗಳೂರಿಗರಿಗೆ ಮಳೆ ಅಂದರೆ ಬೆಚ್ಚಿ ಬೀಳುವಂತಾಗಿದೆ.

ಇದರ ಮಧ್ಯೆ ಮತ್ತೆ ನಗರದಲ್ಲಿ ಮಳೆಯಾಗುತ್ತಿರುವುದರಿಂದ ಸ್ಥಳೀಯರು ಮುಂದೆ ಏನು ಕಾದಿದೆಯೋ ಎಂದು ಚಿಂತಾ ಕ್ರಾಂತರಾಗಿದ್ದಾರೆ. ನಿನ್ನೆ ಒಂದೇ ದಿನಕ್ಕೆ ಬೆಂಗಳೂರಿನ 8 ವಲಯಗಳ 92 ವಾರ್ಡ್‍ಗಳಲ್ಲಿ ವರುಣನ ಆರ್ಭಟ ಅತಿ ಹೆಚ್ಚಾಗಿತ್ತು. ಯಲಹಂಕ 75.5 ಮಿ.ಮೀ, ಅಟ್ಟೂರು 70 ಮಿ.ಮೀ, ಚೌಡೇಶ್ವರಿ ವಾರ್ಡ್ 67.5 ಮಿ.ಮೀ, ಆರ್.ಆರ್.ನಗರ 66.5 ಮಿ.ಮೀ ಹಾಗೂ ಸಂಪಗಿರಾಮ ನಗರದಲ್ಲಿ 66 ಮಿ.ಮೀ ಮಳೆ ಆಗಿದೆ.

ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನು 5 ದಿನ ಭಾರಿ ಮಳೆ ಆಗಲಿದೆ. ಹೀಗಾಗಿ ದಕ್ಷಿಣ ಒಳನಾಡು, ಉತ್ತರ ಒಳನಾಡು, ಕರಾವಳಿ ಹಾಗೂ ಬೆಂಗಳೂರಿಗೆ ಇಂದು ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯ ಹಾಗೂ ರಾಜಧಾನಿಯಲ್ಲಿ ಇನ್ನೈದು ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆ ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 28 ಮತ್ತು 19 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ನಗರದ ಮೆಜೆಸ್ಟಿಕ್, ಕೆಆರ್ ಪುರಂ, ಕೆಆರ್ ಸರ್ಕಲï, ಕೆ.ಆರ್ ಮಾರ್ಕೆಟï, ಬಸವನಗುಡಿ, ಶಿವಾಜಿನಗರ, ಎಂಜಿ ರೋಡ್, ರಾಜಾಜಿನಗರ, ಹೆಬ್ಬಾಳ ಸೇರಿದಂತೆ ಹಲವೆಡೆ ಭಾರೀ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಮನೆ ಸೇರಲು ಪರದಾಡುವಂತಾಗಿತ್ತು.

ಹಲವೆಡೆ ಟ್ರಾಫಿಕ್ ಸಿಗ್ನಲ್ ಕೈಕೊಟ್ಟಿದೆ. ಹೀಗೆ ಮಳೆ ಎಡಬಿಡದೆ ಸುರಿದರೆ ನಗರದ ಪ್ರತಿಷ್ಠಿತ ಏರಿಯಾಗಳೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

Articles You Might Like

Share This Article