ಹಿಂದೂ ಯುವಕ ಹರ್ಷ ಹತ್ಯೆ ಕುರಿತು ಜೆಡಿಎಸ್ ಪ್ರತಿಕ್ರಿಯೆ

Social Share

ಬೆಂಗಳೂರು,ಫೆ.21- ಶಿವಮೊಗ್ಗದಲ್ಲಿ ಯುವಕನ ಹತ್ಯೆ ಪ್ರಕರಣವನ್ನು ಬೇಧಿಸಿ ಸರ್ಕಾರ ಮೃತನ ಕುಟುಂಬದವರಿಗೆ ನ್ಯಾಯ ಒದಗಿಸಬೇಕೆಂದು ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಒತ್ತಾಯಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಹಗಲು ಹೊತ್ತಿನಲ್ಲೇ ಕೊಲೆ, ದರೋಡೆಗಳು ನಡೆಯುತ್ತಿದೆ. ಸರ್ಕಾರ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಅರಗ ಜ್ಞಾನೇಂದ್ರ, ಈಶ್ವರಪ್ಪ ಅವರು ಅದೇ ಜಿಲ್ಲೆಯವರು. ಆದರೂ ಇಂತಹ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿವೆ ಎಂದು ಆರೋಪಿಸಿದರು.
ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಮಾತನಾಡಿ, ಅಮಾಯಕ ಯುವಕನ ಹತ್ಯೆಯಾಗಿದೆ. ಆರೋಪಿಗಳನ್ನು 24 ಗಂಟೆಯಲ್ಲಿ ಪತ್ತೆಹಚ್ಚಬೇಕು. ಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು. ಈ ಘಟನೆ ಬಗ್ಗೆ ನಮ್ಮ ಪಕ್ಷದ್ದು ಸಾಂತ್ವಾನವಿದೆ. ರಾಜ್ಯದಲ್ಲಿ ಬೇರೆ ಬೇರೆ ಸಮಸ್ಯೆಗಳು ಎದುರಾಗಿದ್ದು, ಈ ಘಟನೆ ಕೂಡ ರಾಜಕೀಯ ತಿರುವು ಪಡೆಯಬಾರದು ಎಂದು ಹೇಳಿದರು.

Articles You Might Like

Share This Article