ನೈಟ್ ಕಫ್ರ್ಯೂ ಮುಂದುವರೆಯಲಿದೆ, ಶಾಲಾ -ಕಾಲೇಜು ಬಂದ್ ಅಗತ್ಯ: ಗೃಹ ಸಚಿವ

Social Share

ಚಿಕ್ಕಮಗಳೂರು,ಜ.3-ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾತ್ರಿ ಕಫ್ರ್ಯೂವನ್ನು ಮುಂದುವರೆ ಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾತ್ರಿ ಕಫ್ರ್ಯೂವನ್ನು ಜಾರಿಗೊಳಿಸಲಾಗುತ್ತಿದೆ.
ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದರಿಂದ ಮತ್ತಷ್ಟು ದಿನ ರಾತ್ರಿ ಕಫ್ರ್ಯೂ ಮುಂದುವರೆಯಲಿದೆ. ಸರ್ಕಾರದ ಜತೆ ಸಾರ್ವಜನಿಕರು ಕೈ ಜೋಡಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ ಲಾಕ್‍ಡೌನ್ ಅನಿವಾರ್ಯವಾಗಬಹುದು ಎಂದರು.
ಸದ್ಯಕ್ಕೆ ಲಾಕ್‍ಡೌನ್ ಮಾಡುವ ಉದ್ದೇಶ ಇಲ್ಲ. ಅನಿವಾರ್ಯವಾದರೆ ಮಾಡಬೇಕಾಗಬಹುದು. ಜನರ ಜೀವ ಉಳಿಸಲು ಆರ್ಥಿಕಾಭಿವೃದ್ಧಿ ಮತ್ತು ಶಾಲಾ -ಕಾಲೇಜು ಬಂದ್ ಮಾಡಬೇಕಾಗಬಹುದು. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಯಾವುದೇ ಕಾರಣಕ್ಕೂ ಕೋವಿಡ್ ನಿಯಮಗಳನ್ನು ಮುರಿಯದೆ ಸ್ವಯಂ ಅನುಸರಿಸಬೇಕು ಎಂದು ಹೇಳಿದರು.
ಸಾರ್ವಜನಿಕರ ಸಹಕಾರ ಸೂಕ್ತ ರೀತಿಯಲ್ಲಿ ದೊರೆಯದಿದ್ದರೆ ಲಾಕ್‍ಡೌನ್ ಅನಿವಾರ್ಯವಾಗಬಹುದು. ಈಗಾಗಲೇ ಮಾಸ್ಕ್ ಧರಿಸದೆ ಓಡಾಟ ಮಾಡುವುದು ಕಂಡು ಬರುತ್ತಿದೆ. ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಸಾವಿರಾರು ಜನ ಸೇರುತ್ತಿದ್ದಾರೆ. ಇದು ಸೋಂಕು ಹರಡಲು ಎಡೆಮಾಡಿಕೊಡಬಹುದು. ಈಗಾಗಲೇ ಕೋವಿಡ್ 2ನೇ ಅಲೆಯಲ್ಲಿ ಉಂಟಾದ ಸಾವು-ನೋವುಗಳು ನಮ್ಮ ನೆನಪಿನಲ್ಲಿವೆ. ಅದಕ್ಕೆ ಅವಕಾಶ ಕೊಡದಂತೆ ತಡೆಯುವ ಪ್ರಯತ್ನವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶೇ.97ರಷ್ಟು ಮೊದಲ ಹಾಗೂ ಶೇ.81ರಷ್ಟು ಎರಡನೇ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಇದಕ್ಕಾಗಿ ಅಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ತಿಳಿಸಿದರು.

Articles You Might Like

Share This Article