ಬರೋಬ್ಬರಿ 350 ಕೋಟಿ ಮೌಲ್ಯದ ಹೆರಾಯಿನ್ ವಶ..!

Social Share

ಅಹಮದಾಬಾದ್,ಜು.12- ಗುಜರಾತ್‍ನ ಭಯೋತ್ಪಾದಕ ನಿಗ್ರಹ ದಳ 350 ಕೋಟಿ ರೂ.ಗೂ ಹೆಚ್ಚು ಮೌಲ್ಯದ 70 ಕೆಜಿ ಹೆರಾಯಿನ್‍ನನ್ನು ಜಪ್ತಿಮಾಡಿದೆ. ಕುಚ್ ಜಿಲ್ಲೆಯ ಮುಂಡ್ರಾ ಬಂದರಿನಲ್ಲಿ ಕಾರ್ಯಾಚರಣೆ ನಡೆಸಿರುವ ಗುಜರಾತ್ ಭಯೋತ್ಪಾದಕ ನಿಗ್ರಹ ದಳ ಭಾರೀ ಪ್ರಮಾಣದ ಈ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದು, ಶೋಧ ಕಾರ್ಯವನ್ನು ಮುಂದುವರೆಸಿದೆ.

ಹೀಗಾಗಿ ಜಪ್ತಿ ಮಾಡಲಾದ ಮಾದಕ ವಸ್ತುವಿನ ಪ್ರಮಾಣ ಮತ್ತು ಮೌಲ್ಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಬೇರೆ ದೇಶದಿಂದ ಆಗಮಿಸಿದ ಕಂಟೈನರ್‍ನಲ್ಲಿ ಮಾದಕ ವಸ್ತು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಎಟಿಎಸ್ ಶೋಧ ಕಾರ್ಯಾಚರಣೆ ನಡೆಸಿತ್ತು.

ಬಂದರಿನಿಂದ ಹೊರಗಡೆ ನಿಲ್ಲಿಸಲಾಗಿದ್ದ ಕಂಟೈನರ್‍ನಲ್ಲಿ ಸರಕುಸಾಗಾಣಿಕೆಯೊಂದಿಗೆ ಮಾದಕವಸ್ತು ಅಡಗಿಸಲಾಗಿತ್ತು. ಎಟಿಎಸ್ ಜತೆಗೆ ಕಂದಾಯ ಗುಪ್ತಚರ ಇಲಾಖೆ ಕೂಡ ಕಾರ್ಯಾಚರಣೆಗೆ ಕೈ ಜೋಡಿಸಿದ್ದು, ಕಂಟೈನರ್‍ನನ್ನು ಜಪ್ತಿ ಮಾಡಲಾಗಿದೆ.

ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 21ಸಾವಿರ ಕೋಟಿ ಬೆಲೆ ಬಾಳುವ 3ಸಾವಿರ ಕೆಜಿ ಹೆರಾಯಿನ್‍ನನ್ನು ಕಂದಾಯ ಗುಪ್ತಚರ ಇಲಾಖೆ ಜಪ್ತಿ ಮಾಡಿತ್ತು. ಆಪ್ಘಾನಿಸ್ತಾನದಿಂದ ಬಂದಿದೆ ಎಂದು ಹೇಳಲಾದ ಈ ಮಾದಕ ವಸ್ತು ಎರಡು ಕಂಟೈನರ್‍ನಲ್ಲಿ ಸಾಗಿಸ್ಪಟ್ಟಿತ್ತು. ಈ ವರ್ಷದ ಆರಂಭದಲ್ಲಿ 500 ಕೋಟಿ ಬೆಲೆ ಬಾಳುವ 56 ಕೆಜಿ ಕೊಕೈನ್‍ನನ್ನು ಮುಂಡ್ರಾ ಬಂದರಿನಲ್ಲಿ ಜಪ್ತಿ ಮಾಡಲಾಗಿದೆ.

ಕಳೆದ ಏಪ್ರಿಲ್‍ನಲ್ಲಿ 1439 ಕೋಟಿ ಮೊತ್ತದ 205 ಕೆಜಿ ಹೆರಾಯಿನ್‍ನನ್ನು ಕಚ್ ಜಿಲ್ಲೆಯ ಕಂಡ್ಲಾ ಬಂದರಿನಲ್ಲಿ ವಶಪಡಿಸಿಕೊಳ್ಳಲಾಯಿತು. ಬಹುತೇಕ ಕಳೆದ ವರ್ಷದ ಇದೇ ಅವಗೆ 450 ಕೋಟಿ ರೂ. ಬೆಲೆ ಬಾಳುವ 90 ಕೆಜಿ ಹೆರಾಯಿನ್‍ನನ್ನು ಅಂಬ್ರೇಲಿ ಜಿಲ್ಲೆಯ ಪೈಪಾವವ್ ಬಂದರಿನಲ್ಲಿ ವಶಪಡಿಸಿಕೊಳ್ಳಲಾಗಿದೆ.

ಸಮುದ್ರ ಮಾರ್ಗ ಹೊಂದಿರುವ ಗಾಂನಾಡು ಗುಜರಾತ್ ಮಾದಕ ವಸ್ತುಗಳ ಸಾಗಾಣಿಕೆಗೆ ಹೆಬ್ಬಾಗಿಲಾಗುತ್ತಿದೆ ಎಂಬ ಆಕ್ಷೇಪಣೆಗಳು ಕೇಳಿ ಬರುತ್ತಿದೆ.

Articles You Might Like

Share This Article