ಬೆಂಗಳೂರು, ಸೆ.29- ಪಿಎಫ್‍ಐ ಹಾಗೂ ಅದರ ಅಂಗಸಂಸ್ಥೆಗಳನ್ನು ಐದು ವರ್ಷಗಳವರೆಗೆ ಯುಎಪಿಎ ಕಾಯ್ದೆಯಡಿ ಕೇಂದ್ರ ಸರಕಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಇಲಾಖೆಯ ಹಿರಿಯ ಅಧಿಕಾರಗಳೊಂದಿಗೆ ಸಭೆ ನಡೆಸಿ, ನಿಷೇಧ ನಂತರದ ಪ್ರಕ್ರಿಯೆಗಳ ಅನುಷ್ಠಾನದ ಕುರಿತು ಚರ್ಚೆ ನಡೆಸಿದರು.
ರಾಜ್ಯದ ಪೆÇಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಹಾಗೂ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಒಳಾಡಳಿತ ಇಲಾಖೆ) ರಜನೀಶ್ ಗೋಯಲ್ ಅವರು ಸಭೆಯಲ್ಲಿ ಭಾಗವಹಿಸಿ ಸಚಿವರಿಗೆ ಮಾಹಿತಿ ನೀಡಿದರು. ನಿನ್ನೆಯಷ್ಟೇ ಕೇಂದ್ರ ಸರಕಾರ ಪಿಎಫ್‍ಐ ಹಾಗೂ ಅದರ ಇತರ ಸಹವರ್ತಿ ಸಂಘಟನೆಗಳನ್ನು ನಿಷೇಸಿ ಆದೇಶ ಹೊರಡಿಸಿತ್ತು ಹಾಗೂ ಅನುಷ್ಠಾನದ ಸಂಪೂರ್ಣ ಅಕಾರವನ್ನು ರಾಜ್ಯ ಸರಕಾರಗಳಿಗೆ ನೀಡಿದೆ.
ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಕಚೇರಿಗಳನ್ನು ಸೀಜ್ ಮಾಡುವುದು ಮತ್ತು ಕಾನೂನು ಕ್ರಮ ಕೈಗೊಂಡಿರುವ ಕುರಿತು ಮಾಹಿತಿಯನ್ನು ಗೃಹ ಸಚಿವರು ಪಡೆದುಕೊಂಡರು.
ಕೇಂದ್ರದ ನಿರ್ದೇಶನದಂತೆ ರಾಜ್ಯ ಸರಕಾರ ಪಿಎಫ್‍ಐ ನಿಷೇಧ ನಂತರದ ಪ್ರಕ್ರಿಯೆಗಳ ಸಮರ್ಪಕ ಅನುಷ್ಟಾನಕ್ಕೆ ಸಂಬಂಸಿದಂತೆ ರಾಜ್ಯದ ಎಲ್ಲಾ ಜಿಲ್ಲಾಕಾರಿಗಳಿಗೆ ಅಕಾರ ನೀಡಿ ಸುತ್ತೋಲೆ ಹೊರಡಿಸಿದೆ.