‘ನಮ್ಮ ಸಂವಿಧಾನದಲ್ಲೇ ಹಿಂದುತ್ವದ ಪ್ರತಿಬಿಂಬವಿದೆ’ : ಮೋಹನ್‍ ಭಾಗವತ್

Social Share

ನಾಗ್ಪುರ,ಫೆ.7- ದೇಶದ ಐದು ಸಾವಿರ ವರ್ಷಗಳ ಹಿಂದಿನ ಸಂಪ್ರದಾಯ ಮತ್ತು ಸಂಸ್ಕøತಿಯಿಂದಲೇ ಸಂವಿಧಾನ ರಚನೆಯಾಗಿದ್ದು, ನಮ್ಮ ಸಂವಿಧಾನದಲ್ಲಿ ಹಿಂದುತ್ವದ ಪ್ರತಿಬಿಂಬವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‍ಎಸ್‍ಎಸ್)ಮುಖ್ಯಸ್ಥ ಮೋಹನ್‍ಭಾಗವತ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಹಿಂದುತ್ವ ಮತ್ತು ರಾಷ್ಟ್ರೀಯ ಏಕೀಕರಣ ಕುರಿತು ಮಾತನಾಡಿದ ಅವರು, ಹಿಂದುತ್ವವು ಸಂವಿಧಾನ ಪೀಠಿಕೆಯ ಪ್ರತಿಬಿಂಬವಾಗಿದೆ. ಸಮಾನತೆ, ಬ್ರಾತೃತ್ವ, ಸಾಮಾಜಿಕ ನ್ಯಾಯ ಮತ್ತು ಏಕತೆ, ವೈವಿಧ್ಯತೆಗಳ ಮೂಲಕ ಸಾಗುತ್ತಿದೆ ಎಂದು ತಿಳಿಸಿದ್ದಾರೆ.
ದೇಶದ ಎಲ್ಲರೂ ಭಾರತ ಮಾತೆಯ ಸಂತತಿಯಾಗಿದ್ದು, ವಂದೇ ಮಾತರಂ ಗೀತೆ ಎಲ್ಲರನ್ನು ಒಂದುಗೂಡಿಸುತ್ತದೆ. ನಾವೆಲ್ಲರೂ ಒಗ್ಗಟ್ಟಿನಿಂದ ನಡೆಯಬೇಕು. ಹಿಂದುತ್ವವೇ ನಮ್ಮೆಲ್ಲರನ್ನು ಜೋಡಿಸುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು.
ಎಲ್ಲವನ್ನು ಒಳಗೊಂಡಿರುವ ಸತ್ಯವನ್ನು ನಾವು ಹಿಂದುತ್ವ ಎಂದು ಕರೆಯುತ್ತೇವೆ. ಅದುವೇ ನಮ್ಮ ಹಿಂದುತ್ವ, ಅದು ರಾಷ್ಟ್ರೀಯ ಗುರುತು. ನಾವು ಈಗ ಜಾತ್ಯಾತೀತತೆ ಬಗ್ಗೆ ಮಾತನಾಡುತ್ತೇವೆ. ಆದರೆ, ಅದು ನಮ್ಮ ದೇಶದಲ್ಲಿ ವರ್ಷಗಳ ಕಾಲ ಸಂವಿಧಾನವನ್ನು ರಚಿಸುವ ಮೊದಲೇ ಅಸ್ಥಿತ್ವದಲ್ಲಿ ಇತ್ತು ಎಂದು ತಿಳಿಸಿದ್ದಾರೆ.
ವಿವಿಧತೆಯಲ್ಲಿ ಏಕತೆಯ ಪರಿಕಲ್ಪನೆ, ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕøತಿಯ ಮಾರ್ಗವಾಗಿದೆ ಮತ್ತು ಭಾರತೀಯ ಸಾಂಸ್ಕøತಿಕ ಗುರುತನ್ನು ಹಿಂದುತ್ವದಿಂದಲೇ ವ್ಯಾಖ್ಯಾನಿಸಲಾಗಿದೆ. ಹಿಂದು ಎಂಬುದು ಸಂಸ್ಕøತಿಯ ಹೆಸರಾಗಿದೆ. ಹೆಚ್ಚಾಗಿ ದೇಶದ ಜನರ ಜೀವನ ಶೈಲಿಯಾಗಿದೆ.
ಯಾರು ಕೂಡ ಧರ್ಮದಿಂದ ಮುಕ್ತರಾಗಿಲ್ಲ. ಕಾಲ ಬದಲಾದಂತೆ ಮತ್ತು ಬೇಡಿಕೆಯಂತೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕೆಂದು ಅವರು ಅಭಿಪ್ರಾಯಪಟ್ಟರು.

Articles You Might Like

Share This Article