ಬೊಮ್ಮಾಯಿ ಬಜೆಟ್ ಗಾತ್ರ ಎಷ್ಟು..? : ಇಲ್ಲಿದೆ ಆದಾಯ-ವೆಚ್ಚಗಳ ಮಾಹಿತಿ

Social Share

ಬೆಂಗಳೂರು,ಫೆ.17- ರಾಜ್ಯ ಸಂಕಷ್ಟಮಯ ಪರಿಸ್ಥಿತಿಯಿಂದ ಹೊರ ಬಂದಿದ್ದು, ಹೆಚ್ಚುವರಿ ಕಂದಾಯ ಸಂಗ್ರಹ ಬಜೆಟ್ ಅನ್ನು ಮಂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಟ್ಟು ಗಾತ್ರವನ್ನು ಮೂರು ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದ್ದಾರೆ. ಒಟ್ಟು ಬಂಡವಾಳ ವೆಚ್ಚವನ್ನು 61 ಸಾವಿರ ಕೋಟಿ ರೂಪಾಯಿಗಳಿಗೆ ನಿಗದಿ ಮಾಡಿದ್ದಾರೆ.

ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್‍ಗೆ ಹೆಚ್ಚಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗುರಿಗೆ ಪೂರಕವಾಗಿ ರಾಜ್ಯದ ಅರ್ಥಿಕತೆಯನ್ನು ಒಂದು ಟ್ರಿಲಿಯನ್‍ಗೆ ಹೆಚ್ಚಿಸುವ ಇಂಗಿತವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತ ಪಡಿಸಿದ್ದರು. ಅದಕ್ಕೆ ಅನುಗುಣವಾಗಿ ಬಜೆಟ್ ಗಾತ್ರವನ್ನು ಹೆಚ್ಚಿಸಲಾಗಿದ್ದು, ಒಟ್ಟು ಗಾತ್ರವನ್ನು 3,09,182 ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.

ಬೊಮ್ಮಾಯಿ ಬಜೆಟ್ – 2023-2024 (Live Updates)

ಕಳೆದ ವರ್ಷದ ಬಜೆಟ್ ಮಂಡನೆಯಲ್ಲಿ ಒಟ್ಟು ಗಾತ್ರವನ್ನು 2,61,977 ರೂ.ಗಳೆಂದು ನಿರೀಕ್ಷಿಸಲಾಗಿತ್ತು. ಆದಾಯ ಸಂಗ್ರಹ ಹೆಚ್ಚಾಗಿ ಒಟ್ಟು ಜಮೆ 2,79,540 ಕೋಟಿ ರೂಪಾಯಿಗಳಾಗಿತ್ತು. ಹೀಗಾಗಿ ಪರಿಷ್ಕøತ ಅಂದಾಜಿನಲ್ಲಿ ಬಜೆಟ್ ಗಾತ್ರ 2,89,653 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿತ್ತು. ಅದು ಹಿಂದಿನ ಬಜೆಟ್‍ಗೆ ಹೋಲಿಸಿದರೆ ಗಾತ್ರ ಶೇ.9ರಷ್ಟು ಹೆಚ್ಚಾಗಿತ್ತು.

2023-24ನೇ ಆರ್ಥಿಕ ವರ್ಷದಲ್ಲಿ ಸ್ವಂತ ತೆರಿಗೆ ರಾಜಸ್ವ ಸಂಗ್ರಹ 1,64,653 ಕೋಟಿ ರೂಪಾಯಿಗಳೆಂದು ಅಂದಾಜು ಮಾಡಲಾಗಿದೆ. ತೆರಿಗೆಯೇತರ ರಾಜಸ್ವಗಳಿಂದ 11 ಸಾವಿರ ಕೋಟಿ ರೂಪಾಯಿ ಸಂಗ್ರಹಿಸುವ ನಿರೀಕ್ಷೆಗಳಿವೆ.

