ಆನೇಕಲ್,ಜ.1- ಇತ್ತೀಚೆಗೆ ನಡೆದ ಹೆಬ್ಬಗೋಡಿ ನಗರ ಸಭೆ ಮತ್ತು ಚಂದಾಪುರ ಪುರಸಭೆ ಚುನಾವಣೆಯಲ್ಲಿ ಮತದಾರ ಬಿಜೆಪಿಗೆ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ, ಈ ಗೆಲುವು ಬಿಜೆಪಿ ಕಾರ್ಯಕರ್ತರ ಗೆಲುವಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೇಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಬಿ.ಶಿವಣ್ಣ ಇದ್ದರು ಸಹ ಇತ್ತೇಚೆಗೆ ನಡೆದ ಚಂದಾಪುರ ಪುರಸಭೆ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂದರು.
ಕಾಂಗ್ರೆಸಿಗರು ಬೇರೆ – ಬೇರೆ ಹೋಬಳಿ ಮತದಾರರನ್ನು ಚಂದಾಪುರ ಮತದಾರ ಪಟ್ಟಿಗೆ ಸೇರಿಸಿ ಜೊತೆಗೆ ನಕಲಿ ಆದಾರ್ ಕಾರ್ಡ್ ಸೃಷ್ಟಿಸಿ ಕೆಲವು ಸ್ಥಾನಗಳನ್ನು ಗೆದ್ದಿದ್ದಾರೆ ಹೊರೆತು ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿಲ್ಲ. ಈಗಾಗಲೇ ಈ ವಿಚಾರವಾಗಿ ಜಿಲ್ಲಾಕಾರಿಗಳಿಗೆ ದೂರು ನೀಡಿದ್ದೇವೆ ಎಂದು ಹೇಳಿದರು.
ಜಿಗಣಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಕಂಡಿದ್ದು ಆ ಸೋಲನ್ನು ನಾವು ಒಪ್ಪಿಕೊಂಡಿದ್ದೇವೆ ಮುಂದಿನ ದಿನಗಳಲ್ಲಿ ಜಿಗಣಿ ಭಾಗದಲ್ಲಿ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತೇವೆ ಎಂದರು. ರಾಜ್ಯದಲ್ಲಿ ನಡೆದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ದೇಶ ಮೊದಲು ಎಂಬ ತತ್ವ ಸಿದ್ದಾಂತ ಇಟ್ಟುಕೊಂಡ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸಿದೆ ಆದರೆ ಕಾಂಗ್ರೆಸ್ ನ ಡಿ.ಕೆ. ಶಿವಕುಮಾರ್, ಮತ್ತು ಸಿದ್ದರಾಮಯ್ಯರವರು ಈ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳಿಸಿದೆ ಎಂದು ಸುಳ್ಳು ಹೇಳಿಕೆಯನ್ನು ರಾಜ್ಯದ ಜನತೆಗೆ ಹೇಳುತ್ತಿದ್ದಾರೆ.
ಕಳೆದ ತಿಂಗಳು ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುಜರಿ ಬಾಬು ಖರ್ಚು ಮಾಡಿದ ಹಣ ಯಾರ ಮನೆಯ ಬೀರು ಸೇರಿದೆ ಎಂಬುದನ್ನು ಮೊದಲು ಉತ್ತರ ನೀಡಿ ಎಂದರು.
ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ 2023 ರಲ್ಲಿ ನಡೆಯುವ ಸಾರ್ವತಿಕ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೆಚ್ಚು ಸ್ಥಾನ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ತಾಕತಿದ್ದರೆ ಕಾಂಗ್ರೆಸಿಗರು ಚುನಾವಣೆಯಲ್ಲಿ ಬಾಜಪವನ್ನು ಎದುರಿಸಿ ಗೆದ್ದು ತೋರಿಸಲಿ ಆವಾಗ ನಾವು ಒಪ್ಪಿಕೊಳ್ಳುತ್ತೇವೆ ಎಂದು ಎನ್. ಆರ್. ರಮೇಶ್, ಕಾಂಗ್ರೆಸಿಗರಿಗೆ ಸವಾಲೆಸೆದರು.
ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಬಿಜೆಪಿ ಎಸ್.ಸಿ. ಮೋರ್ಚಾದ ಜಿಲ್ಲಾಧ್ಯಕ್ಷ ಹುಲ್ಲಳ್ಳಿ ಶ್ರೀನಿವಾಸ್, ಅತ್ತಿಬೆಲೆ ಬಿಜೆಪಿ ಮಂಡಲದ ಅಧ್ಯಕ್ಷ ಎಸ್.ಆರ್.ಟಿ. ಅಶೋಕ್, ಸಜರ್Áಪುರ ಮಂಡಲದ ಬಿಜೆಪಿ ಅಧ್ಯಕ್ಷ ಸುರೇಶ್ ರೆಡ್ಡಿ, ಬಮೂಲ್ ನಿರ್ದೇಶಕರಾದ ಬಿ.ಜೆ.ಆಂಜಿನಪ್ಪ, ಬಿಜೆಪಿ ಮುಖಂಡರಾದ ಅತ್ತಿಬೆಲೆ ಬಸವರಾಜ್, ಯಾರಂಡಹಳ್ಳಿ ಲಷ್ಮೀಕಾಂತ್ ಮತ್ತು ನಗರಸಭೆ ಸದಸ್ಯರು ಹಾಗೂ ಪುರಸಭೆ ಸದಸ್ಯರು ಭಾಗವಹಿಸಿದ್ದರು.
