ನಾಳೆಯಿಂದ ಹಾಲಿನ ದರ 2 ರೂ. ಏರಿಕೆ..?

Social Share

ಬೆಂಗಳೂರು,ನ.21- ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯಿಂದ ತಡೆಹಿಡಿಯಲ್ಪಟ್ಟಿದ್ದ ಹಾಲಿನ ದರ ಬಹುತೇಕ ಇಂದು ಏರಿಕೆಯಾಗುವ ಸಾಧ್ಯತೆ ಇದ್ದು ನಾಳೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.
ಕಳೆದ ವಾರ ಕೆಎಂಎಫ್ ಪ್ರತಿ ಲೀಟರ್ ಹಾಲು ಮತ್ತು ಮೊಸರಿಗೆ 3 ರೂ. ದರವನ್ನು ಪರಿಷ್ಕರಣೆ ಮಾಡಿ ಏರಿಕೆ ಮಾಡಿತ್ತು.

ಆದರೆ ಇದಕ್ಕೆ ಸಿಎಂ ಬೊಮ್ಮಾಯಿ ಅವರು ತಡೆಹಿಡಿದು 20ರ ನಂತರ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿ
ದರ ಏರಿಕೆಯನ್ನು ತಡೆ ಹಿಡಿದಿದ್ದರು. ಇಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಚಾರಕಿಹೊಳಿ ಹಾಗೂ ಕೆಎಂಎಫ್‍ನ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಮತ್ತಿತರ ಅಧಿಕಾರಿಗಳ ಜೊತೆ ಸಭೆ ನಡೆಸಲಿರುವ ಸಿಎಂ ದರ ಪರಿಷ್ಕರಣೆಗೆ ಬಹುತೇಕ ಒಪ್ಪಿಗೆ ಸೂಚಿಸಲಿದ್ದಾರೆ ಎಂದು ತಿಳಿದುಬಂದಿದೆ.

ನಿರ್ವಹಣೆ, ಸಿಬ್ಬಂದಿ ವೇತನ ಮತ್ತಿತರ ಕಾರಣಗಳಿಗಾಗಿ ಕೆಎಂಎಫ್ ದರವನ್ನು ಹೆಚ್ಚಳ ಮಾಡಬೇಕೆಂದು ಕೆಎಂಎಫ್ ಪಟ್ಟು ಹಿಡಿದಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಹೊರೆ ಹೊರಿಸಲು ಸಿಎಂ ಒಪ್ಪದಿರುವುದು ಕಗ್ಗಂಟಾಗಿಯೇ ಉಳಿದಿತ್ತು.

ಠಾಕ್ರೆ ಬಣ ಮತ್ತು ಕಾಂಗ್ರೆಸ್ ನಡುವೆ ಮತ್ತೆ ಪ್ಯಾಚಪ್

ಅಧಿಕಾರಿಗಳ ಜೊತೆ ಸಭೆ ನಡೆಸಲಿರುವ ಸಿಎಂ ದರ ಪರಿಷ್ಕರಣೆ ಕುರಿತಂತೆ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಲೀಟರ್‍ಗೆ 2 ರೂ. ಏರಿಕೆ ಸಾಧ್ಯತೆ:
ಮೂಲಗಳ ಪ್ರಕಾರ ಕೆಎಂಎಫ್ ಪ್ರಸ್ತಾವನೆ ಇಟ್ಟಿದ್ದ 3 ರೂ. ಬದಲಿಗೆ ಸರ್ಕಾರ ಪ್ರತಿ ಲೀಟರ್ ಹಾಲು ಮತ್ತು ಮೊಸರಿಗೆ ತಲಾ 2 ರೂ. ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಏಕಾಏಕಿ 3 ರೂ. ಹೆಚ್ಚಿಸಿದರೆ ಗ್ರಾಹಕರ ಕೆಂಗೆಣ್ಣಿಗೆ ಗುರಿಯಾಗಬಹುದು ಎಂಬ ಆತಂಕ ಬೊಮ್ಮಾಯಿ ಅವರನ್ನು ಕಾಡಿದೆ. ಒಂದು ಕಡೆ ರೈತರನ್ನು ಓಲೈಕೆ ಮಾಡುವುದು, ಮತ್ತೊಂದು ಕಡೆ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದಂತೆ ಸಮತೋಲನದ ದರ ಪರಿಷ್ಕರಣೆಗೆ ಸಿಎಂ ಒಲವು ತೋರಿದ್ದಾರೆ.

