ಭಾರಿ ಮಳೆಯಿಂದ ಮನೆ ಕುಸಿದು ಮಹಿಳೆ ಸಾವು
ರಾಯಚೂರು, ಆ.17- ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಮಳೆ ಸುರಿಯುತ್ತಿದ್ದು, ಮನೆ ಕುಸಿದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ದೇವದುರ್ಗ ತಾಲ್ಲೂಕಿನ ರಾಮದುರ್ಗ ಗ್ರಾಮದಲ್ಲಿ ನಡೆದಿದೆ.
ಶಕುಂತಲಾ (32) ಮೃತಪಟ್ಟ ಮಹಿಳೆ.
ಮಾಳಿಗೆ ಮನೆಯಾಗಿದ್ದರಿಂದ ನಿರಂತರವಾಗಿ ಮಳೆ ಸುರಿದ ಕಾರಣ ಮಳೆನೀರು ಗೋಡೆ ಹಾಗೂ ಮೇಲ್ಚಾವಣಿಗೆ ಇಳಿದು ರಾತ್ರಿ ಏಕಾಏಕಿ ಚಾವಣಿ ಸಮೇತ ಕುಸಿದು ಬಿದ್ದಿದೆ.
ಮನೆಯಲ್ಲಿ ಐವರು ಮಲಗಿದ್ದರು ಎನ್ನಲಾಗಿದ್ದು, ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.