ಬೆಂಗಳೂರು,ಫೆ.10- ನಾವು ಪೊಲೀಸರು, ನಿನ್ನ ಬ್ಯಾಗ್ ಚೆಕ್ ಮಾಡಬೇಕೆಂದು ಹೇಳಿ ಚಿನ್ನದ ವ್ಯಾಪಾರಿಯ ಬಳಿ ಕೆಲಸ ಮಾಡುವ ವೃದ್ಧರೊಬ್ಬರನ್ನು ಕಾರಿನಲ್ಲಿ ಕರೆದೊಯ್ದು ಹೆದರಿಸಿ 6 ಲಕ್ಷ ಹಣ ಹಾಗೂ 3 ಲಕ್ಷ ಬೆಲೆಯ ಚಿನ್ನದ ಗಟ್ಟಿ ಸುಲಿಗೆ ಮಾಡಿದ್ದ ಹೋಮ್‍ಗಾರ್ಡ್ ಹಾಗೂ ಇಬ್ಬರು ಆಟೋ ಚಾಲಕರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಟೋ ಚಾಲಕರಾದ ಬಾಪೂಜಿನಗರದ ಮಾರುತಿನಗರ 3ನೇ ಮುಖ್ಯರಸ್ತೆ ನಿವಾಸಿ ಮಂಜುನಾಥ್ (39), ಶ್ರೀ ನಗರದ ಕಾಳಿದಾಸ ಸರ್ಕಲ್ ಸಮೀಪದ ನಿವಾಸಿ ಅರುಣ್ ಕುಮಾರ್ (33) ಮತ್ತು ಕೆಎಸ್‍ಆರ್‍ಟಿಸಿಯಲ್ಲಿ ಹೋಮ್‍ಗಾರ್ಡ್ ಆಗಿರುವ ಗಿರಿನಗರದ ಕಸ್ತೂರಿ ಬಾ ಕಾಲೋನಿ, ಈರಣ್ಣ ಗುಡ್ಡೆ ನಿವಾಸಿ ನಾಗರಾಜ (31) ಬಂಧಿತ ಸುಲಿಗೆಕೋರರು.
ಆರೋಪಿಗಳಿಂದ 6 ಲಕ್ಷ ಹಣ ಹಾಗೂ 1 ಚಿನ್ನದ ಗಟ್ಟಿ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಬಜಾಜ್ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಂದರಂ ಅವರು ಕೊಯಮತ್ತೂರಿನಲ್ಲಿ ಜ್ಯುವೆಲರಿ ಶಾಪ್ ಇಟ್ಟುಕೊಂಡಿರುವ ಚಿನ್ನದ ವ್ಯಾಪಾರಿಯೊಬ್ಬರ ಬಳಿ ಕೆಲಸ ಮಾಡಿಕೊಂಡಿದ್ದಾರೆ.
ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್ ಕುರ್ಚಿಗಳು ಖಾಲಿ ಖಾಲಿ
ಶಿವಮೊಗ್ಗಕ್ಕೆ ಚಿನ್ನದ ಆಭರಣಗಳನ್ನು ತೆಗೆದುಕೊಂಡು ಹೋಗಿ ವ್ಯಾಪಾರಿಗೆ ಆಭರಣಗಳನ್ನು ಕೊಟ್ಟು ಹಣ ಹಾಗೂ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಬೆಂಗಳೂರಿಗೆ ಬಂದಿದ್ದಾರೆ. ಫೆ.7ರಂದು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಕೊಯಮತ್ತೂರಿಗೆ ಹೋಗಲು ಸುಂದರಂ ಅವರು ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದು ಬಸ್‍ನಲ್ಲಿ ಕುಳಿತಿದ್ದರು.