ಪ್ರತಿ ಲೀಟರ್ ಹಾಲಿನ ದರದಲ್ಲಿ 3 ರೂ. ಹೆಚ್ಚಳ ಮಾಡುವಂತೆ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಮೂರು ತಿಂಗಳ ಹಿಂದೆಯೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ರಾಜ್ಯ ಪಶು ಸಂಗೋಪನಾ ಇಲಾಖೆ ಎಲ್ಲ ಒಕ್ಕೂಟಗಳಿಗೂ ಸೂಚನೆ ಹೊರಡಿಸಿ, ಲೀಟರ್‍ಗೆ 3 ರೂ. ಅಥವಾ 2 ರೂ. ಏರಿಕೆ ಮಾಡಿದಲ್ಲಿ ಅದರಿಂದ ರೈತರಿಗೆ ಎಷ್ಟು ಪ್ರಮಾಣದಲ್ಲಿ ಹಂಚಿಕೆ ಮಾಡುತ್ತೀರಿ ಎಂದು ವಿವರಣೆ ಕೇಳಿತ್ತು.

ವಿಲೇವಾರಿ ತೊಂದರೆ:
ಒಂದು ವೇಳೆ ಹಾಲಿನ ದರ ಏರಿಕೆ ಮಾಡಿದಲ್ಲಿ ಹಾಲು ಸಂಗ್ರಹ ಪ್ರಮಾಣ ಮತ್ತಷ್ಟು ಹೆಚ್ಚಾಗಿ ಅದನ್ನು ವಿಲೇವಾರಿ ಮಾಡುವುದು ಕಷ್ಟವಾಗಲಿದೆ ಎಂದೂ ಕೆಎಂಎಫ್‍ನ ಕೆಲ ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಾರೆ.

ಮೆರವಣಿಗೆ ಹೋಗುತ್ತಿದ್ದ ಜನರ ಮೇಲೆ ಟ್ರಕ್ ಹರಿದು 12 ಮಂದಿ ಸಾವು

ಬೇಸಿಗೆ ಸಂದರ್ಭದಲ್ಲಿಯೂ ಪ್ರತಿದಿನ 55 ಲಕ್ಷ ಲೀ.ಗೂ ಹೆಚ್ಚಿನ ಹಾಲು ಸಂಗ್ರಹ ಆಗುತ್ತದೆ. ಏಪ್ರಿಲ್ ಬಳಿಕ ಬಹುತೇಕ ಮಳೆಗಾಲ ಆರಂಭವಾಗಲಿದ್ದು, ನೀರು ಮತ್ತು ಹಸಿ ಮೇವಿನ ಲಭ್ಯತೆ ಹೆಚ್ಚಾಗುತ್ತದೆ. ಆಗ ಹಾಲಿನ ಸಂಗ್ರಹ ಮತ್ತಷ್ಟು ಹೆಚ್ಚಾಗುತ್ತದೆ. ಈಗ ಬೇಸಿಗೆ ರಜೆ ಇರುವುದರಿಂದ ಶಾಲೆಗಳಿಗೆ ಹಾಲು ಪೂರೈಕೆ ಸ್ಥಗಿತಗೊಂಡಿದೆ.

ಬೇಸಿಗೆ ಆರಂಭವಾಗುವ ಮುನ್ನವೇ ಹಾಲಿನ ದರ ಹೆಚ್ಚಳ ಮಾಡಬೇಕು. ಅದುಬಿಟ್ಟು ಮಳೆಗಾಲ ಆರಂಭವಾಗುವ ಮುನ್ನ ದರ ಏರಿಸಿದರೆ ವಿಲೇವಾರಿ ಕಷ್ಟವಾಗಲಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಮಹಿಳೆಯನ್ನು ಕ್ರೂರವಾಗಿ ಕೊಂದುಹಾಕಿದ ಕಾಡಾನೆ

Hike, Nandini, milk, price, KMF, CM Bommai,

Articles You Might Like

Share This Article