ಪ್ರಧಾನಿ ಮೋದಿ ತಾಯಿ ವಿಧಿವಶ, ಸಂತಾಪ ವ್ಯಕ್ತಪಡಿಸಿದ ಗಣ್ಯರು

Social Share

ನವದೆಹಲಿ,ಡಿ.30- ತಾಯಿಯ ಸಾವು ತುಂಬಲಾರದ ನಷ್ಟ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ ಅವರ ನಿಧನದಿಂದ ದುಃಖವಾಗಿದೆ. ತಾಯಿಯ ಮರಣವು ತುಂಬಲಾರದ ನಷ್ಟವಾಗಿದೆ. ಜಗತ್ತಿನಲ್ಲಿ ಯಾರೂ ತಾಯಿಯ ಸ್ಥಾನವನ್ನು ಪಡೆಯಲು ಸಾಧ್ಯವಿಲ್ಲ ಎಂದು ನಿತೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಅಗಲಿದ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ದುಃಖದ ಸಮಯದಲ್ಲಿ ತಾಳ್ಮೆಯನ್ನು ತಾಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಇನ್ನಿಲ್ಲ

ರಾಹುಲ್‍ಗಾಂ ಅವರು ಹೀರಾಬೆನ್ ನಿಧನಕ್ಕೆ ಕಂಬನಿ ಮಿಡಿದಿದ್ದು, ತಾಯಿ ಹೀರಾ ಬಾ ಅವರ ಸಾವಿನ ಸುದ್ದಿ ಅತ್ಯಂತ ದುಃಖಕರವಾಗಿದೆ. ಈ ಕಷ್ಟದ ಸಮಯದಲ್ಲಿ ನಾನು ಅವರಿಗೆ ಮತ್ತು ಅವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತೇನೆ ಎಂದು ಗಾಂ ಟ್ವೀಟ್ ಮಾಡಿದ್ದಾರೆ.

ಅದೇ ರೀತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ದನಕರ್, ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ, ಛತ್ತಿಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಗೇಲ್, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ ಸೇರಿದಂತೆ ನಾಡಿನ ಹಲವಾರು ಹಿರಿಯ ರಾಜಕಾರಣಿಗಳು ಹೀರಾಬೆನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ
ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾತೃ ಶ್ರೀಯವರಾದ ಶ್ರೀ ಮತಿ ಹೀರಾಬೆನ್‍ಜಿ ರವರು ಇನ್ನಿಲ್ಲವಾದುದು ಅತ್ಯಂತ ದುಃಖದ ಸಂಗತಿ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಂತಾಪ ಸೂಚಿಸಿದ್ದಾರೆ.

ಭವ್ಯ ಭಾರತಕ್ಕೆ ಸಮರ್ಥ ಪ್ರಧಾನಿಯನ್ನು ನೀಡಿದಂತಹ ಹೀರಾ ಬೆನ್ ಜಿ ಅವರ ನಿಧನದಿಂದ ಭಾರತ ಹಿರಿಯ ಚೇತನವೊಂದನ್ನು ಕಳೆದುಕೊಂಡಂತಾಗಿದೆ ಸ್ವಾಮೀಜಿ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಭಾರತವನ್ನು ಮುನ್ನಡೆಸುವ ಸಮರ್ಥ ಪ್ರಧಾನಿಯನ್ನು ನಮ್ಮೆಲ್ಲರಿಗೂ ಕೊಡುಗೆಯಾಗಿ ನೀಡಿದ ಆ ತಾಯಿ ತಮ್ಮ ಮಕ್ಕಳಿಗೆ ನೀಡಿರುವ ಸಂಸ್ಕಾರ ಆದರ್ಶನೀಯ.

ಹೀರಾಬೆನ್‍ಜಿ ರವರ ನಿಧನದಿಂದ ದುಃಖಿತರಾಗಿರುವ ಕುಟುಂಬ ವರ್ಗ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ, ಅವರ ಬಂಧು ವರ್ಗದವರಿಗೆ ಭಗವಂತನು ದುಃಖವನ್ನು ಸಹಿಸುವ ಶಕ್ತಿಯನ್ನು, ಮಾತೆ ಹೀರಾಬೆನ್‍ಜಿ ರವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಶ್ರೀಗಳು ಆಶಿಸಿದ್ದಾರೆ.

#PMModim, #Mother, #HeerabenModi, #Heeraben, #ModiMother, #ModiWithMother, #ಹೀರಾಬೆನ್, #ಮೋದಿ,

Articles You Might Like

Share This Article