ಲವ್ ಜಿಹಾದ್ ಪ್ರಕರಣಗಳ ತನಿಖೆಗೆ ವಿಶೇಷ ಶಾಖೆ ಸ್ಥಾಪಿಸುವಂತೆ ಆಗ್ರಹ

Social Share

ಬೆಂಗಳೂರು,ಡಿ.11- ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಘಟನೆಗಳ ಹಿನ್ನೆಲೆ ಲವ್ ಜಿಹಾದ್ ಪ್ರಕರಣಗಳ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ಪೊಲೀಸ್ ವಿಶೇಷ ಶಾಖೆಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ದುರ್ಗಾ ವಾಹಿನಿಯಿಂದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿಂದೂ ಜನಜಗೃತಿ ಸಮಿತಿಯ ಮೋಹನ್ ಗೌಡ, ದೆಹಲಿಯ ಜಿಹಾದಿ ಅಪ್ತಾಭ್ ಹಿಂದೂ ಯುವತಿ ಶ್ರದ್ಧಾ ಬರ್ಬರವಾಗಿ ಹತ್ಯೆ ಮಾಡಿದಂತೆ ರಾಜ್ಯದಲ್ಲೂ ಹೆಚ್ಚು ಲವ್ ಜಿಹಾದ್ ಘಟನೆಗಳು ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ದೆಹಲಿ ಪಾಲಿಕೆ ಸೋಲಿನ ಹೊಣೆ ಹೊತ್ತು ಬಿಜೆಪಿ ಅಧ್ಯಕ್ಷ ರಾಜೀನಾಮೆ

ಕಳೆದ ವಾರ ರಾಯಚೂರಿನಲ್ಲಿ ಇಬ್ಬರು ಹಿಂದೂ ಯುವತಿಯರು ಲವ್ ಜಿಹಾದ್‍ಗೆ ಬಲಿಯಾಗಿ ಇಸ್ಲಾಮ್‍ಗೆ ಮತಾಂತರವಾದರು. ಪೋಷಕರು ದೂರು ನೀಡಿದರೂ ಸಹ ಪೋಲಿಸರು ಅಪರಾಯ ಬಂಧನ ಮಾಡಿಲ್ಲ. ಈ ಪ್ರಕರಣವನ್ನು ಮತಾಂತರ ಕಾಯ್ದೆ ಎಂದು ನೋಂದಣಿ ಮಾಡಿಲ್ಲ. ಮಾರ್ಚ್ 2022ರಂದು ಗದಗದಲ್ಲಿ ಅಪೂರ್ವ ಯುವತಿಯು ಮತಾಂತರ ಮಾಡಿ, ನಂತರ ಆಕೆಯ ಹತ್ಯೆ ಮಾಡಲು ಪ್ರಯತ್ನ ನಡೆಯಿತು. ಮಂಗಳೂರು, ಉಡುಪಿ, ಶಿವಮೊಗ್ಗ, ಕೊಡಗು, ಬೆಂಗಳೂರಿನಲ್ಲಿ ಮುಸಲ್ಮಾನ ಯುವತಿಯರ ಶಾಹಿನ್ ಗ್ಯಾಂಗ್ ಲವ್ ಜಿಹಾದ್ ಮಾಡಲು ಕಾರ್ಯನಿರತವಾಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಇದ್ದರೂ ಸಹ ವ್ಯಾಪಕವಾಗಿ ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮತಾಂತರ ಮಾಡುವ ಘಟನೆಗಳು ಹೆಚ್ಚಾಗಿವೆ. ಇದನ್ನು ತಡೆಯಲು ಲವ್ ಜಿಹಾದ್ ವಿರೋಧಿ ಪೊಲೀಸ್ ದಳವನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹ ಮಾಡಲಾಯಿತು.

ಆಂದ್ರದಲ್ಲಿ ಸದ್ದು ಮಾಡುತ್ತಿರುವ ಪ್ರತಿಷ್ಠಿತ ಕುಟುಂಬಗಳ ಹೆಣ್ಣು ಮಕ್ಕಳು

ಲವ್ ಜಿಹಾದ್‍ಗೆ ಪ್ರಚೋದನೆ ನೀಡುವ ಶಾಹಿನ್ ಗ್ಯಾಂಗ್ ಮೇಲೆ ಕ್ರಮ ಜರುಗಿಸಬೇಕು. ಅಷ್ಟೇ ಅಲ್ಲ ರಾಜ್ಯದಲ್ಲಿ 21,000 ಯುವತಿಯರು, ಮಹಿಳೆಯರು ಕಾಣೆಯಾಗಿದ್ದಾರೆ. ಅದರ ಹಿಂದೆ ಲವ್ ಜಿಹಾದ್ ಮಾಫಿಯಾ ಕೈವಾಡದ ಶಂಕೆ ಇದೆ. ಇದರ ಬಗ್ಗೆ ತನಿಖೆಗೆ ಒತ್ತಾಯಿಸಿರುವುದಾಗಿ ತಿಳಿಸಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ರಣರಾಗಿಣಿ ಮಹಿಳಾ ಶಾಖೆಯ ಭವ್ಯ ಗೌಡ, ದುರ್ಗಾ ವಾಹಿನಿಯ ನಂದಿನಿ ರಾಜï, ಶ್ರೀರಾಮ ಸೇನೆಯ ಸುಂದರೇಶ್, ಅಮರನಾಥ ಮುಂತಾದವರು ಉಪಸ್ಥಿತರಿದ್ದರು.

Hindu Janajagruti Samiti, home minister, araga jnanendra,

Articles You Might Like

Share This Article