ನವದೆಹಲಿ, ಸೆ 23 – ರಾಷ್ಟ್ರ ರಾಜಧಾನಿಯಲ್ಲಿ ಮಳೆ ಆರ್ಭಟ ಜೋರಾಗಿದ್ದು ಹಲವಾರು ಪ್ರದೇಶಗಳು ಜಲಾವೃತಗೊಂಡು ಜನಜೀವನ ಆಸ್ತವ್ಯಸ್ತಗೊಂಡಿದೆ. ಕಳೆದ ಎರಡು ದಿನಗಳಿಂದ ಎಡೆಬಿಡದೆ ಸಾಧಾರಣ ಮಳೆಯಾಗುತ್ತಿದ್ದು ಇಂದೂ ಕೂಡ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದರಿಂದ ಜನರು ಒಡಾಡಲು ತೊಂದರೆಯಾಗಿ, ಸಂಚಾರ ದಟ್ಟಣೆ ಉಂಟಾಗಿತ್ತು. ಎಲ್ಲೂ ಅಲರ್ಟ್ ಘೋಷಿಸಿದ್ದು, ನಗರದ ಬಹುತೇಕ ಸ್ಥಳಗಳಲ್ಲಿ ಮಳೆ ಮುಂದುವರೆಯುವ ಬಗ್ಗೆ ಜನರಿಗೆ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ನೈಋತ್ಯ ಮುಂಗಾರು ರಾಜಸ್ಥಾನ ಮತ್ತು ಪಕ್ಕದ ಕಚ್‍ನ ಕೆಲವು ಭಾಗಗಳಿಂದ ಆರಂಭವಾಗಿದೆ. ದೆಹಲಿಯಲ್ಲಿ ಇನ್ನೊಂದು ವಾರ ಮಳೆ ಪರಿಸ್ಥಿತಿ ಹೀಗೆ ಮುಂದುವರೆಯಲಿದೆ. ಕೆಲ ಶಾಲೆಗಳಿಗೆ ರಜೆ ಸಹ ಘೋಷಿಸಲಾಗಿದೆ ನೆರೆಯ ಉತ್ತರ ಪ್ರದೇಶದಲೂ ಮಳೆ ಜೋರಾಗಿದೆ.