ನವದೆಹಲಿ,ನ.29- ಶ್ರದ್ದಾ ವಾರ್ಕರ್ ಭೀಕರ ಹತ್ಯೆಯ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲ ಸುಳ್ಳು ಪತ್ತೆ ಪರೀಕ್ಷೆ ವೇಳೆ ಆಘಾತಕಾರಿ ಅಂಶಗಳನ್ನು ಹೊರಹಾಕಿದ್ದು, ನನ್ನನ್ನು ನೇಣಿಗೇರಿಸಲು ವಿಷಾದ ಪಡುವುದಿಲ್ಲ ಎಂದಿದ್ದಾನೆ.
ಪೊಲೀಸ್ ಅಧಿಕಾರಿಗಳ ಮಾಹಿತಿ ಆಧರಿಸಿ ಡೈಲಿ ಜಾಗರಣಾ ಪತ್ರಿಕೆ ಮಂಪರು ಪರೀಕ್ಷೆಯ ಮಾಹಿತಿಯನ್ನು ಪ್ರಕಟಿಸಿದೆ. ಅದರ ಪ್ರಕಾರ ಶ್ರದ್ದಾ ಕೊಲೆಗಾಗಿ ತನ್ನನ್ನು ನೇಣಿಗೇರಿಸಿದರೂ ಯಾವುದೇ ಬೇಸರವಿಲ್ಲ. ನಾನು ಹೀರೋ ಆಗಿಯೇ ಸ್ವರ್ಗಕ್ಕೆ ಪ್ರವೇಶ ಪಡೆಯುತ್ತೇನೆ. ಜನತ್‍ನಲ್ಲಿ ಕನ್ಯೆಯರಿಂದ ಸೇವೆ ಪಡೆಯುತ್ತೇನೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಸುಮಾರು 20ಕ್ಕೂ ಹೆಚ್ಚು ಹಿಂದೂ ಯುವತಿಯರ ಜೊತೆ ಸಂಬಂಧ ಹೊಂದಿದ್ದಾಗಿ ಹೇಳಿರುವ ಅಫ್ತಾಬ್, ತನಗೆ ನೆನಪಿರುವ ಮಟ್ಟಿಗೆ ತಾನು ಎಂದೂ ಕ್ಷಮೆ ಕೇಳಿಲ್ಲ. ವ್ಯವಸ್ಥಿತವಾಗಿ ಹಿಂದೂ ಯುವತಿಯರು ಮತ್ತು ಹೆಂಗಸರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದ.
ಚುನಾವಣಾ ಆಯೋಗವೇ ಬಿಎಲ್‍ಒಗಳನ್ನು ನೇಮಕ ಮಾಡಲಿ
ಶ್ರದ್ದಾ ಹತ್ಯೆ ಬಳಿಕ ಅಫ್ತಾಬ್ ಮನಶಾಸ್ತ್ರಜ್ಞೆಯೊಬ್ಬಳನ್ನು ತನ್ನ ಅಪಾರ್ಟ್ ಮೆಂಟ್‍ಗೆ ಆಹ್ವಾನಿಸಿದ್ದ. ಆಕೆ ಕೂಡ ಹಿಂದೂವಾಗಿದ್ದಳು. ಶ್ರದ್ದಾಳ ಉಂಗುರವನ್ನು ಆಕೆಗೆ ಉಡುಗೊರೆಯಾಗಿ ನೀಡಿದ್ದ ಎಂದು ತಿಳಿದುಬಂದಿದೆ.
ಶ್ರದ್ದಾಳನ್ನು ಮುಂಬೈನಲ್ಲೇ ಹತ್ಯೆ ಮಾಡಲು ಅಫ್ತಾಬ್ ಸಂಚು ನಡೆಸಿದ್ದ. ಆದರೆ ಅದು ಸಾಧ್ಯವಾಗಲಿಲ್ಲ. ದೆಹಲಿಗೆ ಬಂದ ಬಳಿಕ ಕೊಲೆ ಮಾಡಿದ್ದ ಎನ್ನಲಾಗಿದೆ.
ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಎಟಿಎಂ ದೋಚಿದ್ದ ಸೆಕ್ಯುರಿಟಿ ಗಾರ್ಡ್
ಅಫ್ತಾಬ್‍ಗೆ ಡಿಸೆಂಬರ್ 1 ಮತ್ತು 5ರಂದು ಮತ್ತೊಮ್ಮೆ ಮಂಪರು ಪರೀಕ್ಷೆಗೊಳಪಡಿಸಲು ನ್ಯಾಯಾಲಯ ಅನುಮತಿ ನೀಡಿದೆ.
Hindu, girls, relationship, Shraddha, killer, Aftab, during, polygraph, test,