Saturday, September 23, 2023
Homeಇದೀಗ ಬಂದ ಸುದ್ದಿಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸಂಸತ್ ಭವನ

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸಂಸತ್ ಭವನ

- Advertisement -

ನವದೆಹಲಿ, ಸೆ.19- ಕಳೆದ 75 ವರ್ಷಗಳ ಕಾಲ ದೇಶದ ಅಸ್ಮಿತೆಯಾಗಿದ್ದ ಸಂಸತ್ ಭವನದಿಂದ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳು ಇಂದು ಹೊಸ ಸಂಸತ್ ಕಟ್ಟಡಕ್ಕೆ ಸ್ಥಳಾಂತರಗೊಂಡಿವೆ. ಸಂಸತ್ ಭವನ ಸ್ಥಳಾಂತರ, ಮಹಿಳಾ ಮಹಿಳಾ ಮಸೂದೆ ಮಂಡನೆ ಸೇರಿದಂತೆ ಐತಿಹಾಸಿಕ ಕಾರಣಗಳಿಗಾಗಿ ಸೆ.18ರಿಂದ ಐದು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ ಕರೆಯಲಾಗಿದೆ. ಅದರ ಭಾಗವಾಗಿ ನಿನ್ನೆ ಇಡೀ ದಿನ ನಡೆದ ಕಲಾಪದಲ್ಲಿ 75 ವರ್ಷಗಳ ಕಾಲ ಸಂಸತ್ ಭವನದೊಂದಿಗೆ ನಡೆದು ಬಂದ ನೆನಪುಗಳ ಸ್ಮರಣೆ ಮಾಡಲಾಯಿತು.

ಸಂವಿಧಾನ ಅಂಗೀಕಾರ, ವ್ಯಾಟ್ ಮತ್ತು ಜಿಎಸ್‍ಟಿ ತೆರಿಗೆ ಪದ್ಧತಿಗಳು ಸೇರಿದಂತೆ ಹಲವು ಮಹತ್ವದ ನೆನಪುಗಳನ್ನು ಪ್ರಧಾನಿ ಸೇರಿದಂತೆ ಎಲ್ಲಾ ಸದಸ್ಯರು ಹಂಚಿಕೊಂಡರು. ಇಂದು ಬೆಳಗ್ಗೆ ಹಳೆಯ ಭವನದಲ್ಲೇ ಸಂಸತ್‍ನ ಉಭಯ ಸದನಗಳ ಕಲಾಪ ಆರಂಭವಾಯಿತು. ಬಳಿಕ ಸಂಸತ್‍ನ ಎಲ್ಲಾ ಸದಸ್ಯರು ಸಾಮೂಹಿಕ ಛಾಯಾಚಿತ್ರಕ್ಕೆ ಪೋಸು ನೀಡಿದರು. ನಂತರ ಸಂಸತ್ ಭವನದ ಪ್ರತಿಷ್ಠಿತ ಸೆಂಟ್ರಲ್ ಹಾಲ್‍ನಲ್ಲಿ ನಿರ್ಗಮನದ ಜಂಟಿ ಸಮಾವೇಶ ನಡೆಯಿತು.

- Advertisement -

BIG NEWS: ರಾಜ್ಯಾದ್ಯಾಂತ ಹುಕ್ಕಾಬಾರ್ ನಿಷೇಧಿಸಿಲು ರಾಜ್ಯ ಸರ್ಕಾರ ತೀರ್ಮಾನ

ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನ್ಕರ್, ಲೋಕಸಭೆಯ ಅಧ್ಯಕ್ಷ ಓಂಬಿರ್ಲಾ, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಸಭೆಯ ಸಭಾನಾಯಕರೂ ಆಗಿರುವ ಸಚಿವ ಪಿಯೂಷ್ ಗೋಯಲ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷವಾದ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್‍ನ ಅೀರ್ ರಂಜನ್ ಚೌದರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣ್ಯರು ಮಾತನಾಡಿ ಸಂಸತ್ ಭವನದೊಂದಿಗಿನ ನೆನಪು ಮತ್ತು ಐತಿಹ್ಯಗಳನ್ನು ಹಂಚಿಕೊಂಡರು. ಸಂಸದೆ ಮೇನಕಾ ಗಾಂಧಿ ಅವರಿಗೆ ಕಾರ್ಯಕ್ರಮದಲ್ಲಿ ಮಾತನಾಡಲು ಅವಕಾಶ ನೀಡಲಾಗಿತ್ತು.

ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷರಾದ ಜಗದೀಪ್ ಧನಕರ್, ಈ ಮಹತ್ವದ ಸಂದರ್ಭದಲ್ಲಿ, ನಮ್ಮ ಸಂಸದೀಯ ಪ್ರಜಾಪ್ರಭುತ್ವಕ್ಕೆ ಹೊಸ ಅಧ್ಯಾಯವನ್ನು ಸೇರಿಸುವ ಹೊಸ್ತಿಲಲ್ಲಿ ನಾವು ನಿಂತಿರುವಾಗ, ನಮ್ಮ ಅಸಾಧಾರಣ ಬೆಳವಣಿಗೆಗೆ ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ನಾವು ವಿದಾಯ ಹೇಳುವಾಗ ಈ ಇತಿಹಾಸವನ್ನು ವೀಕ್ಷಿಸುವ ಸೌಭಾಗ್ಯ ನಾವೆಲ್ಲರೂ ಹೊಂದಿದ್ದೇವೆ. ಈ ಹಳೆಯ ಸಂಸತ್ತಿನ ಕಟ್ಟಡಕ್ಕೆ ಮತ್ತು ಹೊಸದಕ್ಕೆ ಸಮ್ಮಿಳನದಿಂದ ಸಂಘಟಿತವಾದ ಜಿ.20 ಭಾರತದ ಜಾಗತಿಕ ಶಕ್ತಿಯ ಪ್ರದರ್ಶನಕ್ಕೆ ಕಾರಣವಾಯಿತು. ಸಂಸತ್ತಿನ ಹೊಸ ಕಟ್ಟಡ, ಭಾರತ್ ಮಂಟಪಂ ಮತ್ತು ಯಶೋಭೂಮಿ ಇತ್ತೀಚಿನ ಮೂಲಭೂತ ಸೌಕರ್ಯಗಳ ಮೇರುಕೃತಿಗಳಾಗಿವೆ ಎಂದರು.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಹೊಸ ಆಶಯಗಳೊಂದಿಗೆ ಹೊಸ ಸಂಸದ್ ಭವನಕ್ಕೆ ಹೋಗುತ್ತಿದ್ದೇವೆ. ಜನರು ನಮ್ಮಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. ಆ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳಿಗೆ ತಕ್ಕಂತೆ ಬದುಕುವ ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ ಎಂದರು.

ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಇಂದಿನಿಂದ ನಮ್ಮ ಸಂಸತ್ತಿನ ಎರಡು ಸದನಗಳ ಕಲಾಪಗಳು ಹೊಸ ಸಂಸತ್ತಿನ ಕಟ್ಟಡದಲ್ಲಿ ಮುಂದುವರೆಯಲಿದೆ. ಹಳೆಯ ಕಟ್ಟಡದಲ್ಲಿ 1952ರ ಮೇ 13ರಿಂದ ಕಾರ್ಯಕಲಾಪಗಳು ನಡೆದಿದ್ದವು ಎಂದರು. ಈ ಸೆಂಟ್ರಲ್ ಹಾಲ್ ಬ್ರಿಟನ್‍ನಿಂದ ಭಾರತಕ್ಕೆ ಅಧಿಕಾರ ಹಸ್ತಾಂತರಕ್ಕೆ ಸಾಕ್ಷಿಯಾಗಿತ್ತು. ಪ್ರಧಾನಿ ಅವರ ಆಶಯದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕೆ ದಾರಿ ಮಾಡಿಕೊಡುವ ಹೊಸ ಮತ್ತು ಉದಯೋನ್ಮುಖ ಭಾರತದ ಸಂಕೇತವಾಗಿರುವ ಹೊಸ ಕಟ್ಟಡದಿಂದ ಇನ್ನು ಮುಂದೆ ಸಂಸತ್ತಿನ ಉಭಯ ಸದನಗಳ ಕಾರ್ಯಗಳ ಬಗ್ಗೆ ನನಗೆ ತುಂಬಾ ಸಂತೋಷ ಮತ್ತು ಉತ್ಸಾಹವಿದೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು. ಲೋಕಸಭೆಯ ಕಾಂಗ್ರೆಸ್ ನಾಯಕ ಅೀಧಿರ್ ರಂಜನ್ ಚೌಧರಿ ಮಾತನಾಡಿ, ನಿರುದ್ಯೋಗ ಹೆಚ್ಚಳ ಜನಸಂಖ್ಯೆ ಏರಿಕೆ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಳ್ಳಲು ಅಡಚಣೆಯಾಗಿದೆ. ಭಾರತದ ಯುವ ಜನಸಂಖ್ಯೆಯು ದೇಶದ ಆರ್ಥಿಕ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಲು ಅತ್ಯಗತ್ಯ.

