ಹಿಜಾಬ್ ಗಲಾಟೆ ಹಿಂದಿರುವ ಮತಾಂಧ ಶಕ್ತಿಗಳನ್ನು ಸುಮ್ಮನೆ ಬಿಡಲ್ಲ : ಗೃಹ ಸಚಿವ ಜ್ಞಾನೇಂದ್ರ

Social Share

ಕಲಬುರಗಿ,ಫೆ.19- ಹಿಜಾಬ್ ಗಲಭೆ ಹಿಂದೆ ಕಾಣದ ಮತಾಂಧ ಶಕ್ತಿಗಳ ಕೈವಾಡವಿದೆ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವರನ್ನು
ಸುಮ್ಮನೆ ಬಿಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಖಡಕ್ ಸಂದೇಶ ರವಾನಿಸಿದ್ದಾರೆ. ಕಲಬುರಗಿ ನಗರದ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಪಿಎಸ್‍ಐ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳ ನಿರ್ಗಮನ ಪಂಥಸಂಚಲನ ಪರಿವೀಕ್ಷಣೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಂವಿಧಾನ, ಕೋರ್ಟ್ ನಗಣ್ಯ ಎಂದವರನ್ನು ಸುಮ್ಮನೆ ಬೀಡೋದಿಲ್ಲ. ಎಲ್ಲಾ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಇಲ್ಲ. ಕೆಲ ಬೆರಳಣಿಕೆಯಷ್ಟು ಶಾಲೆಗಳಲ್ಲಿ ಮಾತ್ರ ವಿವಾದ ಎದ್ದಿದೆ. ಹಾಗಾಗಿ, ಅವರಿಗೆ ಎಚ್ಚರಿಕೆ ಕೋಡುವಂತಹ ಕೆಲಸಗಳು ಆಗುತ್ತಿದೆ ಎಂದು ಹೇಳಿದರು.
ಕಾಲೇಜುಗಳ ಸುತ್ತಲು 144 ಜಾರಿ ಮಾಡಲಾಗಿದೆ. ಅದನ್ನು ಮೀರಿ ಗೊಂದಲ ಮಾಡಿದವರನ್ನು ಬಂಧನಕ್ಕೊಳಪಡುತ್ತಾರೆ. ಈಗಾಗಲೇ ಕೆಲವರ ಮೇಲೆ ಎಫ್‍ಐಆರ್ ದಾಖಲಾಗಿದೆ. ಅತಿರೇಕಕ್ಕೆ ಹೋದಾಗ ಸುಮ್ಮನೆ ಇರೋದಕ್ಕೆ ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಹಿಜÁಬ್ ಸಂಬಂಧ ಅಲ್ಪ ಸಂಖ್ಯಾತ ಶಾಸಕ,ರು ಗೃಹ ಸಚಿವರಿಗೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ನಿನ್ನೆ ಸ್ವಲ್ಪ ಜನ ಅಲ್ಪಸಂಖ್ಯಾತ ಶಾಸಕರು ಭೇಟಿ ಮಾಡಿ ಮನವಿ ಕೊಟ್ಟಿದ್ದಾರೆ.ನಾನು ಅವರಿಗೆ ಏನು ಹೇಳಬೇಕು ಹೇಳಿದ್ದೀನಿ, ನಾನು – ನೀವು ಎಲ್ಲರೂ ಸೇರಿ ಈ ಸ್ಥಿತಿಯಿಂದ ಹೊರ ತರಬೇಕು ಎಂದರು.
ಶಾಲೆ ಅಂದ್ರೆ ಅಲ್ಲಿ ಸಮಾನತೆ ಕಾಣಬೇಕು ಅಂತಾ ಹೇಳಿದ್ದೇನೆ. ಭವಿಷ್ಯದ ಭಾರತದ ಬಗ್ಗೆ ಯೋಚನೆ ಮಾಡಿದರೆ ಭಯವಾಗುತ್ತದೆ. ಕೋರ್ಟ್, ಕಾಯ್ದೆ, ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು. ಅದರ ವಿರುದ್ಧ ಹೋಗುವವರನ್ನು ಖಂಡಿಸಬೇಕು ಎಂದು ಹೇಳಿದರು. ಹಿಜಾಬ್ ವಿವಾದ ಕುರಿತ ತನಿಖೆ ನಿಟ್ಟಿನಲ್ಲಿ ಕೆಲ ಅಲ್ಪಸಂಖ್ಯಾತ ಶಾಸಕರು ನನ್ನನ್ನು ಭೇಟಿ ಮಾಡಿ ಮನವಿ ನೀಡಿದ್ದಾರೆ. ಈ ಸ್ಥಿತಿಯಿಂದ ನಮ್ಮ ಮಕ್ಕಳನ್ನು ಹೊರತರಬೇಕಿದೆ. ಸಮವಸ್ತ್ರ ಅಂದರೆ ಅದು ಸಮಾನತೆ, ಶಾಲೆಗಳು ಅಂದರೆ ಸಂಸ್ಕಾರ ತುಂಬುವ ಕೇಂದ್ರಗಳು. ಹೀಗಾಗಿ ನಮ್ಮ ಧರ್ಮ, ಜಾÁತಿ ಬೇರೆ -ಬೇರೆ ಎಂಬ ತಾರತಮ್ಯ ಇರಬಾರದು ಎಂದರು.
