ಬೆಳಗಾವಿ,ಡಿ.29-ಜೈಲಿನೊಳಗೆ, ಮೊಬೈಲ್, ಗಾಂಜಾ ಮೊದಲಾದ ಮಾದಕ ವಸ್ತುಗಳ ಸರಬರಾಜು ಇತರೆ ಅಕ್ರಮಗಳನ್ನು ನಿಯಂತ್ರಿಸಲು ಜೈಲಿನ ಅಧಿಕಾರಿಗಳು, ಸಿಬ್ಬಂದಿ ಕೈಗೊಂಡಿರುವ ಕ್ರಮಗಳ ಕುರಿತು ಖುದ್ದು ಪರಿಶೀಲನೆಗಾಗಿ ಐತಿಹಾಸಿಕ ಹಿಂಡಲಗಾ ಜೈಲಿಗೆಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಬೆಳಿಗ್ಗೆ ಅನಿರೀಕ್ಷಿತ ಭೇಟಿ ಕೊಟ್ಟಿದ್ದರು.
ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಹಿನ್ನಲೆಯಲ್ಲಿ ನಗರದಲ್ಲಿಯೇ ವಾಸ್ತವ್ಯವಿರುವ ಗೃಹ ಸಚಿವರು ಹಿಂಡಲಗಾ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
ಮಹಾರಾಷ್ಟ್ರದಲ್ಲೂ ಲವ್ ಜಿಹಾದ್ ವಿರುದ್ಧ ಕಾನೂನಾಸ್ತ್ರ ಜಾರಿ..?
ಜೈಲಿನೊಳಗೆ, ಮೊಬೈಲ್, ಗಾಂಜಾ ಸೇರಿ ಡ್ರಗ್ಸ್ ಸರಬರಾಜು ಇತರೆ ಅಕ್ರಮಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿರುವುದು ಎಷ್ಟರ ಮಟ್ಟಿಗೆ ಅನುಷ್ಠಾನವಾಗಿದೆ ಎಂಬುದನ್ನು ಪರಿಶೀಲಿಸಿದರು.
ಈ ಜೈಲಿನ ರಕ್ಷಣಾ ವ್ಯವಸ್ಥೆಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರಲ್ಲದೆ, ಜೈಲಿನಲ್ಲಿ ನೀಡಿತ್ತಿರುವ ಸೌಲಭ್ಯಗಳ ಕುರಿತು ಕೈದಿಗಳ ಜತೆ ಸಂವಾದ ನಡೆಸಿ ಅಹವಾಲು ಸ್ವೀಕರಿಸಿದರು.
ಫಿಲಿಪೈನ್ಸ್ ನಲ್ಲಿ ಭಾರಿ ಮಳೆ, ಪ್ರವಾಹಕ್ಕೆ 32 ಮಂದಿ ಸಾವು
ಸನ್ನಡತೆ ಹೊಂದಿರುವ ಕೈದಿಗಳನ್ನು ಗುರುತಿಸಲು ಸೂಚಿಸಿ ಜೈಲಿನಲ್ಲಿ ಶುದ್ಧ ಕುಡಿಯುವ ನೀರು, ಊಟ ಮೊದಲಾದ ಸೌಲಭ್ಯಗಳಲ್ಲಿ ಯಾವುದೇ ಕೊರತೆಯಾಗದಂತೆ ಎಚ್ಚರ ವಹಿಸಲು ಸೂಚನೆ ನೀಡಿದರು.
ಗೃಹಸಚಿವರೊಂದಿಗೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಇದ್ದರು.
hindalga jail, home minister, araga jnanendra, visit,