ಚಂಡಮಾರುತ ವಿಮಾನ ಸೇವೆ ಬಂದ್

Social Share

ವಾಷಿಂಗ್ಟನ್, ಜ.4-ಅಟ್ಲಾಂಟಿಕ್ ಕಡಲ ಚಂಡಮಾರುತ ಅಮೆರಿಕ ಪೂರ್ವ ಕರಾವಳಿಗೆ ಅಪ್ಪಳಿಸಿದ ಪರಿಣಾಮ ವಿಮಾನ ಸೇವೆ ಬಂದ್ ಆಗಿದೆ.
ಚಂಡಮಾರುತದ ಜೊತೆಗೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ಜನರನ್ನು ಬಾದಿಸಿದೆ.ವಿಮಾನಯಾನ ಸೇವೆಯ ಕಾರ್ಮಿಕರ ಕೊರತೆ ಕಾಡಿದೆ.
ರಜಾದಿನದ ಮೋಜಿಗಾಗಿ ತೆರಳಿದ್ದವರು ತಮ್ಮ ಮನೆಗೆ ಹೋಗಲು ಪರದಾಡುವಂತಾಗಿದೆ ಸುಮಾರು 3000 ದೇಶೀಯ ವಿಮಾನ ಮತ್ತು ಸುಮಾರು 4700 ಅಂತರಾಷ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ದೇಶೀಯ 5,600 ಸೇರಿದಂತೆ ಸುಮಾರು 12,500 ವಿಮಾನಗಳು ವಿಳಂಬವಾಗಿವೆ. ಕೆಲವರು ವಿಮಾನ ನಿಲ್ದಾಣಗಳಲ್ಲಿ ಮಲಗಿದ್ದಾರೆ ಮತ್ತು ಅವರು ಯಾವಾಗ ಮನೆಗೆ ಹೋಗುತ್ತಾರೆ ಎಂದು ತಿಳಿದಿಲ್ಲ ಎಂದು ಅವರು ಹೇಳಿದರು.
ಕೊಲಂಬಿಯಾ, ಉತ್ತರ ವರ್ಜೀನಿಯಾ ಮತ್ತು ಮಧ್ಯ ಮೇರಿಲ್ಯಾಂಡ್‍ನಲ್ಲಿ ಜನರು ಹಿಮ ಗಾಳಿಯ ಚಂಡಮಾರುತದೊಂದಿಗೆ ಹೋರಾಡಬೇಕಾಗಿದೆ.

Articles You Might Like

Share This Article