ಬಾಗ್ಪತ್ (ಯುಪಿ), ಮಾ 3 – ಯುವಕನೊಂದಿಗೆ ಮಾತನಾಡಿದ್ದಕ್ಕಾಗಿ ತನ್ನ 16 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದ ಕ್ರೂರ ತಂದೆ ದೇಹವನ್ನು ಸೇತುವೆಯಿಂದ ನದಿಗೆ ಎಸೆದ ಘಟನೆ ಇಲ್ಲಿನ ಪಂಚಿ ಗ್ರಾಮದಲ್ಲಿ ನಡೆದಿದೆ.
ಗೃಹರಕ್ಷಕ (ಹೋಮ್ ಗಾರ್ಡ್) ವೃತ್ತಿಯಲ್ಲಿದ್ದ ಖೇಕ್ರಾ ಪ್ರೀತಾ ಸಿಂಗ್ ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಫೆ. 23 ರಂದು ತನ್ನ ಮಗಳು ಯುವಕನೊಂದಿಗೆ ಸಲುಗೆಯಿಂದ ಮಾತನಾಡುವುದನ್ನು ನೋಡಿದ ಆತ ಆಕೆ ಮನೆಗೆ ಬರುತ್ತಿದ್ದಂತೆ ಆಕೆಯನ್ನು ದಳಿಸಿದ್ದಾನೆ ನಂತರ ಕತ್ತುಹಿಸಿಕಿ ಕೊಂದಿದ್ದಾನೆ.
ನಂತರ ತನ್ನ ಸಹೋದರನಿಗೆ ಘಟನೆ ಬಗ್ಗೆ ತಿಳಿಸಿಆತನ ಸಹಾಯದಿಂದ ಮಗಳ ಶವವನ್ನು ಹೊತ್ತು ಮುಕರಿ ಗ್ರಾಮದ ಹಿಂದೋನ್ ನದಿಗೆ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ-ಮಕ್ಕಳ ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಸ್ಥಿತಿ ಗಂಭೀರ
ಇದರ ಬಗ್ಗೆ ಯಾರಿಗೂ ತಿಳಿಸದೆ ಮನೆಗೆ ತೆರಳಿ ಮೌನವಾಗಿದ್ದು ಕುಟುಂಬದವರು ಅನುಮಾನಪಟ್ಟಿದ್ದಾರೆ ಗಾಮದ ವ್ಯಕ್ತಿಯೊಬ್ಬ ಕೊಲೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ದುರಂತ ಬೆಳಕಿಗೆ ಬಂದಿದೆ.
Home guard, arrested, murdering, minor, daughter,