ಬೆಂಗಳೂರು,ಸೆ.15- ಸದ್ಯದಲ್ಲಿಯೇ ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಕೊನೆಗೂ ಕಾನೂನು ತೊಡಕುಗಳು ಬಗೆಹರಿದಿದ್ದು, ಹಬ್ಬದ ನಂತರ ಪ್ರಕ್ರಿಯೆ ಶುರುವಾಗಲಿದೆ.
ಬಿಡಿಎ ಕಛೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾಯಮೂರ್ತಿ ಚಂದ್ರಶೇಖರ್, ಒಟ್ಟು 3456 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಶಿವರಾಮ ಕಾರಂತ ಬಡಾವಣೆಯಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆಗೆ ಸರ್ವೋಚ್ಛ ನ್ಯಾಯಾಲಯ ಆದೇಶದನ್ವಯ ನೀಡಲು ಸಮ್ಮತಿ ನೀಡಲಾಗಿದೆ ಎಂದು ತಿಳಿಸಿದರು.
ಬಡಾವಣೆಗೆ ಸಂಬಂಸಿದಂತೆ ನಡೆದ ಸಮಿತಿಯ ವಿಚಾರಣೆ ನಂತರ ಸುಮಾರು 7724 ಅರ್ಜಿಗಳಲ್ಲಿ 5171 ಕಟ್ಟಡಗಳನ್ನು ಸಕ್ರಮಗೊಳಿಸಲಾಗಿದೆ. ಬಿಡಿಎ ಅನುಮೋದಿಸಿದ 13 ಖಾಸಗಿ ಬಡಾವಣೆಗಳನ್ನು ಕೂಡ ಸಕ್ರಮಗೊಳಿಸಲಾಗಿದೆ.
ಚೈತ್ರಾ ಕುಂದಾಪುರಗೆ ಅನಾರೋಗ್ಯ : ಆಸ್ಪತ್ರೆಗೆ ದಾಖಲು
ಸಕ್ರಮಗೊಳಿಸಿದ ಕಟ್ಟಡಗಳ ಮಾಲೀಕರು ಬಿಡಿಎ ಸೂಚಿಸಿದ ಅಭಿವೃದ್ಧಿ ಶುಲ್ಕ ಪಾವತಿಸಬೇಕು. ಬಡಾವಣೆಗೆ ಜಮೀನು ನೀಡಿದ ಭೂಮಾಲೀಕರಿಗೆ ಅಭಿವೃದ್ಧಿ ಪಡಿಸಿದ ಜಮೀನು ನೀಡಲು ಸುಪ್ರೀಂ ಸೂಚಿಸಿದೆ ಎಂದು ಅವರು ಹೇಳಿದರು.
ಅಗತ್ಯ ದಾಖಲೆ ನೀಡಿ ಭೂಮಾಲೀಕರು ಡೆವಲಪ್‍ಲ್ಯಾಂಡ್ ಪಡೆಯಬಹುದಾಗಿದೆ. ಶಿವರಾಮಕಾರಂತ ಬಡಾವಣೆಯಲ್ಲಿ 34 ಸಾವಿರ ನಿವೇಶನ ನಿರ್ಮಾಣ ಪ್ರಗತಿಯಲ್ಲಿದೆ. 4500 ಮೂಲೆ ನಿವೇಶನಗಳು ಹರಾಜು ಪ್ರಕ್ರಿಯೆ ಜಾರಿಯಲ್ಲಿದೆ. 34 ಸಾವಿರ ನಿವೇಶನಗಳ ಪೈಕಿ 29 ಸಾವಿರ ನಿವೇಶನ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
#goodnews, #waiting, #BDASite,