ಬಿಟ್ ಕಾಯಿನ್ ಹಗರಣ ಗಾಳಿಯಲ್ಲಿ ಗಂಟು ಇದ್ದಂತೆ : ಅರಗ ಜ್ಞಾನೇಂದ್ರ

Social Share

ಬೆಂಗಳೂರು, ಸೆ.15- ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಿಟ್ ಕಾಯಿನ್ ಹಗರಣ ಗಾಳಿಯಲ್ಲಿ ಗಂಟು ಇದ್ದಂತೆ, ಇದರಲ್ಲಿ ಏನೂ ಇಲ್ಲ. ಹಣ ಕಳೆದುಕೊಂಡವರು ಯಾರು ದೂರು ನೀಡಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟ ಪಡಿಸಿದ್ದಾರೆ.

ವಿಧಾನಪರಿಷತ್‍ನ ಪ್ರಶ್ನೋತ್ತರದ ಅವಧಿಯಲ್ಲಿ ಜೆಡಿಎಸ್ ಸದಸ್ಯ ಟಿ.ಶರವಣ ಕೇಳಿದ ಪ್ರಶ್ನೆಗೆ ಉರಿಸಿದ ಅವರು, ಬಿಟ್ ಕಾಯಿನ್ ವಂಚನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿತ್ತು.

ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಇದಲ್ಲದೆ ವಿವಿಧ ಸಿಇಎನ್ ಠಾಣೆ ಸೇರಿ ಬೆಂಗಳೂರಿನಾದ್ಯಂತ ಒಟ್ಟು 77 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಈ ಪ್ರಕರಣ ಕುರಿತು ಸದನದಲ್ಲಿ ಎರಡು-ಮೂರು ಬಾರಿ ಚರ್ಚೆಯಾಗಿದೆ. ಸರ್ಕಾರ ಮುಕ್ತವಾಗಿದೆ. ಶ್ರೀಕಿ ಬಂಧನದ ಬಳಿಕ ಆತ ಕೆಲವೊಂದು ಕಡೆ ಹ್ಯಾಕ್ ಮಾಡಿರುವುದಾಗಿ ಹೇಳಿದ್ದಾನೆ. ಅಲ್ಲಿ ಏನು ಸಿಕ್ಕಿಲ್ಲ, ಯಾವ ಬಿಟ್ ಕಾಯಿನ್ ಪತ್ತೆಯಾಗಿಲ್ಲ. ಮಾಧ್ಯಮಗಳಲ್ಲಿ ಒಂದು ವಾರಗಟ್ಟಲೆ ಚರ್ಚೆ ನಡೆದಿತ್ತು. ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರ ಎಂದು ಬಿಂಬಿಸಲಾಗಿತ್ತು. ಆದರೆ ಆ ರೀತಿ ಏನು ಇಲ್ಲ ಎಂದರು.

ಅಮೆರಿಕಾದಲ್ಲೂ ಬಿಟ್ ಕಾಯಿನ್ ಹಗರಣ ನಡೆದಿದೆ. ಆರೋಪಿಗಳ ಬಂಧನವಾಗಿದೆ. ಅಲ್ಲಿ ಬಿಟ್ ಕಾಯಿನ್ ಸಿಕ್ಕಿದೆ. ಆದರೆ ಅದರಲ್ಲಿ ರಾಜ್ಯದ ಪ್ರಕರಣಕ್ಕೆ ಸಂಪರ್ಕ ಇರುವ ಬಗ್ಗೆ ಮಾಹಿತಿ ಇಲ್ಲ. ನಮ್ಮ ರಾಜ್ಯದ ಅಧಿಕಾರಿಗಳು ಅಮೆರಿಕಾಕ್ಕೆ ಮೂರು ಬಾರಿ ಪತ್ರ ಬರೆದು ಮಾಹಿತಿ ಕೇಳಿದ್ದೇವೆ. ಆದರೆ ಅಲ್ಲಿಂದ ಯಾವುದೇ ಉತ್ತರ ಬಂದಿಲ್ಲ. ಆದರೂ ನಾವು ಅಲ್ಲಿನ ಆಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದರು.