ಆ ವೇಳೆ ಕಪ್ಪು ಬಣ್ಣದ ಜಾಕೇಟ್ ಧರಿಸಿದ್ದ ಇಬ್ಬರು ಸುಲಿಗೆಕೋರರ ಪೈಕಿ ಒಬ್ಬ ಖಾಕಿ ಪ್ಯಾಂಟ್ ಧರಿಸಿಕೊಂಡಿದ್ದು, ಸುಂದರಂ ಬಳಿ ಬಂದು ನಾವು ಪೊಲೀಸರು, ನಿನ್ನ ಬ್ಯಾಗ್ ಚೆಕ್ ಮಾಡಬೇಕು ಎಂದು ಹೇಳಿ ಬಸ್‍ನಿಂದ ಕೆಳಗಿಳಿಸಿ ಸ್ವಲ್ಪ ದೂರ ಕರೆದುಕೊಂಡು ಹೋಗಿ ನಂತರ ಬಿಳಿ ಬಣ್ಣದ ಕಾರಿನಲ್ಲಿ ಬಂದ ಮತ್ತೊಬ್ಬ ಸೇರಿ ಒಟ್ಟು ಮೂವರು ಕಾರಿನಲ್ಲಿ ಕರೆದೊಯ್ದಿದ್ದಾರೆ.
ಉಸ್ತುವಾರಿಗಳ ನೇಮಕ ಕಾರ್ಯಾರಂಭಕ್ಕೆ ಬಿಜೆಪಿ ಸೂಚನೆ
ಸ್ವಲ್ಪ ದೂರ ಹೋಗುತ್ತಿದ್ದಂತೆ ಸುಂದರಂ ಅವರನ್ನು ಹೆದರಿಸಿ ಬ್ಯಾಗ್‍ನಲ್ಲಿದ್ದ 6 ಲಕ್ಷ ರೂ. ಹಣ ಹಾಗೂ ಶರ್ಟ್ ಒಳಗೆ ಇಟ್ಟಿದ್ದ ಸುಮಾರು 3 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಬಿಸ್ಕೆಟ್ ಕಿತ್ತುಕೊಂಡಿದ್ದಾರೆ. ನಂತರ ಸುಂದರಂ ಅವರನ್ನು ಕಾರಿನಿಂದ ಕೆಳಗಿಸಿ ಸುಲಿಗೆಕೋರರು ಪರಾರಿಯಾಗಿದ್ದಾರೆ. ಈ ಬಗ್ಗೆ ಸುಂದರಂ ಅವರು ಬ್ಯಾಟರಾಜಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಬಸ್ ನಿಲ್ದಾಣದ ಅಕ್ಕಪಕ್ಕದ ಸಿಸಿ ಟಿವಿಗಳನ್ನು ಪರಿಶೀಲಿಸಿ ಸುಲಿಗೆಕೋರರ ಬಗ್ಗೆ ಮಾಹಿತಿ ಕಲೆಹಾಕಿ ಒಬ್ಬ ಹೋಮ್‍ಗಾರ್ಡ್ ಮತ್ತು ಇಬ್ಬರು ಆಟೋ ಚಾಲಕರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಸುಲಿಗೆಕೋರರನ್ನು ತೀವ್ರ ವಿಚಾರಣೆಗೊಳಪಡಿಸಿ ಸುಂದರಂ ಅವರಿಂದ ಸುಲಿಗೆ ಮಾಡಿದ್ದ 6 ಲಕ್ಷ ಹಣ ಹಾಗೂ ಒಂದು ಚಿನ್ನದ ಗಟ್ಟಿ ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಂಗಲ್ ಹನುಮಂತಯ್ಯ ಪ್ರತಿಮೆ ನಿರ್ಮಾಣ
ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರ್ಗಿ ಅವರ ಮಾರ್ಗದರ್ಶನದಲ್ಲಿ ಕೆಂಗೇರಿಗೇಟ್ ಉಪವಿಭಾಗದ ಎಸಿಪಿ ಭರತ್‍ರೆಡ್ಡಿ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ನಿಂಗನಗೌಡ ಎ ಪಾಟೀಲ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.
home guard, two auto, drivers, Arrest,