ವಿವಾದ ಹೆಚ್ಚಾದ ಕಾಲೇಜುಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅದನ್ನು ಮೀರಿ ಶಾಂತಿ ಭಂಗ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅತಿರೇಕಕ್ಕೆ ಹೋದರೆ ಸುಮ್ಮನಿರಲು ಆಗಲ್ಲ. ಮಕ್ಕಳ ಮನಸ್ಸಿನಲ್ಲಿ ಮತಾಂಧ ವಿಷ ಬೀಜ ಬಿತ್ತುವವರವರನ್ನು ಹಾಗೆ ಬಿಡಲ್ಲ ಎಂದು ಎಚ್ಚರಿಸಿದರು.
ಹಿಜಾಬ್ ವಿವಾದಕ್ಕೆ ಅಂತ್ಯ ಹಾಡಲು ಸರ್ಕಾರ ಎಲ್ಲ ರೀತಿಯ ಕ್ರಮ ವಹಿಸುತ್ತಿದೆ. ಇದಕ್ಕಾಗಿ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಪಾಲಿಸುತ್ತಿದ್ದೇವೆ. ಅಂತಿಮ ತೀರ್ಪಿಗಾಗಿ ಕಾಯುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು. ಪಿಎಫ್‍ಐನಂತಹ ಸಂಘಟನೆಗಳ ನಿಷೇಧ ವಿಚಾರ ಕುರಿತಾಗಿ ಪ್ರಕ್ರಿಯಿಸಿದ ಗೃಹ ಸಚಿವರು, ಇಂತಹ ಸಂಘಟನೆಗಳನ್ನು ನಿರ್ಜೀವ ಮಾಡಲು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದರು.
ಕಾಂಗ್ರೆಸ್‍ಗೆ ಹುಲ್ಲು ಕಡ್ಡಿ ಆಸರೆ: ಕಾಂಗ್ರೆಸ್ ಮುಳುಗುವ ಪಕ್ಷ. ಹೀಗಾಗಿ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚಿಸುವುದು ಮರೆತು ಈಶ್ವರಪ್ಪನವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಹುಲ್ಲು ಕಡ್ಡಿ ಆಸರೆ ಪಡೆಯಲು ಪ್ರಯತ್ನಿಸುತ್ತಿದೆ. ಈಶ್ವರಪ್ಪನವರು ಎಲ್ಲೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಹೇಳಿಕೆ ಕೊಟ್ಟಿಲ್ಲ. ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆ ಬರೀ ಬೋಗಸ್ ಎಂದು ಜ್ಞಾನೇಂದ್ರ ಟೀಕಿಸಿದರು.
ರಾಷ್ಟ್ರಧ್ವಜ ವಿರೋಯಾಗಿ ಈಶ್ವರಪ್ಪ ಮಾತನಾಡಿಲ್ಲ. ಇನ್ನೂರು ಮೂನ್ನೂರು ವರ್ಷದ ನಂತರ ಕೇಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸಬಹುದು ಅಂತಾ ಈಶ್ವರಪ್ಪ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.

Articles You Might Like

Share This Article