ಬಿಟ್ ಕಾಯಿನ್ ಕುರಿತು ಯಾರೇ ಸಾಕ್ಷ್ಯ ಪುರಾವೆ ಒದಗಿಸಿದರು ತನಿಖೆ ನಡೆಸಲು ನಮ್ಮ ಸರ್ಕಾರ ಸಿದ್ಧವಿದೆ. ಸಾಕ್ಷ್ಯ ಪುರಾವೆಗಳನ್ನು ನಾವು ಕೊಡುವುದಾದರೆ ಸರ್ಕಾರ ಮತ್ತು ಪೊಲೀಸರು ಯಾಕೆ ಬೇಕು. ಅಮೆರಿಕಾ ಕೊಟ್ಟಿಲ್ಲ ಎಂದು ನೆಪ ಹೇಳಬೇಡಿ. ಇದೊಂದು ಹಣವನ್ನು ದುಪ್ಪಟ್ಟು ಮಾಡಿಕೊಡುವ ದಂಧೆಯಿದ್ದಂತೆ ಯಾರು ದೂರು ನೀಡುವುದಿಲ್ಲ. ದೊಡ್ಡ ದೊಡ್ಡವರು ಭಾಗಿಯಾಗಿದ್ದಾರೆ. ಸಮರ್ಪಕ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಎಂದು ಒತ್ತಾಯಿಸಿದರು.

ಸಚಿವರ ಉತ್ತರ ಸಮರ್ಪಕವಾಗಿಲ್ಲ, ಅರ್ಧ ಗಂಟೆ ಕಾಲ ಚರ್ಚೆಗೆ ಕೊಡಿ ಎಂದು ಶರವಣ ಮನವಿ ಮಾಡಿದರು.
ರವಿಕುಮಾರ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಇತ್ತೀಚಿಗೆ ನಡೆದ ಗಲಭೆ ಹಾಗೂ ಕೊಲೆ ಪ್ರಕರಣಗಳಲ್ಲಿ ಹೊರ ರಾಜ್ಯದವರ್ಯಾರು ಭಾಗಿಯಾಗಿಲ್ಲ. ನಮ್ಮ ಪೊಲೀಸರು ಅಂತ ರಾಜ್ಯಗಳ ಗಡಿಯಲ್ಲಿ ತೀವ್ರ ನಿಗಾ ವಹಿಸಿದ್ದಾರೆ. ಹಿಂದಿನ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಮೇಲೆ ನಿಗಾ ವಹಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಅಂತರ ರಾಜ್ಯ ಸಂಬಂಧಗಳನ್ನು ಪತ್ತೆ ಹಚ್ಚಲಾಗಿದೆ ಎಂದರು.

ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆಯಲ್ಲಿ ಆಸ್ತಿ ಪಾಸ್ತಿ ನಷ್ಟವಾಗಿರುವುದನ್ನು ವಸೂಲಿ ಮಾಡಲು ನ್ಯಾಯಮೂರ್ತಿ ಕೆಂಪಣ್ಣ ಅವರ ನೇತೃತ್ವದಲ್ಲಿ ಕ್ಲೈಮ್ ಕಮಿಷನ್ ರಚಿಸಲಾಗಿದೆ. ಎಫ್ ಐ ಆರ್ ಪ್ರಕಾರ ಐದು ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿರುವ ಅಂದಾಜಿದೆ. ಒಟ್ಟು ನಷ್ಟವನ್ನು ಅಪರಾಗಳ ಆಸ್ತಿ ಜಪ್ತಿ ಮಾಡುವ ಮೂಲಕ ವಸೂಲಿ ಮಾಡಲಾಗುವುದು ಎಂದರು.

Articles You Might Like

Share This Article