ಕೇಂದ್ರದಿಂದ ತೆರಿಗೆಯ ಪಾಲಿನಿಂದ 37,252 ಕೋಟಿ ರೂಪಾಯಿ, ಸಹಾಯಧನ ರೂಪದಲ್ಲಿ 13,005 ಕೋಟಿ ರೂಪಾಯಿ ನೀರಿಕ್ಷಿಸಲಾಗಿದೆ. ಈ ವರ್ಷವೂ 77,750 ಕೋಟಿ ರೂಪಾಯಿ ಸಾಲ ಪಡೆಯುವ ಉದ್ದೇಶವನ್ನು ವ್ಯಕ್ತಪಡಿಸಲಾಗಿದೆ. ಋಣೇತರ ಸ್ವೀಕೃತಿಗಳಿಂದ 23 ಸಾವಿರ ಕೋಟಿ, ಸಾಲಗಳ ವಸೂಲು ಮೊತ್ತದಿಂದ 228 ಕೋಟಿ ರೂಪಾಯಿಗಳಗಳನ್ನು ಅಂದಾಜಿಸಲಾಗಿದೆ. ಒಟ್ಟು 3,03,910 ಕೋಟಿ ರೂಪಾಯಿಗಳ ಜಮೆಯನ್ನು ಅಂದಾಜಿಸಲಾಗಿದೆ.

ಇನ್ನೂ ವೆಚ್ಚದ ಬಾಬ್ತುನಲ್ಲಿಲ 2,25,507 ಕೋಟಿ ರೂಪಾಯಿಗಳ ರಾಜಸ್ವ ವೆಚ್ಚ, 61,234 ಕೋಟಿ ರೂಪಾಯಿ ಬಂಡವಾಳ ವೆಚ್ಚವನ್ನು ಅಂದಾಜಿಸಲಾಗಿದೆ. ಸಾಲ ಮರುಪಾವತಿಗೆ 22,441 ಕೋಟಿ ರೂಪಾಯಿಗಳನ್ನು ಒಳಗೊಂಡು ಒಟ್ಟು ವೆಚ್ಚ 3,09,182 ಕೋಟಿ ರೂಪಾಯಿಗಳೆಂದ ನೀರಿಕ್ಷಿಸಲಾಗಿದೆ.

ಕೋವಿಡ್ ಸಾಂಕ್ರಾಮಿಕದ ನಂತರ ಮೊದಲ ಬಾರಿಗೆ ರಾಜಸ್ವ ಸ್ವೀಕೃತಿ ರಾಜಸ್ವ ವೆಚ್ಚಕ್ಕಿಂತ 402 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಹಾಗಾಗಿ ಈ ಬಾರಿ ರಾಜಸ್ವ ಹೆಚ್ಚುವರಿ ಬಜೆಟ್ ಅನ್ನು ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ವಿತ್ತಿಯ ಕೊರತೆಯನ್ನು 60,581 ಕೋಟಿ ರೂಪಾಯಿಗಳೆಂದ ನಿರೀಕ್ಷಿಸಲಾಗಿದೆ.ಅದು ಜಿಎಸ್‍ಡಿಪಿಯ ಶೇ.2.60ರಷ್ಟಾಗಿರುತ್ತದೆ. ಈ ಮೂಲಕ ರಾಜ್ಯದಲ್ಲಿ ಆರ್ಥಿಕ ಶಿಸ್ತನ್ನು ವಿತ್ತಿ ನಿರ್ವಹಣಾ ಕಾಯ್ದೆಯ ವ್ಯಾಪ್ತಿಯೊಳಗೆ ತಹಬದಿಗೆ ತರಲಾಗಿದೆ. ಹಿಂದಿನ ವರ್ಷಗಳಲ್ಲಿ ಕೋವಿಡ್ ಕಾರಣದಿಂದ ವಿತ್ತಿಯ ನಿರ್ವಹಣೆ ತೀವ್ರವಾಗಿ ಸಂಕಷ್ಟಮಯ ಸ್ಥಿತಿ ಇತ್ತು.

#BasavarajBommai #Budget2023, #StateBudget2023, #BommaiBudget, #ಬಜೆಟ್ #ಬಜೆಟ್2023,

Articles You Might Like

Share This Article