ಭಾರತವು ವಿಶ್ವದ ಅತ್ಯುನ್ನತ ಆರ್ಥಿಕತೆಯ ಹೊರತಾಗಿಯೂ, ನಮ್ಮ ತಲಾವಾರು ಆದಾಯದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಬಹಳ ಹಿಂದೆ ಬಿದ್ದಿವೆ. ಈ ಆರ್ಥಿಕ ಬೆಳವಣಿಗೆಯ ಸವಾಲನ್ನು ನಿಭಾಯಿಸಲು ಬೆಳವಣಿಗೆಯ ಪರವಾದ ಸರ್ಕಾರದ ನೀತಿಗಳು, ಕಡಿಮೆ ಹಣದುಬ್ಬರ, ಬಡ್ಡಿದರಗಳನ್ನು ಕಡಿಮೆ ಮಾಡುವುದು, ನಿರುದ್ಯೋಗವನ್ನು ನಿವಾರಿಸುವುದು, ನುರಿತ ಉದ್ಯೋಗಿಗಳನ್ನು ಪೋಷಿಸುವುದು, ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವುದು, ಬೇಡಿಕೆಯನ್ನು ಉತ್ತೇಜಿಸುವುದು ಮತ್ತು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಸುಧಾರಿಸುವುದು ಅಗತ್ಯವಿದೆ ಎಂದರು.

ಮಹಿಳಾ ಮೀಸಲಾತಿ ವಿಧೇಯಕಯನ್ನು ಸ್ವಾಗತಿಸಿದ ಮಾಜಿ ಪ್ರಧಾನಿ ದೇವೇಗೌಡರು

ಬಿಜೆಪಿ ಸಂಸದೆ ಮೇನಕಾ ಗಾಂಧಿ ಇಂದು ಐತಿಹಾಸಿಕ ದಿನವಾಗಿದೆ ಮತ್ತು ಈ ಐತಿಹಾಸಿಕ ಕ್ಷಣದ ಭಾಗವಾಗಿರಲು ನಾನು ಹೆಮ್ಮೆಪಡುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು. ನಾವು ಹೊಸ ಕಟ್ಟಡಕ್ಕೆ ಹೋಗುತ್ತಿದ್ದೇವೆ ಮತ್ತು ಈ ಭವ್ಯ ಸೌಧವು ಹೊಸ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಭಾವಿಸುತ್ತೇವೆ. ಭಾರತ್ ಲೋಕಸಭೆಯಲ್ಲಿ ಅತ್ಯಂತ ಹಿರಿಯ ಸಂಸದೆಯಾಗಿ ಈ ಗೌರವಾನ್ವಿತ ಸಭೆಯನ್ನು ಉದ್ದೇಶಿಸಿ ಮಾತನಾಡುವ ಜವಾಬ್ದಾರಿಯನ್ನು ನನಗೆ ವಹಿಸಲಾಗಿದೆ. ನಾನು ನನ್ನ ಹೆಚ್ಚಿನ ವಯಸ್ಕ ಜೀವನವನ್ನು ಈ ಸಂಸತ್ ಭವನದಲ್ಲಿ ಕಳೆದಿದ್ದೇನೆ.

7 ಪ್ರಧಾನ ಮಂತ್ರಿಗಳನ್ನು ನೋಡಿದ್ದೇನೆ. ಭವ್ಯ ಇತಿಹಾಸ ಕಂಡಿದ್ದೇನೆ. ನಾನು ಸ್ವತಂತ್ರ ಸದಸ್ಯಳಾಗಿ ಹಲವಾರು ಅವಗಳಿಗೆ ಆಯ್ಕೆಯಾಗಿ ಕೆಲಸ ಮಾಡಿದ್ದೇನೆ. ಅಂತಿಮವಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರಿಕೊಂಡೆ. ಅಂದಿನಿಂದ ಬಿಜೆಪಿಯ ಹೆಮ್ಮೆಯ ಸದಸ್ಯನಾಗಿ ಉಳಿದಿದ್ದೇನೆ. ನಾನು ಪ್ರತಿ ನಿಮಿಷವನ್ನು ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದ್ದೇನೆ ಎಂದಿದ್ದಾರೆ.

- Advertisement -
RELATED ARTICLES
- Advertisment -

Most Popular