ಚೆನ್ನೈ.ಫೆ.3-ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡು, ಕೇರಳದಲ್ಲಿ ಭಾರಿ ಮಳೆಯಾಗುತ್ತಿದೆ. ತಮಿಳುನಾಡು ಕರಾವಳಿಯಲ್ಲಿ ಹೆಚ್ಚು ಮಳೆಯಾಗುತ್ತಿದೆ ,ತಿರುವರೂರು, ನಾಗಪಟ್ಟಣಂ ಜಿಲ್ಲೆ ದೇರಿ ಹಲವೆಡೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಗಾಳಿಯು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸುತ್ತಿದ್ದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಕೇರಳ ಭಾಗದಲ್ಲಿ 64.5 ಮಿಮೀ-115.5 ಮಿಮೀ ವರೆಗೆ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಪುದುಚೇರಿಯಾದ್ಯಂತ ಅನೇಕ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಖ್ಯಾತ ಹಿರಿಯ ನಟ ಕಾಸಿನಾಧುನಿ ವಿಶ್ವನಾಥ್ ಇನ್ನಿಲ್ಲ
ಈ ಎರಡೂ ರಾಜ್ಯಗಳಲ್ಲಿ ಸಮುದ್ರದ ಪರಿಸ್ಥಿತಿಯು ಸಹ ಪ್ರಕ್ಷುಬ್ಧವಾಗಿರುತ್ತದೆ, ಈ ಕಾರಣದಿಂದಾಗಿ ಬಂಗಾಳ ಕೊಲ್ಲಿ, ಮನ್ನಾರ್ ಕೊಲ್ಲಿ ಮತ್ತು ಕೊಮೊರಿನ್ ಪ್ರದೇಶಗಳಿಗೆ ಮೀನುಗಾರಿಕೆ ಮಾಡದಂತೆ ಮೀನುಗಾರರಿಗೆ ಸಲಹೆ ನೀಡಲಾಗಿದೆ.
Heavy rains, Kerala, Tamil Nadu, Holiday, declared, schools, colleges,