ಬೆಂಗಳೂರು ಸೇರಿ ರಾಜ್ಯದಾದ್ಯಂತ ಇನ್ನೂ 2 ದಿನ ಜಿಟಿಜಿಟಿ ಮಳೆ

Social Share

ಬೆಂಗಳೂರು,ನ.24-ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಜಿಟಿ ಜಿಟ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮಳೆ ಮುಂದುವರೆಯುವ ಸಾಧ್ಯತೆಗಳಿವೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣವಿದ್ದು, ನಿನ್ನೆ ಹಲವೆಡೆ ಮಧ್ಯಾಹ್ನದಿಂದಲೇ ತುಂತುರು ಮಳೆಯಾಗುತ್ತಿದೆ. ಕೆಲವೆಡೆ ಸಾಧಾರಣ ಮಳೆಯಾದ ವರದಿಯಾಗಿದೆ.

ಮಂಗಳವಾರ ಬೆಳಿಗ್ಗೆಯಿಂದಲೇ ಕೆಲವೆಡೆ ತುಂತುರು ಮಳೆ ಆರಂಭವಾಗಿತ್ತು. ನಿನ್ನೆ ಮಧ್ಯಾಹ್ನ ನಂತರ ಆಗಾಗ್ಗೆ ಜಿಟಿ ಜಿಟಿ ಮಳೆಯಾಗುತ್ತಿದೆ. ಇಂದೂ ಕೂಡು ಮಳೆ ಮುಂದುವರೆದಿದ್ದು, ದೈನಂದಿನ ಕೆಲಸಗಳಿಗೆ ತೆರಳುವವರು ಕೊಡೆ, ಜರ್ಕಿನ್‍ಗಳನ್ನು ಆಶ್ರಯಿಸಿದ ದೃಶ್ಯ ಎಲ್ಲೆಡೆ ಕಂಡುಬಂದಿತು.

ಬಾಲಿವುಡ್ ಹಿರಿಯ ನಟ ವಿಕ್ರಂ ಗೋಖಲೆ ನಿಧನ

ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಆಂಧ್ರಪ್ರದೇಶದ ಕರಾಳಿ ತಲುಪುತ್ತಿದ್ದಂತೆ ದುರ್ಬಲಗೊಂಡಿದೆ. ಆದರೆ, ಅಂಡಮಾನ್ ದ್ವೀಪದ ಬಳಿ ಮತ್ತೊಂದು ವಾಯುಬಾರ ಕುಸಿತ ಉಂಟಾಗುವ ಸಂಭವವಿದೆ. ಅದರ ಪ್ರಭಾವದಿಂದ ಇನ್ನೂ ಮೂರು ದಿನ ಮಳೆ ಮುಂದುವರೆಯಬಹುದು ಎಂದು ಹವಾಮಾನ ತಜ್ಞರು ತಿಳಿಸಿದರು.

ಆಗಾಗ್ಗೆ ತಂಪಾದ ಮೇಲ್ಮೈ ಗಾಳಿ ಬೀಸುತ್ತಿದ್ದು, ಪದೇ ಪದೇ ತುಂತುರು ಮಳೆಯಾಗುತ್ತಿರುವುದರಿಂದ ಚಳಿಯ ಪ್ರಮಾಣವೂ ಹೆಚ್ಚಾಗಿದೆ. ರಾಜ್ಯದ ದಕ್ಷಿಣ ಒಳನಾಡಿನ ಹಾಗೂ ಪೂರ್ವ ಭಾಗದ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಮುನ್ಸೂಚನೆಗಳಿವೆ.

ಹೆಚ್‌ಡಿಕೆ ಅಡ್ಡಗಟ್ಟಿ ಶಾಲೆಗೆ ಕರೆದೊಯ್ದ ಮಕ್ಕಳು

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ತೀವ್ರತೆ ಕಡಿಮೆಯಾದರೂ ಮತ್ತೊಂದು ವಾಯುಭಾರ ಕುಸಿತವು ಇನ್ನೆರಡು ದಿನಗಳಲ್ಲಿ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ . ಆದರೆ, ಭಾರೀ ಮಳೆಯಾಗುವ ಸಾಧ್ಯತೆಗಳು ವಿರಳ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಮಂಗಳವಾರದಿಂದ ಆರಂಭವಾಗಿರುವ ಹಗುರ ಮಳೆಯು ನಾಳೆ ಸಂಜೆಯ ನಂತರ ಇಳಿಮುಖವಾಗಲಿದೆ. ಶನಿವಾರದವರೆಗೂ ಮಳೆ ಮುಂದುವರೆಯಬಹುದು. ಆನಂತರ ಭಾಗಶಃ ಮೋಡ ಕವಿದ ವಾತಾವರಣ ಒಂದೆರಡು ದಿನ ಇರಲಿದೆ ಎಂದು ತಜ್ಞರು ಹೇಳಿದ್ದಾರೆ.

ವರ್ಜೀನಿಯಾದಲ್ಲಿ ಸಾಮೂಹಿಕ ಹತ್ಯಾಕಾಂಡ : ಕನಿಷ್ಠ 10 ಜನರ ಸಾವಿನ ಶಂಕೆ

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನನಲ್ಲಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

Heavy, rainfall, alert, Karnataka, Nov 24,

Articles You Might Like

Share This Article