ಜಾಮೀನು ಸಿಕ್ಕ ಬೆನ್ನಲ್ಲೇ ಮಾಡಾಳ್ ಪ್ರತ್ಯಕ್ಷ, ಅಭಿಮಾನಿಗಳಿದ ಹೂಹಾರ, ಜೈಕಾರ

Social Share

ಚನ್ನಗಿರಿ,ಮಾ.7- ನಾನು ಯಾವುದೇ ಅಕ್ರಮ ಹಣ ಸಂಪಾದಿಸಿಲ್ಲ. ನನ್ನ ಮನೆಯಲ್ಲಿ ಸಿಕ್ಕ ಹಣ ಕ್ರಷರ್ ಉದ್ಯಮದಿಂದ ಹಾಗೂ ಅಡಿಕೆ ಮಾರಿ ಬಂದ ಆದಾಯವಾಗಿದ್ದು, ಅದಕ್ಕೆ ಸೂಕ್ತ ದಾಖಲೆ ಇದೆ. ಅದನ್ನು ಸಲ್ಲಿಸುತ್ತೇನೆ. ಲಂಚ ಪ್ರಕರಣದಲ್ಲಿ ನಾನು ಸಂಪೂರ್ಣ ನಿರ್ದೋಷಿ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪುತ್ರ ಪ್ರಶಾಂತ್ ಮಾಡಾಳ್ ಅವರ ಕಚೇರಿ ಮೇಲೆ ನಡೆದ ದಾಳಿ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಸುಮಾರು 2 ಕೋಟಿ ಹಣ ವಶಪಡಿಸಿಕೊಂಡಿದ್ದರು. ಇದೇ ವೇಳೆ ಸದಾಶಿವನಗರದಲ್ಲಿರುವ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ 6 ಕೋಟಿ ಪತ್ತೆಯಾಗಿತ್ತು. ಇದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.

ಕಾಂಗ್ರೆಸ್ ಸೇರಲಿದ್ದಾರೆ ಬಿಜೆಪಿಯ ಹಲವು ಶಾಸಕರು : ಡಿಕೆಶಿ ಬಾಂಬ್

ಇದಾಗುತ್ತಿದ್ದಂತೆ ಶಾಸಕ ವಿರೂಪಾಕ್ಷಪ್ಪ ಅವರು ಅಜ್ಞಾನತರಾಗಿದ್ದರು. ಅವರನ್ನು ಪತ್ತೆಹಚ್ಚಲು ಲೋಕಾಯುಕ್ತರ ವಿಶೇಷ ತಂಡವನ್ನೇ ರಚಿಸಲಾಗಿತ್ತು. ಇಂದು ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿದ ಮರುಕ್ಷಣವೇ ಅವರು ಚನ್ನಗಿರಿಯ ಚನ್ನೇಶ್ವರಪುರದ ನಿವಾಸದಿಂದ ಹೊರಬಂದು ಸ್ಥಳೀಯ ಮಹಾದೇವಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಅವರ ಅಭಿಮಾನಿಗಳು ಅವರಿಗೆ ಹೂವಿನಹಾರ ಹಾಕಿ ಜೈಕಾರ ಕೂಗಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಅಕ್ರಮ ಹಣ ಸಂಪಾದಿಸಿಲ್ಲ. ದಾಳಿ ವೇಳೆ ಸಿಕ್ಕ ಹಣ ನಾವು ದುಡಿದು ಸಂಪಾದಿಸಿದ್ದು, ಅದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಆದಿಚುಂಚನಗಿರಿ ಕ್ಷೇತ್ರದಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿ ರಥೋತ್ಸವ

ನನ್ನ ಮೇಲೆ ಆಪಾದನೆ ಬಂದಿದ್ದರಿಂದ ನಾನು ಯಾರನ್ನೂ ಭೇಟಿಯಾಗಲಿಲ್ಲ. ನಾನು ಎಲ್ಲಿ ಓಡಿಹೋಗಿರಲಿಲ್ಲ. ನಾಪತ್ತೆಯಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

High Court, grants, interim, anticipatory, bail, BJP, MLA, Madal Virupakshappa,

Articles You Might Like

Share This Article