ಹಿಮಾಚಲಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ

Social Share

ಶೀಮ್ಲಾ(ಹಿಮಾಚಲಪ್ರದೇಶ),ನ.12- ಹಿಮ ಬೆಟ್ಟಗಳ ನಾಡು ಹಿಮಾಚಲಪ್ರದೇಶ ವಿಧಾನಸಭೆಗೆ ಇಂದು ಮತದಾನ ನಡೆಯಿತು. ಬೆಳಗ್ಗೆ ಆರಂಭದಲ್ಲಿ ನಿಧಾನಗತಿಯಲ್ಲಿ ಶುರುವಾದ ಮತದಾನ 11 ಗಂಟೆ ಸುಮಾರಿಗೆ ಬಿರಿಸು ಪಡೆದುಕೊಂಡಿತು. ಒಟ್ಟು 68 ಕ್ಷೇತ್ರಗಳ ವಿಧಾನಸಭೆಯಲ್ಲಿ 412ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಒಟ್ಟು 55,92,000 ನೊಂದಾಯಿತ ಮತದಾರರ ಪೈಕಿ ಬಹಳಷ್ಟು ಮಂದಿ ಸರದಿ ಸಾಲಿನಲ್ಲಿ ನಿಂತು ಇಂದು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ತಮ್ಮ ಪತ್ನಿಯೊಂದಿಗೆ ಬೈಲಾಸ್‍ಪುರ್‍ನಲ್ಲಿ ಮತದಾನ ಮಾಡಿದ್ದು, ಈ ಬಾರಿ ಮತದಾನದ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ. ಜನರಲ್ಲಿ ಮತದಾನ ಮಾಡುವ ಉಮೇದು ಹೆಚ್ಚಾಗಿ ಕಂಡುಬರುತ್ತಿದೆ ಎಂದಿದ್ದಾರೆ.

ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಪ್ರೇಮ್‍ಕುಮಾರ್ ಧಮಾಲ್ ಮತ್ತು ಅವರ ಪುತ್ರ ಅನುರಾಗ್‍ಸಿಂಗ್ ಠಾಕೂರ್ ಅವರು ಕುಟುಂಬ ಸಮೇತರಾಗಿ ಅಮೀರ್‍ಪುರದ ಸಮೀರ್‍ಪುರದಲ್ಲಿ ಮತದಾನ ಮಾಡಿದ್ದಾರೆ. ಕಾಂಗ್ರೆಸ್‍ನ ರಾಜ್ಯಾಧ್ಯಕ್ಷರಾದ ಪ್ರತಿಭಾ ಸಿಂಗ್ ಅವರು ತಮ್ಮ ಶಾಸಕ ಪುತ್ರ ವಿಕ್ರಮಾತ್ಯ ಸಿಂಗ್ ಅವರೊಂದಿಗೆ ಶೀಮ್ಲಾದ ರಾಮ್‍ಪುರದಲ್ಲಿ ಮತದಾನ ಮಾಡಿದ್ದಾರೆ.

ಕಾಲಮಿತಿಯೊಳಗೆ ಕಡತ ವಿಲೇವಾರಿ ಮಾಡುವಂತೆ ಸಿಎಂ ಎಚ್ಚರಿಕೆ

ಅಭಿವೃದ್ದಿ ಯೋಜನೆಗಳಿಗಾಗಿ ಜನ ಈ ಬಾರಿ ಮತ ಹಾಕಬೇಕು. ಕಾಂಗ್ರೆಸ್ ಅಭಿವೃದ್ಧಿ ಪರ ಇದೆ. ಕನಿಷ್ಟ 40-45 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಿಮಾಚಲದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು, ಪ್ರಜಾಪ್ರಭುತ್ವವನ್ನು ವೈಭವೀಕರಿಸುವ ಮತದಾನ ಎಂಬ ಹಬ್ಬದಲ್ಲಿ ಎಲ್ಲರೂ ಭಾಗವಹಿಸಬೇಕು. ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸುವುದರಿಂದ ಸಮೃದ್ಧ ಹಿಮಾಚಲ ಪ್ರದೇಶ ನಿರ್ಮಾಣ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಸ್ವಾಮೀಜಿ ಹೆಗಲ ಮೇಲೆ ಕೈ ಇಟ್ಟು ಪೋಸ್ ಕೊಟ್ಟ ಅಶೋಕ್ ವಿರುದ್ಧ ಆಕ್ರೋಶ

ಕೇಂದ್ರ ಗೃಹ ಸಚಿವ ಅಮಿತ್ ಷಾ ಟ್ವೀಟ್ ಮಾಡಿ, ಹಿಮಾಚಲ ಪ್ರದೇಶದ ತಾಯಂದಿರು, ಸಹೋದರಿಯರು, ಯುವಕರು ತಮ್ಮ ಹಕ್ಕು ಚಲಾಯಿಸಬೇಕು. ಸದೃಢ ಸರ್ಕಾರಕ್ಕಾಗಿ ಮತ್ತು ನಾಳಿನ ಸುವರ್ಣ ದಿನಗಳಿಗಾಗಿ ಮತದಾನ ಮಾಡಿ ಎಂದಿದ್ದಾರೆ.

Articles You Might Like

Share This Article