ಬೆಂಗಳೂರು,ಡಿ.22- ಕ್ರಿಸ್ ಮಸ್ ಹಾಗೂ ಹೊಸ ವರ್ಷದ ಆರಂಭಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಮಾಮೂಲಿ ಬಸ್ ದರ ವಿಮಾನ ಪ್ರಯಾಣ ದರದಷ್ಟೂ ದುಬಾರಿಯಾಗುತ್ತಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಸಾಲು ಸಾಲು ರಜೆ ಸಿಗುತ್ತಿರುವುದು ಹಾಗೂ ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಹೊಸ ವರ್ಷಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗದ ಜನ ಈ ಬಾರಿ ಜನ ವಿವಿಧ ಪ್ರದೇಶಗಳಿಗೆ ತೆರಳಿ ಹೊಸ ವರ್ಷ ಆಚರಿಸಲು ಸಿದ್ದರಾಗುತ್ತಿದ್ದಂತೆ ಬಸ್ ದರಗಳು ದಿಢೀರನೆ ಏರಿಕೆಯಾಗಿದೆ.
ಸಾಮಾನ್ಯ ದಿನಗಳಲ್ಲಿ ಇದ್ದ ಬಸ್ ದರಗಳು ದಿಢೀರನ್ ಮೂರರಿಂದ ನಾಲ್ಕು ಪಟ್ಟು ಹೆಚ್ಚಳವಾಗಿರುವುದು ಕಂಡು ಬರುತ್ತಿದೆ. ಹೇಗೂ ಶಾಲೆಗಳಿಗೂ ರಜೆ ಇದೆ ಈ ಬಾರಿ ಪ್ರಕೃತಿ ಮಡಿಲಲ್ಲಿ ಹೊಸ ವರ್ಷ ಆಚರಣೆ ಮಾಡೋಣ ಎಂದು ಬಸ್ ಟಿಕೆಟ್ ಬುಕ್ ಮಾಡಲು ಹೋದ ಗ್ರಾಹಕರು ಬಸ್ ದರ ಕಂಡು ಬೆಚ್ಚಿ ಬಿದ್ದಿದ್ದಾರೆ.
ವಂದೇ ಭಾರತ್, ಶತಾಬ್ದಿ ಸೂಪರ್ಫಾಸ್ಟ್ ರೈಲುಗಳು ವೇಳಾಪಟ್ಟಿ ಬದಲಾವಣೆಗೆ ಪರಿಶೀಲಿಸಿ ಕ್ರಮ : ಸಚಿವ
ಜನರ ಹೊಸ ವರ್ಷದ ಉತ್ಸಾಹ ಕಂಡು ಕೊಂಡಿರುವ ಖಾಸಗಿ ಬಸ್ ಏಜೆನ್ಸಿಗಳು ಮನಸ್ಸೋಇಚ್ಚೆ ದರ ಹೆಚ್ಚಳ ಮಾಡಿಕೊಂಡಿರುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಬಸ್ಗಳಲ್ಲಿ ಬೆಂಗಳೂರು ಟು ಎರ್ನಾಕುಲ – 7000
ಬೆಂಗಳೂರು ಟು ಗೋವಾ – 7000
ಬೆಂಗಳೂರು ಟು ಮಂಗಳೂರು- 3.500
ಬೆಂಗಳೂರು ಟು ಮೈಸೂರು – 1650 ರೂ ದರ ನಿಗದಿ ಪಡಿಸಲಾಗಿದೆ.
#HolidayTravel, #PrivateBus, #BusFares, #expensive,