ಐಕ್ಯತೆಗೆ ಧಕ್ಕೆ ತರುವ ಶಕ್ತಿಗಳನ್ನು ಸಹಿಸಲ್ಲ : ಆರಗ ಜ್ಞಾನೇಂದ್ರ

ದೇಶದ ಐಕ್ಯತೆ, ಸಮಗ್ರತೆಗೆ ಭಂಗ ತರುವ ಶಕ್ತಿಗಳನ್ನು ಯಾವುದೇ ಕಾರಣಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರ ರಕ್ಷಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
Social Share

ಬೆಂಗಳೂರು,ಅ.20- ದೇಶದ ಐಕ್ಯತೆ, ಸಮಗ್ರತೆಗೆ ಭಂಗ ತರುವ ಶಕ್ತಿಗಳನ್ನು ಯಾವುದೇ ಕಾರಣಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರ ರಕ್ಷಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. ವಿಧಾನಸೌಧದ ಮುಂಭಾಗ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ನೂತನ 90 ಮೀಟರ್ ಏರಿಯಲ್ ಲ್ಯಾಡರ್ ಫ್ಲಾಟ್‍ಫಾರಂ ಅನ್ನು ಲೋಕಾರ್ಪಣೆ ಮಾಡಿದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿಚ್ಛಿದ್ರಕಾರಿ ಶಕ್ತಿಗಳ ಮುಖವಾಡ ಕಳಚಿ ಜೈಲಿಗಟ್ಟುವ ಕೆಲಸವಾಗುತ್ತದೆ. ದೇಶದ ಐಕ್ಯತೆಗೆ ಧಕ್ಕೆ ತರುವ ಶಕ್ತಿಗಳನ್ನು ಮಟ್ಟ ಹಾಕಲಾಗುತ್ತಿದ್ದು, ಯಾರೇ ಅಂತಹ ಕೃತ್ಯವೆಸಗಿದರೂ ಅವರನ್ನು ಬಂಧಿಸುವ ಕೆಲಸವಾಗುತ್ತದೆ ಎಂದರು.

ಪಿಎಫ್‍ಐನಿಂದ ರಾಮಮಂದಿರ ಧ್ವಂಸ ಮಾಡಲು ಸಂಚು ರೂಪಿಸಲಾಗಿತ್ತು ಎಂಬ ಮಾಹಿತಿ ಈಗಷ್ಟೇ ಲಭ್ಯವಾಗಿದೆ. ಹೆಚ್ಚಿನ ಮಾಹಿತಿ ಪಡೆಯಲಾಗುವುದು. ಈಗಾಗಲೇ ಪಿಎಫ್‍ಐನ ಹಲವರ ಬಂಧನವಾಗಿದ್ದು, ತನಿಖೆ ನಡೆಯುತ್ತಿದೆ ಎಂದರು.

ಪೆರೇಶ್ ಮೆಹ್ತಾ ಸಾವಿನ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕೆಂದು ಅವರ ತಂದೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ. ಆ ಬಗ್ಗೆ ಅವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದರು.

ಅಗ್ನಿಶಾಮಕ ಇಲಾಖೆಗೆ ಇಂದು ಸಂಭ್ರಮದ ದಿನ. 30 ಕೋಟಿ ರೂ. ವೆಚ್ಚದಲ್ಲಿ ವಾಹನವನ್ನು ಖರೀದಿಸಲಾಗಿದೆ. ಬೆಂಗಳೂರಿನಲ್ಲಿ ಆಕಾಶದೆತ್ತರದ ಕಟ್ಟಡಗಳು ನಿರ್ಮಾಣವಾಗಿವೆ. ಜನಸಂಖ್ಯೆ ಹೆಚ್ಚಾಗುತ್ತಿದೆ. 30 ಮೀಟರ್ ಎತ್ತರದವರೆಗೂ ಬೆಂಕಿ ಶಮನ ಕೈಗೊಳ್ಳುವ ಈ ವಾಹನ ಅಗ್ನಿಶಾಮಕ ಇಲಾಖೆಗೆ ಬಹಳ ಶಕ್ತಿ ತಂದುಕೊಟ್ಟಿದೆ ಎಂದು ಹೇಳಿದರು.

ಅಧಿಕಾರಿಗಳ ಚಳಿ ಬಿಡಿಸಿದ ಬಿಬಿಎಂಪಿ ಆಯುಕ್ತರು

ಗೃಹ ಇಲಾಖೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿಲ್ಲ. ಆಧುನಿಕ ಯಂತ್ರೋಪಕರಣ, ಶಸ್ತ್ರಾಸ್ತ್ರ ಒದಗಿಸುವ ಮೂಲಕ ಬಲಗೊಳಿಸಲಾಗುತ್ತದೆ. ಎಫ್‍ಎಸ್‍ಎಲ್ ವಿವಿಯನ್ನು ಮಾಡುತ್ತಿದ್ದೇವೆ. ಆದರೆ ಕಾಂಗ್ರೆಸ್ ಸರ್ಕಾರದ ಅವಯಲ್ಲಿ ಗೃಹ ಇಲಾಖೆ ಅಶಕ್ತವಾಗಿತ್ತು. ಹಳೆಯ ವಾಹನಗಳೇ ಇದ್ದವು ಎಂದು ಟೀಕಿಸಿದರು.

AIOSEO Settings

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗಿರುವುದಕ್ಕೆ ಶುಭ ಕೋರುತ್ತೇನೆ. ಆದರೆ, ಕಾಂಗ್ರೆಸ್ ಉತ್ತಮ ಸ್ಥಿತಿಯಲ್ಲಿದ್ದಾಗ ಆ ಸ್ಥಾನ ಕೊಡಬೇಕಿತ್ತು. ಮುಳುಗುವ ಕಾಂಗ್ರೆಸ್ ಹಡಗಿಗೆ ನಾಯಕನನ್ನಾಗಿ ಮಾಡಿದಂತಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Articles You Might Like

Share This Article